ಓ ಮೆಣಸೇ...

Update: 2019-07-14 18:33 GMT

*ಸಂಘಟನೆಗಳ ಮೂಲಕ ಸಮಾಜ ಕಟ್ಟುವ ಕೆಲಸ ಆಗಬೇಕಿದೆ - ನಳಿನ್ ಕುಮಾರ್ ಕಟೀಲು, ಸಂಸದ
  ಸಮಾಜವನ್ನು ಕೆಡವುವ ಕೆಲಸ ಮುಗಿಯಿತೇ?

---------------------

ಒಂದು ಪಕ್ಷ ಎಂದರೆ ಒಂದು ಕುಟುಂಬ ಇದ್ದಂತೆ. ಎಲ್ಲರಿಗೂ ಬೈಯುವ, ತೆಗಳುವ ಹಕ್ಕಿದೆ - ಡಿ.ಕೆ. ಶಿವಕುಮಾರ್, ಸಚಿವ
ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿ ನಡು ಬೀದಿಯಲ್ಲಿ ನಿಂತು ಬೈದರೆ, ತೆಗಳಿದರೆ ಚೆನ್ನಾಗಿರುವುದಿಲ್ಲ.

---------------------

  ಸೆಮಿಫೈನಲ್‌ನಲ್ಲಿ ನಮ್ಮ ಸೋಲು ಒಪ್ಪಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ
- ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ನಾಯಕ
ನರೇಂದ್ರ ಮೋದಿಯವರ ಜೊತೆಗೆ ಹೇಳಿ ಇವಿಎಂ ಮೂಲಕ ಫಲಿತಾಂಶ ಪ್ರಕಟವಾಗುವಂತೆ ಮಾಡಿ.

---------------------

ದೇವರನ್ನು ಕೇವಲ ಗುಡಿಗೇ ಸೀಮಿತಗೊಳಿಸಬಾರದು - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಗುಡಿಯಾಚೆಗೂ ದೇವರ ಹುಂಡಿ ಸ್ಥಾಪನೆಗೆ ನಿರ್ಧರಿಸಿದ್ದೀರಾ?

---------------------

ಅತೃಪ್ತ ಶಾಸಕರ ರಾಜೀನಾಮೆಯಲ್ಲಿ ನಾವು ಯಾವುದೇ ಕುದುರೆ ವ್ಯಾಪಾರ ನಡೆಸಿಲ್ಲ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಅದು ಕುದುರೆ ವ್ಯಾಪಾರ ಅಲ್ಲ,ಕತ್ತೆ ವ್ಯಾಪಾರ ಎನ್ನುವುದು ದೇಶಕ್ಕೆ ಗೊತ್ತು.

---------------------

ಪಕ್ಷಾಂತರಿಗಳು ನಾಯಿಗಳಿಗಿಂತ ಕಡೆ- ವಾಟಾಳ್ ನಾಗರಾಜ್, ವಾಟಾಳ್ ಪಕ್ಷದ ಅಧ್ಯಕ್ಷ
ನಾಯಿಗಳು ಹಾಗೆಲ್ಲ ಪಕ್ಷಾಂತರ ಮಾಡಲ್ಲ.

---------------------

ಅತ್ಯಾಚಾರಿಗಳಿಗೆ ಸೌದಿ ಮಾದರಿಯ ಶಿಕ್ಷೆಯಾಗಬೇಕು - ಶಕುಂತಳಾ ಶೆಟ್ಟಿ, ಮಾಜಿ ಶಾಸಕಿ
ಸದ್ಯಕ್ಕೆ ಸಂವಿಧಾನ ಬದ್ಧ ಶಿಕ್ಷೆಯನ್ನು ಜಾರಿಗೊಳಿಸಲು ನಿಮ್ಮ ಕೊಡುಗೆಯೇನು ತಿಳಿಸಿ.

---------------------

ನಾನು ಹೆಸರಿಗೆ ಮಾತ್ರ ಜೆಡಿಎಸ್ ಅಧ್ಯಕ್ಷನಾಗಿದ್ದೆ - ಎಚ್.ವಿಶ್ವನಾಥ್, ಶಾಸಕ
ಈಗ ಹೆಸರಿಗೆ ಮಾತ್ರ ಸಚಿವನಾಗುವ ಆಸೆಯೇ?
---------------------

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಕೊಡುಗೆ ಇದೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
  ನಿಮ್ಮ ಯಶಸ್ಸಿನ ಹಿಂದೆ ಎಷ್ಟು ಮಹಿಳೆಯರ ಕೊಡುಗೆ ಇದೆ?
---------------------
 
ರಾಜೀನಾಮೆ ಪರ್ವ ಆರಂಭಿಸಿದ್ದೇ ರಾಹುಲ್ ಗಾಂಧಿ - ರಾಜನಾಥ್‌ಸಿಂಗ್, ಕೇಂದ್ರ ಸಚಿವ
  ಈ ದೇಶದಲ್ಲಿ ಅಷ್ಟರ ಮಟ್ಟಿಗಾದರೂ ನೈತಿಕತೆ ಉಳಿದಿದೆಯಲ್ಲ?
---------------------
ಸೇನಾ ಬಲ ಬಳಸಿ ಕಾಶ್ಮೀರ ಬಿಕ್ಕಟ್ಟು ಇತ್ಯರ್ಥ ಪಡಿಸಲು ಅಸಾಧ್ಯ - ಫಾರೂಕ್ ಅಬ್ದುಲ್ಲಾ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ
ಅದಕ್ಕಾಗಿಯೇ ಕೇಂದ್ರ ಸೇನೆಯ ಬಲ ಬಳಸುತ್ತಿರುವುದು.

---------------------

ಸ್ಪೀಕರ್ ರಮೇಶ್ ಕುಮಾರ್ ಹೆಸರಿಗಷ್ಟೇ ಸತ್ಯ ಹರಿಶ್ಚಂದ್ರ
- ಸೊಗಡು ಶಿವಣ್ಣ, ಮಾಜಿ ಸಚಿವ
  ಸಂತೆಯಲ್ಲಿ ಹೆಂಡತಿ, ಮಕ್ಕಳನ್ನು ಮಾರಲು ಅವರಿಗೆ ತಲೆಕೆಟ್ಟಿದೆಯೇ?

---------------------
ಜ್ಞಾನದಾನವೇ ಎಲ್ಲ ಮಠಗಳ ಪ್ರಮುಖ ಕರ್ತವ್ಯ - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಕೆಲವು ಮಠಗಳಲ್ಲಿ ಮೈದಾನವೂ ಕರ್ತವ್ಯವಾಗಿದೆ.

---------------------
ಹೆಚ್ಚುತ್ತಿರುವ ಜನಸಂಖ್ಯೆಯು ವಿಶ್ವದ ಪ್ರಮುಖ ಸಮಸ್ಯೆಯಾಗಿದೆ- ಮಮತಾ ಬ್ಯಾನರ್ಜಿ, ಪ.ಬಂ. ಮುಖ್ಯಮಂತ್ರಿ
ಬಂಗಾಳದ ಸಮಸ್ಯೆಗೆ ಮೊದಲು ಉತ್ತರ ಕಂಡುಕೊಳ್ಳಿ.

---------------------

ಮುಂದೊಂದು ದಿನ ಪ್ರಧಾನಿ ನರೇಂದ್ರ ಮೋದಿ ದೇಶವನ್ನೇ ಮಾರಲಿದ್ದಾರೆ. - ಅಧಿರ್ ರಂಜನ್ ಚೌಧರಿ, ಕಾಂಗ್ರೆಸ್ ನಾಯಕ
ಮಾರುವುದಕ್ಕೆ ಇನ್ನು ಉಳಿದಿರುವುದಾದರೂ ಏನು?

---------------------

ಬಾಲಕೋಟ್ ದಾಳಿಯ ಬಳಿಕ ಕಾಶ್ಮೀರದ ಸಮಸ್ಯೆ ಕಡಿಮೆಯಾಗಿದೆ - ನಿತ್ಯಾನಂದ ರಾಯ್, ಕೇಂದ್ರ ಸಚಿವ
ಮತ್ತೆ ಅಲ್ಲಿ ಪ್ರತಿ ದಿನ ನಡೆಯುತ್ತಿರುವ ಎನ್‌ಕೌಂಟರ್‌ಗಳು ಯಾರ ವಿರುದ್ಧ ?

---------------------

ಬಾಬರಿ ಮಸೀದಿ ಕೆಡವಿದಾಗ ಶ್ರೀರಾಮನಿಗೂ ಕೂಡ ನೋವಾಗಿರಬೇಕು - ಶಬಾನಾ ಆಝ್ಮಿ, ನಟಿ
ಗಾಂಧಿಯನ್ನು ಕೆಡವಿದಾಗಲೇ ರಾಮ ಕಲ್ಲಾಗಿಬಿಟ್ಟ.

---------------------
ಹಾದಿ ತಪ್ಪದ ಏಕೈಕ ಪಕ್ಷ ಬಿಜೆಪಿ
- ನಳಿನ್ ಕುಮಾರ್ ಕಟೀಲು, ಸಂಸದ
ಗೋಳ್ವಾಲ್ಕರ್ ಹಾಕಿ ಕೊಟ್ಟ ಹಾದಿ ಅದು, ತಪ್ಪುವುದು ಹೇಗೆ ಸಾಧ್ಯ?

---------------------

ರಾಜ್ಯ ಸರಕಾರದ ಇಂದಿನ ದುಃಸ್ಥಿತಿಗೆ ಜಾತಿ ರಾಜಕಾರಣವೇ ಪ್ರಮುಖ ಕಾರಣ - ಅನಂತಕುಮಾರ್ ಹೆಗಡೆ, ಸಂಸದ
ಮುಖ್ಯವಾಗಿ ಬ್ರಾಹ್ಮಣ ಜಾತಿ ರಾಜಕಾರಣ.

---------------------

ನಮ್ಮ ದೇಹದಲ್ಲಿ ಆರೋಗ್ಯ ಏರುಪೇರಾದಂತೆ ರಾಜಕಾರಣದಲ್ಲೂ ಆಗುತ್ತ್ತಿರುತ್ತದೆ.- ಆರ್.ವಿ. ದೇಶಪಾಂಡೆ, ಸಚಿವ
ದೇಹದ ಆರೋಗ್ಯವಲ್ಲ, ಮೆದುಳಿನ ಆರೋಗ್ಯ ಏರುಪೇರಾದಂತಿದೆ.

---------------------

ರಾಜಕಾರಣದಲ್ಲಿ ಯಾರನ್ನೂ ನಂಬುವಂತಿಲ್ಲ- ಸಿದ್ದರಾಮಯ್ಯ, ಮಾಜಿಮುಖ್ಯಮಂತ್ರಿ
ನಿಮ್ಮನ್ನು ನೋಡಿದಾಗಲೆಲ್ಲ ದೇವೇಗೌಡರು ಇದನ್ನೇ ಹೇಳುತ್ತಿರುತ್ತಾರೆ.

---------------------

ಬಿಜೆಪಿ ಜೊತೆ ಅಧಿಕಾರ ಹಂಚಿಕೊಳ್ಳುವ ಬೆಳವಣಿಗೆ ಸದ್ಯಕ್ಕಿಲ್ಲ- ಎಚ್.ಡಿ. ರೇವಣ್ಣ, ಸಚಿವ
ಅಂದರೆ ಮುಂದಕ್ಕೆ ಇದೆ ಎಂದಾಯಿತು.

---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!