ಡಿಕೆಶಿ ಪುತ್ರಿಗೆ ಈಡಿ ಸಮನ್ಸ್ ಜಾರಿ
Update: 2019-09-10 12:06 GMT
ಬೆಂಗಳೂರು, ಸೆ.10 ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯಗೆ ಜಾರಿ ನಿರ್ದೇಶನಾಲಯ(ಈಡಿ)ದಿಂದ ಸಮನ್ಸ್ ಜಾರಿಗೊಳಿಸಿದ್ದು, ಸೆ.12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಮಂಗಳವಾರ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬಂದ ಈಡಿ ಅಧಿಕಾರಿಗಳು ಐಶ್ವರ್ಯಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಮನ್ಸ್ ಜಾರಿಗೊಳಿಸಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.