ಬೆಂಗಳೂರು: ನಿಷೇಧಿತ ಗಣೇಶ ಮೂರ್ತಿ ವಿಸರ್ಜನೆಗೆ ದಂಡ
ಬೆಂಗಳೂರು, ಸೆ. 1: ಗಣೇಶನ ಹಬ್ಬದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗಣೇಶಮೂರ್ತಿಗಳ ವಿಸರ್ಜನೆ ಮಾಡಲು ಕೆರೆಗಳು, ಸ್ಥಿರ ಕಲ್ಯಾಣಿ, ತಾತ್ಕಾಲಿಕ ಹೊಂಡಗಳು ಹಾಗೂ ಮೊಬೈಲ್ ಟ್ಯಾಂಕರ್‌ಗಳನ್ನು ನಿರ್ಮಿಸಲಾಗಿದೆ. ತಾತ್ಕಾಲಿಕ ವಿಸರ್ಜನಾ ಸ್ಥಳಗಳು ಹಾಗೂ ಸಂಚಾರಿ ಟ್ಯಾಂಕರ್‌ಗಳ ಸ್ಥಳಗಳ ವಿವರಗಳನ್ನು ಪಾಲಿಕೆಯ ವೆಬ್‌ಸೈಟ್ bbmp.gov.inನಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ದೂ.ಸಂಖ್ಯೆ 080- 2222 1188 ಸಂರ್ಪಕಿಸಬಹುದು.
ವಿಸರ್ಜನೆಗೆ ವ್ಯವಸ್ಥೆ
ಪೂರ್ವ, ಪಶ್ಚಿಮ, ದಕ್ಷಿಣ, ಮಹದೇವಪುರ, ಬೊಮ್ಮನಹಳ್ಳಿ, ದಾಸರಹಳ್ಳಿ, ಯಲಹಂಕ, ಆರ್. ಆರ್.ನಗರ ಸೇರಿದಂತೆ ಒಟ್ಟು 400 ಮೊಬೈಲ್ ಟ್ಯಾಂಕರ್ ಹಾಗೂ 37 ಕಲ್ಯಾಣಿ ಹಾಗೂ ತಾತ್ಕಾಲಿಕ ಹೊಂಡಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಲಾಗಿದೆ.
ಕೆರೆಗಳು
ವಾರ್ಡ್-1 ಯಲಹಂಕ ಕೆರೆ, ವಾರ್ಡ್-25 ಚಳ್ಳಕೆರೆ, ವಾರ್ಡ್-130 ಮಲ್ಲತಹಳ್ಳಿ ಕೆರೆ, ವಾರ್ಡ್-3 ಅಲ್ಲಾಳಸಂದ್ರ ಕೆರೆ, ವಾರ್ಡ್-35 ಸ್ಯಾಂಕಿ ಟ್ಯಾಂಕ್,ವಾರ್ಡ್-150 ಕೈಗೊಂಡನಹಳ್ಳಿ ಕೆರೆ, ವಾರ್ಡ್-3 ಅಟ್ಟೂರು ಕೆರೆ, ವಾರ್ಡ್-39 ಚೊಕ್ಕಸಂದ್ರ ಕೆರೆ,ವಾರ್ಡ್-150 ಕಸವನಹಳ್ಳಿ ಕೆರೆ, ವಾರ್ಡ್-5 ಕೋಗಿಲು ಕೆರೆ, ವಾರ್ಡ್-54 ಸಾದರಮಂಗಳ ಕೆರೆ. ವಾರ್ಡ್-150 ದೊಡ್ಡಕೇನೇನಹಳ್ಳಿ ಕೆರೆ, ವಾರ್ಡ್-5 ರಾಚನಹಳ್ಳಿ ಕೆರೆ, ವಾರ್ಡ್ -72 ಹೇರೋಹಳ್ಳಿ ಕೆರೆ, ವಾರ್ಡ್-151 ಮೇಸ್ತ್ರಿಪಾಳ್ಯ ಕೆರೆ, ವಾರ್ಡ್-5 ಜಕ್ಕೂರುಕರೆ (ಸಂಪಿಗೆಹಳ್ಳಿ ಕೆರೆ), ವಾರ್ಡ್-85 ಮೊನ್ನೆಕೊಳಲು ಕೆರೆ, ವಾರ್ಡ್-167 ಯಡಿಯೂರು ಕೆರೆ, ವಾರ್ಡ್-5 ಪಳನಹಳ್ಳಿ ಕೆರೆ, ವಾರ್ಡ್-90 ಹಲಸೂರು ಕೆರೆ, ವಾರ್ಡ್- 184 ದೊರೆಕೆರೆ, ವಾರ್ಡ್-10 ದೊಡ್ಡ ಬೊಮ್ಮಸಂದ್ರ ಕೆರೆ, ವಾರ್ಡ್- 129 130 ಉಳ್ಳಾಲ ಕೆರೆ, ವಾರ್ಡ್-191 ಸಿಂಗಸಂದ್ರ ಕೆರೆ.
ನಿಷೇಧಿತ ವಸ್ತುನಿಂದ ಗಣೇಶ ಮೂರ್ತಿ ತಯಾರಿಸುವುದು ಮತ್ತು ಮಾರಾಟ ಮಾಡುವುದು, ವಿಸರ್ಜನೆ ಮಾಡುವುದು ಶಿಕ್ಷಾರ್ಹ. ಇದಕ್ಕೆ 10 ಸಾವಿರ ರೂ.ವರೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು. ಗಣೇಶ ಮೂರ್ತಿಗಳ ವಿಸರ್ಜನೆಗೆ ಬಿಬಿಎಂಪಿ ವ್ಯವಸ್ಥೆ ಮಾಡಿರುವ ಕಲ್ಯಾಣಿಗಳು, ಪುಷ್ಕರಣಿಗಳು ಹಾಗೂ ಸಂಚಾರಿ ಟ್ಯಾಂಕರ್‌ಗಳಲ್ಲಿ ಪಿ.ಓ.ಪಿಯಿಂದ ತಯಾರಿಸಿದ ಹಾಗೂ ವಿಷಕಾರಿ ರಾಸಾಯನಿಕ ಬಣ್ಣ ಲೇಪಿಸಿದ ಮೂರ್ತಿಗಳನ್ನು ಸರ್ಜಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಯೋಜನೆ ಮಾಡಲು ಪರವಾನಗಿ ಪಡೆಯುವುದು ಕಡ್ಡಾಯ. ಪರವಾನಗಿ ಪಡೆಯಲು ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರಗಳು ಸಂಬಂಧಿಸಿದ ಪಾಲಿಕೆಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ.