ಗುರುಮಿಠಕಲ್ ಕ್ಷೇತ್ರಕ್ಕೆ ಅನುದಾನ ಕಡಿತ: ಬಿಎಸ್‌ವೈಗೆ ಅಭಿನಂದನೆ ಸಲ್ಲಿಸಿ ಎಚ್‌ಡಿಕೆ ಲೇವಡಿ

Update: 2019-09-07 14:16 GMT

ಬೆಂಗಳೂರು, ಸೆ. 7: ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ ಎಂದು ನಾಮ ಪರಿವರ್ತನೆ ಮಾಡಿದ ದಿನದಂದೆ ಕಲಬುರಗಿ ಜಿಲ್ಲೆಯ ಗುರುಮಿಠಕಲ್ ಮತಕ್ಷೇತ್ರಕ್ಕೆ ನೀಡಿದ 4.50 ಕೋಟಿ ರೂ.ಅನುದಾನವನ್ನು ಕಡಿತಗೊಳಿಸಿದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ಷೇಪಿಸಿದ್ದಾರೆ.

ಶನಿವಾರ ಈ ಸಂಬಂಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಅನುದಾನ ಕಡಿತಗೊಳಿಸಿದ್ದಕ್ಕೆ ಸಮಸ್ತ ಗುರುಮಿಠಕಲ್ ಮತಕ್ಷೇತ್ರದ ನಾಗರಿಕರ ಪರವಾಗಿ ಮುಖ್ಯಮಂತ್ರಿ ಯಡಿಯೂರಪ್ಪಗೆ ತುಂಬು ಹೃದಯದ ಅಭಿನಂದನೆಗಳು ಎಂದು ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News