ಸರಕಾರಿ ಜಮೀನಿನಲ್ಲಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣ: ಸರಕಾರ, ಅಮತಾನಂದಮಯಿ ಟ್ರಸ್ಟ್‌ಗೆ ಹೈಕೋರ್ಟ್ ನೋಟಿಸ್

Update: 2019-08-23 18:45 GMT

ಬೆಂಗಳೂರು, ಆ.23: ಅನಾಥ ಮಕ್ಕಳಿಗೆ ಹಾಗೂ ವಿಧವೆಯರಿಗೆ ಅನಾಥಾಶ್ರಮ ನಿರ್ಮಾಣ ಮಾಡಲು ಸರಕಾರ ನೀಡಿದ ಜಮೀನಿನಲ್ಲಿ ಮಾತಾ ಅಮತಾನಂದಮಯಿ ಟ್ರಸ್ಟ್ ಎಂಜಿನಿಯರಿಂಗ್ ಕಾಲೇಜು ನಿರ್ಮಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರ, ಅಮತಾನಂದಮಯಿ ಟ್ರಸ್ಟ್‌ಗೆ ನೋಟಿಸ್ ಜಾರಿಗೊಳಿಸಿದೆ. 

ಈ ಕುರಿತು ಬೆಂಗಳೂರು ನಗರದ ಕವಿತಾ ಸೇರಿ ಐವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ಅರ್ಜಿದಾರರ ಪರ ವಾದಿಸಿದ ವಕೀಲ ಟಿ.ಎಂ.ಕಷ್ಣಪ್ಪ ಅವರು, ವಿಧವೆಯರಿಗೆ 2 ಸಾವಿರ ಮನೆ, ಅನಾಥ ಮಕ್ಕಳಿಗೆ ಅನಾಥಾಶ್ರಮ ನಿರ್ಮಾಣ ಮಾಡಲು ರಾಜ್ಯ ಸರಕಾರ ಅಮತಾನಂದಮಯಿ ಟ್ರಸ್ಟ್‌ಗೆ ನಗರದ ಕಸವನಹಳ್ಳಿಯಲ್ಲಿ ಜಮೀನು ನೀಡಿತ್ತು. ಆದರೆ, ಟ್ರಸ್ಟ್‌ನವರು ಖಾಸಗಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣ ಮಾಡಿ ಕೋಟ್ಯಂತರ ರೂ.ಹಣ ಸಂಪಾದಿಸುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯ ಪೀಠವು ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಆ.30ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News