ವಿಧಾನಸೌಧದ ಮೆಟ್ಟಿಲುಗಳಿಗೆ ನೂತನ ಸಚಿವ ಶ್ರೀರಾಮುಲು ನಮನ

Update: 2019-08-20 12:40 GMT

ಬೆಂಗಳೂರು, ಆ.20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾದ ಬಳಿಕ ವಿಧಾನಸೌಧಕ್ಕೆ ಆಗಮಿಸಿದ ನೂತನ ಸಚಿವ ಬಿ.ಶ್ರೀರಾಮುಲು, ಪಶ್ಚಿಮದ್ವಾರದ ಮೆಟ್ಟಿಲುಗಳಿಗೆ ನಮಸ್ಕರಿಸುವ ಮೂಲಕ ಗಮನ ಸೆಳೆದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಹತ್ತು ವರ್ಷ ಅಧಿಕಾರ ಇಲ್ಲದೇ ಇದ್ದೆ. ಜನರು ಕೊಟ್ಟ ಭಿಕ್ಷೆಯಿಂದ ಈ ಸ್ಥಾನದಲ್ಲಿ ಇದ್ದೇನೆ. ಯಾವುದೇ ಖಾತೆ ಕೊಟ್ಟರೂ ಕಾಯ ವಾಚ ಮನಸ ಕೆಲಸ ಮಾಡ್ತೇನೆ. ಖಾತೆಗಳನ್ನು ಯಾವಾಗ ಹಂಚಿಕೆ ಮಾಡುತ್ತಾರೋ ಗೊತ್ತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News