ಓ ಮೆಣಸೇ…

Update: 2019-03-31 18:42 GMT

  ನಾನು ಬ್ರಾಹ್ಮಣನಾಗಿರುವ ಕಾರಣ ಚೌಕಿದಾರನಾಗಲು ಸಾಧ್ಯವಿಲ್ಲ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

   ಬ್ರಾಹ್ಮಣೇತರರಿಗೆ ಆರೆಸ್ಸೆಸ್‌ನ ಬಾಗಿಲು ಕಾಯುವ ಚೌಕಿದಾರರಾಗಲು ಶೇ. 100 ಮೀಸಲಾತಿ.

---------------------

ಕಾಂಗ್ರೆಸ್ ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸುವ ಬದಲು ಪಾಕಿಸ್ತಾನದಲ್ಲಿ ಸ್ಪರ್ಧಿಸಿದರೆ ಸುಲಭವಾಗಿ ಗೆಲ್ಲುತ್ತದೆ - ರಾಮ್ ಮಾಧವ್, ಬಿಜೆಪಿ ಕಾರ್ಯದರ್ಶಿ

  ನೀವು ಪಾಕಿಸ್ತಾನವನ್ನು ಭಾರತಕ್ಕೆ ಸೇರಿಸಿ ಅಖಂಡ ಮಾಡಿದಾಗ ಅಲ್ಲೂ ಸ್ಪರ್ಧಿಸುವ ಉದ್ದೇಶವಿದೆಯಂತೆ.

---------------------

  ದೇಶದೆಲ್ಲೆಡೆ ಮೋದಿ ಹವಾ ಇರುವುದರಿಂದ ಇನ್ನು ಎರಡು ಅವಧಿಗೆ ಮೋದಿಯೇ ಪ್ರಧಾನಿಯಾಗುತ್ತಾರೆ - ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ

   ಚೌಕಿದಾರ್ ಜನಾರ್ದನ ಪೂಜಾರಿ ಎಂದು ಇನ್ನೂ ಹಾಕಿಸಿಕೊಂಡಿಲ್ಲವೇ?

---------------------

   ಗೆದ್ದರೆ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳ ಆಸ್ತಿಯಾಗುತ್ತೇನೆ - ಪ್ರಮೋದ್ ಮಧ್ವರಾಜ್, ಉಡುಪಿ-ಚಿಕ್ಕಮಗಳೂರುಕ್ಷೇತ್ರದ ಮೈತ್ರಿ ಅಭ್ಯರ್ಥಿ

ಎರಡೂ ಪಕ್ಷಗಳ ಹೆಸರಲ್ಲಿ ಆಸ್ತಿ ಮಾಡಿಕೊಳ್ಳುತ್ತೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆಯಂತೆ.

---------------------

ಕಾಂಗ್ರೆಸ್‌ನಲ್ಲಿ ಹೆಣ ಹೊರುವವನೂ ನಾನೇ, ಪಲ್ಲಕ್ಕಿ ಹೊರುವವನೂ ನಾನೇ - ಡಿ.ಕೆ. ಶಿವಕುಮಾರ್, ಸಚಿವ

ಸದ್ಯಕ್ಕೆ ಕಾಂಗ್ರೆಸ್‌ನ ಹೆಣ ಹೊರುವುದು ಒಂದು ಬಾಕಿ ಇದೆ.

---------------------

ಈ ಬಾರಿ ಮೋದಿ ಸೋಲಿಸದಿದ್ದರೆ ಅವರೇ ಆಜೀವ ಪ್ರಧಾನಿ - ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ

   ಅಂದರೆ ಮುಂದಿನ ಬಾರಿ ನೀವು ಮೋದಿ ಬಣ ಸೇರುತ್ತೀರಿ ಎಂದಾಯಿತು.

---------------------

ನಾನು, ಡಿಕೆಶಿ ನಿಜವಾದ ಜೋಡೆತ್ತುಗಳು - ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

  ಎತ್ತುಗಳು ಎನ್ನುವ ಬಗ್ಗೆ ಎರಡು ಮಾತಿಲ್ಲ.

---------------------

ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯ ಹಿಂದೆ ಅನೇಕ ಅಪಸ್ವರಗಳಿವೆ - ಜಯಮಾಲಾ, ಸಚಿವೆ

ಕಾಂಗ್ರೆಸ್‌ನೊಳಗೇ ಹೊಂದಾಣಿಕೆಯಿಲ್ಲ, ಇನ್ನು ಜೆಡಿಎಸ್ ಜೊತೆಗೆ ಇರಲು ಅಪಸ್ವರ ಇರದೇ ಇದ್ದೀತೇ?

---------------------

ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಸೋತರೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ನಾನು ಕಾಲಿಡುವುದಿಲ್ಲ - ಜನಾರ್ದನ ಪುಜಾರಿ, ಕಾಂಗ್ರೆಸ್ ಮುಖಂಡ

ನಿಮ್ಮ ಸ್ಥಾನವನ್ನು ವಹಿಸಿಕೊಳ್ಳಲು ಪ್ರಭಾಕರ ಭಟ್ಟರು ತುದಿಗಾಲಲ್ಲಿ ನಿಂತಿದ್ದಾರೆ.

---------------------

  ಈಗೀಗ ವಂಶಾಡಳಿತ ಎಲ್ಲಿಗೆ ತಲುಪಿದೆ ಎಂದರೆ ರಾಜಕಾರಣಿಗೆ ಮಗು ಹುಟ್ಟಿದ ಕೂಡಲೇ ಮುಂದಿನ ಪ್ರಧಾನಿ, ಮುಖ್ಯಮಂತ್ರಿ ಎಂದು ಪ್ರಚಾರ ಮಾಡಲಾಗುತ್ತಿದೆ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ ಬಿಜೆಪಿಯಲ್ಲಿ ಪ್ರಧಾನಿಯಾದ ಬಳಿಕ ಕತೆ ಕಟ್ಟಲಾಗುತ್ತದೆ. ----

-----------------

ಕಳ್ಳರಿಗೆ ಸರಿಯಾಗಿರುವವರೂ ಕಳ್ಳರಾಗಿಯೇ ಕಾಣುತ್ತಾರೆ - ಸಿ.ಟಿ. ರವಿ, ಶಾಸಕ

ಹಾಗೆಂದು ಯುವಕರ ಮೇಲೆ ಕಾರು ಓಡಿಸುವುದೇ?

---------------------

ಜಾತ್ಯತೀತ ಧರ್ಮ ಪಾಲಿಸುವ ಏಕೈಕ ದೇಶ ಭಾರತ - ಉಮಾ ಭಾರತಿ, ಕೇಂದ್ರ ಸಚಿವೆ

ಹೀಗೆ ಹೇಳಿಕೊಂಡೇ ಅಲ್ಪಸಂಖ್ಯಾತರ ಹತ್ಯಾಕಾಂಡ ಮಾಡುವ ಏಕೈಕ ದೇಶವೂ ಭಾರತವೇ ಇರಬೇಕು.

---------------------

ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಬೇಕು ಎಂದು ಪಕ್ಷದ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ - ಪ್ರವೀಣ್ ತೊಗಾಡಿಯಾ, ವಿಹಿಂಪ ಮಾಜಿ ಅಧ್ಯಕ್ಷ

ಸ್ಪರ್ಧಿಸದಂತೆ ತಡೆಯುತ್ತಿರುವ ಒತ್ತಡ ಯಾವುದು?

---------------------

ನಾಯಕ (ಅನಂತಕುಮಾರ್) ಇದ್ದಾಗ ಎಲ್ಲರೂ ಇರುತ್ತಾರೆ. ಆತ ಸತ್ತಾಗ ಯಾರೂ ಇರುವುದಿಲ್ಲ - ವಿ. ಸೋಮಣ್ಣ, ಶಾಸಕ

ಅದಕ್ಕೇ ತಾನೆ ರಾಜಕೀಯ ಎನ್ನುವುದು.

---------------------

ಪ್ರಸ್ತುತ ಮತದಾರರು ರಾಜಕಾರಣಿಗಳು ಹಾಗೂ ಪತ್ರಕರ್ತರಿಗಿಂತ ಸಮರ್ಥರಾಗಿದ್ದಾರೆ - ಅರುಣ್ ಜೇಟ್ಲಿ, ಕೇಂದ್ರ ಸಚಿವ

ಇವಿಎಂ ಸಾಮರ್ಥ್ಯ ಕುರಿತಂತೆ ಸಣ್ಣ ಅನುಮಾನವಿದೆ.

---------------------

ಮಹಾಘಟ ಬಂಧನ್ ಸ್ಥಿತಿ ಕರ್ನಾಟಕದಲ್ಲಿ ಹರಿದ ಬಟ್ಟೆಯಂತಾಗಿದೆ - ಸುರೇಶ್ ಕುಮಾರ್, ಬಿಜೆಪಿ ವಕ್ತಾರ

   ಅದನ್ನು ನೀವು ಯಾಕೆ ಧರಿಸಲು ಹೊರಟಿದ್ದೀರಿ?

---------------------

ಎಚ್‌ಡಿಕೆ - ಡಿಕೆಶಿ ಎಂಬ ಗೂಳಿಗಳು ಚುನಾವಣೆ ಮುಗಿಯುತ್ತಿದ್ದಂತೆ ಪರಸ್ಪರ ಗುದ್ದಾಟದಲ್ಲಿ ತೊಡಗಿ ತಿವಿದುಕೊಳ್ಳಲಿವೆ - ಕೆ.ಎಸ್. ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ

   ಆ ಗೂಳಿಗಳ ಗುದ್ದಾಟದ ಮಧ್ಯೆ ಈ ತೋಳಕ್ಕೇನು ಕೆಲಸ?

---------------------

ಸುಮಲತಾ ಮುಖದಲ್ಲಿ ಅಂಬರೀಷ್ ಸಾವಿನ ನೋವಿನ ಛಾಯೆಯೇ ಇಲ್ಲ - ಕುಮಾರಸ್ವಾಮಿ, ಮುಖ್ಯಮಂತ್ರಿ

 ಗ್ಲಿಸರಿನ್ ಹಾಕದೆ ನಿಮ್ಮಷ್ಟು ಸಲೀಸಾಗಿ ಅಳುವುದಕ್ಕೆ ಅವರಿಗೆ ಬಾರದು.

---------------------

 ಜೋಡೆತ್ತಿನ ಸರಕಾರ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ಬೊಬ್ಬೆ ಹೊಡೆಯುತ್ತಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಆದರೆ ಕಳ್ಳನೇ ಕುಂಬಳಕಾಯಿ ಬಗ್ಗೆ ಮಾತನಾಡುವುದು ಅಷ್ಟು ಸರಿಯೆನಿಸುವುದಿಲ್ಲ.

---------------------

ಸ್ವಂತ ಮನೆಯಿಲ್ಲದ ದೇಶದ ಏಕೈಕ ಸಂಸದ ನಾನು - ಪ್ರತಾಪ ಸಿಂಹ, ಸಂಸದ

ಪತ್ನಿಯ ಹೆಸರಲ್ಲಿ ಸೈಟು ಪಡೆದುಕೊಂಡದ್ದು ಇದಕ್ಕೇ ಇರಬೇಕು.

---------------------

ಇಂದಿನ ಮಕ್ಕಳಿಗೆ ಕನ್ನಡ ಸಂಸ್ಕೃತಿಯ ಇತಿಹಾಸವನ್ನು ಪರಿಚಯಿಸುವ ಅಗತ್ಯವಿದೆ - ಡಾ. ಚಿದಾನಂದ ಮೂರ್ತಿ, ಸಂಶೋಧಕ

ನೀವು ಆರೆಸ್ಸೆಸ್ ಸಂಸ್ಕೃತಿಯನ್ನು ಪರಿಚಯಿಸಿದ್ದೇ ಹೆಚ್ಚು.

---------------------

 ದ.ಕ. ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದ ಬಳಿಕ ಒಂದು ವರ್ಷದಲ್ಲಿ ಒಂದೇ ಒಂದು ಕೋಮು ಗಲಭೆ ನಡೆದಿಲ್ಲ - ನಳಿನ್ ಕುಮಾರ್ ಕಟೀಲು, ಸಂಸದ ಬೆಂಕಿ ಹಚ್ಚಲು ವಿಫಲರಾದವರ ಹತಾಶೆಯ ಮಾತು.

---------------------

ನನ್ನದು ಸ್ವಾತಿ ನಕ್ಷತ್ರ, ನನಗೆ ಮಾಟ ಮಾಡಿದರೆ ಮಾಡಿದವರಿಗೇ ತಟ್ಟುತ್ತೆ - ಎಚ್.ಡಿ. ರೇವಣ್ಣ, ಸಚಿವ

ಸ್ವಾರ್ಥ ನಕ್ಷತ್ರ ಇರಬೇಕು, ಸರಿಯಾಗಿ ವಿಚಾರಿಸಿ.

---------------------

 ಆಗಾಗ ಸರ್ವಾಧಿಕಾರಿ ಪ್ರವೃತ್ತಿ ತಪ್ಪೇನಲ್ಲ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ

   ಇಂದಿರಾ ಗಾಂಧಿಯ ತುರ್ತುಪರಿಸ್ಥಿತಿಯ ಸಮರ್ಥನೆಯೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!