ಸುಭದ್ರ ಭಾರತ ಕಟ್ಟಬೇಕಿದೆ: ಡಾ.ಜಿ.ಪರಮೇಶ್ವರ್
Update: 2019-08-15 12:59 GMT
ಬೆಂಗಳೂರು, ಆ.15: ದೇಶಕ್ಕೀಗ 73 ವರ್ಷ. ಹಲವು ಮೈಲುಗಲ್ಲುಗಳನ್ನು ದಾಟಿ, ಲೋಕವೇ ನಿಬ್ಬೆರಗಾಗಿ ನೋಡುವಂತಹ ದೇಶವಾಗಿ ಭಾರತ ಮಾರ್ಪಟ್ಟಿದೆ. ಇನ್ನು ಅನೇಕ ಸವಾಲುಗಳಿಂದ ದೇಶವನ್ನು ಮುಕ್ತಗೊಳಿಸಬೇಕಿದೆ. ನಾವೆಲ್ಲರೂ ಜೊತೆಯಾಗಿ ಕೂಡಿ ಸುಭದ್ರ ಭಾರತವನ್ನು ಕಟ್ಟಬೇಕಿದೆ ಎಂದು ಮಾಜಿ ಉಪ ಮಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.