ಓ ಮೆಣಸೇ…
ಸರ್ವ ಜನಾಧರಿತ ರಾಜಕೀಯ ಕಾಂಗ್ರೆಸ್‌ನ ಧ್ಯೇಯವಾಗಿದೆ - ವೀರಪ್ಪ ಮೊಯ್ಲಿ, ಕಾಂಗ್ರೆಸ್ ನಾಯಕ
ಆರೆಸ್ಸೆಸ್‌ನವರನ್ನೂ ತಬ್ಬಿಕೊಂಡರೆ ಸರ್ವಜನರನ್ನು ಆಧರಿಸಿದಂತಾಗುತ್ತದೆ.
---------------------
ಬ್ಯಾಂಕ್ ವಿಲೀನದ ಬಳಿಕ ಒಬ್ಬನೇ ಒಬ್ಬ ನೌಕರನನ್ನು ಕೆಲಸದಿಂದ ತೆಗೆಯುವುದಿಲ್ಲ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ವಿಲೀನಕ್ಕೆ ಮೊದಲೇ ತೆಗೆದು ಆಗಿರಬೇಕು.
---------------------
ರಾಹುಲ್ ಗಾಂಧಿ ರಾಜಕೀಯ ಬಾಲಾಪರಾಧಿಯಂತೆ ವರ್ತಿಸುತ್ತಿದ್ದಾರೆ - ಸತ್ಯಪಾಲ್ ಮಲಿಕ್, ಜಮ್ಮು-ಕಾಶ್ಮೀರದ ರಾಜ್ಯಪಾಲ
ತಾವೇಕೆ ಕಾಶ್ಮೀರದ ಜೈಲರ್ ಥರ ವರ್ತಿಸುತ್ತಿದ್ದೀರಿ?
---------------------
ನಾನು ದ್ವೇಷ ರಾಜಕಾರಣದ ಬಲಿಪಶು - ಡಿ.ಕೆ. ಶಿವಕುಮಾರ್, ಮಾಜಿ ಸಚಿವ
ನಾನಲ್ಲ, ನಾನಲ್ಲ ಎಂದರಂತೆ ಸಿದ್ದರಾಮಯ್ಯ.
---------------------
ಹಿಂದೂ-ಮುಸ್ಲಿಮರ ನಡುವಿನ ಪ್ರೀತಿ, ವಿಶ್ವಾಸ ಈ ಜಿಲ್ಲೆಯಲ್ಲಿ ಇನ್ನೂ ಇದೆ - ನಳಿನ್ ಕುಮಾರ್ ಕಟೀಲು, ಸಂಸದ
ಹೌದು, ಯಾರು ಎಷ್ಟೇ ಬೆಂಕಿ ಕೊಟ್ಟರೂ ಮತ್ತೆ ಚಿಗುರುವ ಶಕ್ತಿ ಅದಕ್ಕಿದೆ.
---------------------
ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ನಾಯಿಯೂ ಮೂಸುವುದಿಲ್ಲ - ಪದ್ಮನಾಭ ಪ್ರಸನ್ನ, ಕೆಜೆಪಿ ರಾಜ್ಯಾಧ್ಯಕ್ಷ
ಸದ್ಯಕ್ಕೆ ಹಾಗಾದರೆ ಬಿಜೆಪಿಯನ್ನು ನಾಯಿ ಮೂಸುತ್ತಿದೆ ಎಂದಾಯಿತು.
---------------------
ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ರಾಜ್ಯದ ಎಲ್ಲ 13 ಅಣೆಕಟ್ಟೆಗಳು ಭರ್ತಿಯಾಗಿವೆ - ವಿ.ಸೋಮಣ್ಣ, ಸಚಿವ
ಯಡಿಯೂರಪ್ಪ ಅವರೇ ಬಾವಿಯಿಂದ ಸೇದಿ ಅಣೆಕಟ್ಟೆಗಳನ್ನು ಭರ್ತಿ ಮಾಡಿದ್ದಂತೆ.
---------------------
ಡಿಕೆಶಿ ಬಂಧನದಿಂದ ನನಗೆ ಸಂತೋಷವಾಗಿಲ್ಲ - ಯಡಿಯೂರಪ್ಪ, ಮುಖ್ಯಮಂತ್ರಿ,
ತಮ್ಮ ಬಂಧನವೂ ಯಾವತ್ತಾದರೂ ಆಗಬಹುದು ಎಂಬ ಭಯವೇ?
---------------------
ದೇಶದ ಎಲ್ಲಾ ನದಿಗಳನ್ನು ಸ್ವಚ್ಛಗೊಳಿಸಬೇಕಿದೆ - ಶೋಭಾಕರಂದ್ಲಾಜೆ, ಸಂಸದೆ
ಮೊದಲು ರಾಜಕಾರಣಿಗಳು ತಮ್ಮ ಮೆದುಳನ್ನು ಸ್ವಚ್ಛಗೊಳಿಸುವ ಅಗತ್ಯವಿದೆ.
---------------------
ಯಾರೋ ಮಹಿಳೆಯರು ಹೇಳಿದರೆಂದು ಮದ್ಯ ನಿಷೇಧ ಮಾಡಲು ಆಗಲ್ಲ - ಎಚ್. ನಾಗೇಶ್, ಸಚಿವ
ಅಂದರೆ ನಿಮ್ಮ ಮನೆಯ ಮಹಿಳೆಯರೇ ಹೇಳಬೇಕೇ?
---------------------
ಪ್ರಧಾನಿ ಮೋದಿ ಜತೆ ಧೈರ್ಯದಿಂದ ಮಾತನಾಡ ಬಲ್ಲ, ವಾದ ಮಾಡಬಲ್ಲ ನಾಯಕತ್ವ ಭಾರತಕ್ಕೆ ಅಗತ್ಯವಿದೆ - ಮುರಳಿ ಮನೋಹರ ಜೋಷಿ, ಬಿಜೆಪಿ ಮುಖಂಡ
ಅವರು ಭಾರತದ ಶತ್ರುರಾಷ್ಟ್ರದ ಪ್ರಧಾನಿಯೇ?
---------------------
ಏಕ ಭಾರತ-ಏಕ ಚುನಾವಣೆ ಪರಿಕಲ್ಪನೆಗೆ ಚುನಾವಣಾ ಆಯೋಗ ಸಿದ್ಧವಿದೆ - ಸುನಿಲ್ ಅರೋರ, ಕೇಂದ್ರ ಚುನಾವಣಾ ಆಯೋಗದ ಆಯುಕ್ತ
ಜನರು ಸಿದ್ಧರಾಗುವ ಅಗತ್ಯವಿಲ್ಲವೇ?
---------------------
ಅಣ್ವಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನ ವಿಶ್ವದಲ್ಲೇ ಅಪಾಯಕಾರಿ ರಾಷ್ಟ್ರ - ಜಿಮ್ ಮ್ಯಾಟಿಸ್, ಅಮೆರಿಕದ ಮಾಜಿ ರಕ್ಷಣಾ ಸಚಿವ
ಅಮೆರಿಕ ಅಣ್ವಸ್ತ್ರವನ್ನೇ ಹೊಂದಿಲ್ಲವೇ?
---------------------
ಆಡಳಿತ ಪಕ್ಷದ ಮೇಲೆ ದ್ವೇಷ ರಾಜಕರಣದ ಆರೋಪ ಬರುವುದು ಸಹಜ - ಈಶ್ವರಪ್ಪ, ಸಚಿವ
ತಾವು ಯಡಿಯೂರಪ್ಪ ವಿರುದ್ಧ ನಡೆಸುತ್ತಿರುವ ದ್ವೇಷ ರಾಜಕಾರಣ ಯಾವುದರ ವ್ಯಾಪ್ತಿಯಲ್ಲಿ ಬರುತ್ತದೆ?
---------------------
ಜೆಡಿಎಸ್ ಪಕ್ಷವು ಮುಖಂಡರನ್ನು ತಯಾರಿಸುವ ಕಾರ್ಖಾನೆಯಾಗಿದೆ - ಎಚ್.ಡಿ. ರೇವಣ್ಣ, ಮಾಜಿ ಸಚಿವ
ಆ ಕಾರ್ಖಾನೆಯ ಒಡೆತನ ಮಾತ್ರ ದೇವೇಗೌಡರ ಕೈಯಲ್ಲಿದೆ.
---------------------
ಜವಾಹರಲಾಲ್ ನೆಹರೂ ಕೂಡ 370ನೇ ವಿಧಿ ರದ್ದು ಗೊಳ್ಳುವುದನ್ನು ಬಯಸಿದ್ದರು - ಶಶಿ ತರೂರು, ಕಾಂಗ್ರೆಸ್ ಮುಖಂಡ
ರದ್ದುಗೊಳಿಸುವುದಕ್ಕೆ ಬಯಸಿದ್ದಿದ್ದರೆ ಅದನ್ನು ಅಲ್ಲಿ ಜಾರಿಗೊಳಿಸಿದ್ದು ಯಾಕೆ?
---------------------
ನೆರೆ ಸಂತ್ರಸ್ತರ ಗಂಜಿ ಕೇಂದ್ರಗಳಿಗೆ ಮುಂದಿನ ದಿನಗಳಲ್ಲಿ ಕಾಳಜಿ ಕೇಂದ್ರಗಳೆಂದು ಮರು ನಾಮಕರಣ ಮಾಡಲಾಗುವುದು - ಆರ್. ಅಶೋಕ್, ಸಚಿವ
ಅಂದರೆ ಇನ್ನು ಮುಂದೆ ಕೇಂದ್ರದಲ್ಲಿ ಗಂಜಿ ಸಿಗುವುದಿಲ್ಲ, ಬರೇ ಕಾಳಜಿ ಮಾತ್ರ.
---------------------
ಭಾರತದಲ್ಲಿ ಹುಲಿಗಳ ಸಂಖ್ಯೆ ವೃದ್ಧಿಗೆ ರಶ್ಯವೂ ಕಾರಣ - ನರೇಂದ್ರ ಮೋದಿ, ಪ್ರಧಾನಿ
ಕಮ್ಯುನಿಸ್ಟರನ್ನು ಹುಲಿಗೆ ಹೋಲಿಸುತ್ತಿರಬೇಕು.
---------------------
ನಾನು ಸಚಿವನಾಗಿದ್ದಾಗ ಕ್ಷಣ ಕ್ಷಣಕ್ಕೂ ಅವಮಾನ ಮತ್ತು ನೋವು ಅನುಭವಿಸುತ್ತಿದೆ - ಜಿ.ಟಿ. ದೇವೇಗೌಡ, ಮಾಜಿ ಸಚಿವ
ಅದಕ್ಕಾಗಿ ಇದೀಗ ಇನ್ನೊಬ್ಬರಿಗೆ ನೋವು ಕೊಟ್ಟು ಸೇಡು ತೀರಿಸಿಕೊಳ್ಳುತ್ತಿದ್ದೀರಾ?
---------------------
ಪೆಟ್ರೋಲ್, ಡೀಸೆಲ್ ವಾಹನಗಳ ನಿಷೇಧ ಇಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಈ ರೀತಿ ದಂಡ ಹಾಕುತ್ತಿದ್ದರೆ ನಿಷೇಧ ಮಾಡುವ ಅಗತ್ಯವೇ ಇಲ್ಲ.
---------------------
ಭಾರತೀಯರ ಹೃದಯ ಕಮಲ ಅರಳಬೇಕಾದರೆ ಸಂಸ್ಕೃತ ಭಾಷೆ ಅಗತ್ಯ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಒಟ್ಟಿನಲ್ಲಿ ಕಮಲವನ್ನು ಅರಳಿಸುವುದೇ ಸಂಸ್ಕೃತ ಭಾಷೆಯ ಗುರಿ.
---------------------
ಸೋನಿಯಾ ಗಾಂಧಿ ನೇತೃತ್ವದ ಇಟಾಲಿಯನ್ ಕಾಂಗ್ರೆಸ್ ಮತ್ತೊಂದು ಈಸ್ಟ್ ಇಂಡಿಯನ್ ಕಂಪೆನಿ ಆಗಿದೆ - ಸುರೇಶ್ ಅಂಗಡಿ, ಸಚಿವ
ರಿಲಯನ್ಸ್ ಕಂಪೆನಿಗಿಂತ ವಾಸಿ ಎನ್ನುತ್ತಿದ್ದಾರೆ ಜನ.
---------------------
ಇಡೀ ಜಗತ್ತೇ ಒಂದು ಕುಟುಂಬ ಎಂದು ಭಾರತ ನಂಬಿದೆ - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಆದರೆ ದಲಿತರನ್ನು ಬಿಟ್ಟು ಎನ್ನುವುದನ್ನು ಕಂಸದೊಳಗೆ ಸೇರಿಸಲಾಗಿದೆ.
---------------------