ಐಎಂಎ ವಂಚನೆ ಪ್ರಕರಣ: ಜು.29 ಕ್ಕೆ ರೋಶನ್-ಝಮೀರ್ ವಿಚಾರಣೆ
Update: 2019-07-28 15:22 GMT
ಬೆಂಗಳೂರು, ಜು.29: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವರಾದ ರೋಶನ್ ಬೇಗ್, ಝಮೀರ್ ಅಹ್ಮದ್ ಖಾನ್ ಅವರು ನಾಳೆ(ಜು.29) ಸಿಟ್ ತನಿಖಾಧಿಕಾರಿಗಳ ಮುಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಜು.24ರಂದು ಸಿಟ್ ತನಿಖಾಧಿಕಾರಿಗಳು, ಐಎಂಎ ಪ್ರಕರಣ ಸಂಬಂಧ ಜು.29ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವರಿಬ್ಬರಿಗೂ ನೋಟಿಸ್ ನೀಡಿದ್ದರು. ಈ ಹಿನ್ನಲೆಯಲ್ಲಿ ಅವರು, ವಿಚಾರಣೆ ಹಾಜರಾಗುವರು ಎಂದು ತಿಳಿದುಬಂದಿದೆ.
ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್, ಈಗಾಗಲೇ ಮಾಜಿ ಸಚಿವ ರೋಶನ್ ಬೇಗ್ ತನ್ನಿಂದ 400 ಕೋಟಿ ರೂ. ಪಡೆದಿರುವುದಾಗಿ ಗಂಭೀರ ಆರೋಪ ಮಾಡಿದಲ್ಲದೆ, ಧ್ವನಿ ಸುರುಳಿಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಈ ಹಿನ್ನಲೆಯಲ್ಲಿ ಸಿಟ್ ತನಿಖಾಧಿಕಾರಿಗಳು ರೋಶನ್ ಬೇಗ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ.