ಗಿರೀಶ್ ಕಾರ್ನಾಡ್ ಬಗ್ಗೆ ಪುತ್ರ ರಘು ಕಾರ್ನಾಡ್ ರ ಭಾವನಾತ್ಮಕ ಪೋಸ್ಟ್

Update: 2019-06-13 08:55 GMT

“ಸೋಫಾದಲ್ಲಿ ಕುಳಿತು, ಒಂದು ಗ್ಲಾಸ್ ವಿಸ್ಕಿ ಹಿಡಿದುಕೊಂಡು, ಇತಿಹಾಸ, ಹಾಡು, ಜನಪದ ಮತ್ತು ತತ್ವಶಾಸ್ತ್ರಗಳನ್ನು ಮೆಲುಕು ಹಾಕುತ್ತಿದ್ದ ಅಪ್ಪನ ಚಿತ್ರ ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ನಾನು ಪ್ರೀತಿಸಿದ ವ್ಯಕ್ತಿ ಅವರು.

ಹಲವು ಸ್ನೇಹಿತರ ಹೇಳಿದಂತೆ ಅವರಿಗೆ ಚೊಕ್ಕವಾದ ಸಮಯಪ್ರಜ್ಞೆಯಿತ್ತು. ಕಳೆದ ವಾರ, ಗೆಳೆಯರೊಬ್ಬರ ಮದುವೆಗಾಗಿ ನಾನು ಮತ್ತು ಸಹೋದರಿ ಇಬ್ಬರೂ ಮನೆಯಲ್ಲೇ ಇದ್ದೆವು. ಶನಿವಾರ ಸಂಜೆ ಅರ್ಶಿಯಾ ಸತ್ತಾರ್ ಜೊತೆ ಅವರು ಆಡಿಯೋ ಸಂದರ್ಶನಗಳನ್ನು ಪೂರ್ತಿಗೊಳಿಸಿದರು. ರವಿವಾರ ಸಂಜೆ ಕುಟುಂಬದವರೆಲ್ಲರೂ ಮನೆಯ ಟೆರೇಸ್ ನಲ್ಲಿ ಕುಳಿತಿದ್ದೆವು. ನಾನು ಅವರಿಗೆ ಫಿಸಿಯೋ ನೀಡಿದರೆ, ನನ್ನ ಸಹೋದರಿ ಅವರು ಉಗುರುಗಳನ್ನು ಕತ್ತರಿಸಿದರು. ಅವರ ದೇಹದಲ್ಲಿನ ಕೆಲ ಹೊಸ, ಸಮಸ್ಯೆಗಳ ಬಗ್ಗೆ ನಾವು ಮಾತನಾಡಿದೆವು. ಅದು ಬೇಸರದ ವಿಷಯವಾಗಿತ್ತು. ಸೋಮವಾರ ಬೆಳಗ್ಗೆ ಅವರು ನಿಧನರಾದರು.

ಅಂದಿನಿಂದ ನನ್ನ ಮನಸ್ಸು ಮತ್ತು ಮನೆ ಕೊಂಕಣಿ, ಕನ್ನಡ, ತಮಿಳು, ಮಲಯಾಳಂ, ಇಂಗ್ಲಿಷ್, ಹಿಂದಿ ಭಾಷೆಗಳಿಂದ ತುಂಬಿ ತುಳುಕುತ್ತಿದೆ. ಇದು ನನ್ನ ತಂದೆಗೆ ನೀಡಿದ ಗೌರವ ಎಂದೆನಿಸಿತು.

ಅವರ ಬದುಕು ಮತ್ತು ಕೆಲಸಗಳಿಂದ ನಿಮ್ಮ ಬದುಕು ಹೇಗೆ ಶ್ರೀಮಂತಗೊಂಡಿದೆ ಎನ್ನುವ ನಿಮ್ಮ ಹಲವು ಸಂದೇಶಗಳಿಗಾಗಿ ಧನ್ಯವಾದಗಳು. ಇದಕ್ಕೆ ವ್ಯತಿರಿಕ್ತವಾದುದು ಕೂಡ ಸತ್ಯ. ಗುರುಗಳು, ಸಹೋದರಿಯರು, ಮಹಿಳೆಯರು, ಸ್ನೇಹಿತರು, ನಿರ್ದೇಶಕರು, ವಿದ್ಯಾರ್ಥಿಗಳು, ಪ್ರಕಾಶಕರು, ನಟರು, ಓದುಗರು, ವಿರೋಧಿಗಳು, ಸಹಾಯಕರು, ಕೆಲ ಪ್ರಮುಖ ಚಾಲಕರು ಹಾಗು ಕುಡಿತದ ಜೊತೆಗಾರರು ಅವರ ಬದುಕು ಮತ್ತು ಕೆಲಸಗಳನ್ನು ಶ್ರೀಮಂತಗೊಳಿಸಿದರು, ಉನ್ನತಗೊಳಿಸಿದರು. ಅವರ ಕೊನೆಯ ಕೆಲ ವಾರಗಳಲ್ಲಿ ಮತ್ತು ಕೆಲ ಗಂಟೆಗಳಲ್ಲೂ ನಾನು ಈ ಹೆಸರುಗಳನ್ನು ಕೇಳಿದ್ದೇನೆ. ಅಸಾಧಾರಣ ವ್ಯಕ್ತಿಯನ್ನು ಬೆಳೆಸಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು”.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News