ಐಟಿ ದಾಳಿ ರಾಜಕೀಯ ಪ್ರೇರಿತವಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ
Update: 2019-03-28 15:30 GMT
ಬೆಂಗಳೂರು,ಮಾ.28: ಕಾಂಗ್ರೆಸ್-ಜೆಡಿಎಸ್ ಮುಖಂಡರ ಸಂವಿಧಾನ ವಿರೋಧಿ ಧೋರಣೆ ಸಲ್ಲ. ಐಟಿ ದಾಳಿ ಪೂರ್ವನಿಯೋಜಿತವಲ್ಲವೆಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದ್ದಾರೆ.
ಸಂಸದರು, ಶಾಸಕರು, ಮಂತ್ರಿಗಳ ಮನೆ ಮೇಲೆ ದಾಳಿ ನಡೆದಿಲ್ಲ. ಆ ರಾಜಕೀಯ ಮುಖಂಡರ ನಿಕಟವರ್ತಿಗಳ ಮೇಲೆ ನಡೆದಿದೆ. ಇದು ರಾಜಕೀಯ ಪ್ರೇರಿತ ದಾಳಿಯಲ್ಲ. ದಾಳಿಗೂ ಮೊದಲೇ ಸಿಎಂ ಸುದ್ದಿಗೋಷ್ಠಿ ನಡೆಸಿ, ಇದೀಗ ಐಟಿ ವಿರುದ್ಧ ಪ್ರತಿಭಟನೆ ಮಾಡುವುದು ಸರಿಯಲ್ಲ. ಜೋಡೆತ್ತಿನ ಸರಕಾರ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆ ಬೊಬ್ಬೆ ಹೊಡೆಯುತ್ತಿದೆ ಎಂದು ಅವರು ಟೀಕಿಸಿದ್ದಾರೆ.