'ವಿಕ್ರಮ್'ಗಾಗಿ ವಿಶೇಷ ಪದ್ಯ ಬರೆದ ಬೆಂಗಳೂರು ನಗರ ಪೊಲೀಸರು

Update: 2019-09-10 16:53 GMT

ಬೆಂಗಳೂರು, ಸೆ.10: ಚಂದ್ರಯಾನ-2 ಭಾಗವಾಗಿರುವ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಾಧಿಸಲು ಇಸ್ರೋ ಸಂಶೋಧಕರು ಸತತ ಯತ್ನ ಮಾಡುತ್ತಿದ್ದಾರೆ. ಈ ನಡುವೆ ಬೆಂಗಳೂರು ನಗರ ಪೋಲೀಸರು ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕಾಗಿ ವಿಶೇಷ ಪದ್ಯ ಬರೆದು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಕ್ರಮ್ ಲ್ಯಾಂಡರ್‌ಗಾಗಿ ಪದ್ಯವನ್ನು ಬರೆಯಲಾಗಿದೆ. ಪ್ರೀತಿಯ ವಿಕ್ರಮ್, ಹಗಲಿರುಳ ಶ್ರಮದ ಫಲ ನೀನು, ನಿನ್ನ ಮಾತಿಗಾಗಿ ಕಾಯುತಿರುವೆ ನಾನು! ಮೌನ ಮುರಿದು ಮಾತನಾಡು ಒಮ್ಮೆ, ಆಗುವುದೆಲ್ಲ ಆಗೇ ಬಿಡಲಿ ನಾನಿರುವೆ! ಎಂದು ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News