ಸೆ.12: 'ಪತ್ರಕರ್ತರು ಮತ್ತು ಉದ್ಯಮ’ ರಾಜ್ಯ ಮಟ್ಟದ ಕಾರ್ಯಾಗಾರ
Update: 2019-09-11 17:33 GMT
ಬೆಂಗಳೂರು, ಸೆ. 11: ‘ಪತ್ರಕರ್ತರು ಮತ್ತು ಉದ್ಯಮ’ ಎಂಬ ವಿಷಯದ ಕುರಿತು ನಾಳೆ(ಸೆ.12) ಬೆಳಗ್ಗೆ 11ಗಂಟೆಗೆ ನಗರದ ಕೆಜಿ ರಸ್ತೆಯಲ್ಲಿನ ಎಫ್‌ಕೆಸಿಸಿಐನ ಸರ್‌ಎಂವಿ ಸಭಾಂಗಣದಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಿಂದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಾರ್ಯಾಗಾರ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎಫ್‌ಕೆಸಿಸಿಐನ ಅಧ್ಯಕ್ಷ ಸಿ.ಆರ್.ಜನಾರ್ದನ್ ವಹಿಸಲಿದ್ದಾರೆ. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಾಜು, ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಂದ್ರಕುಮಾರ್, ಉಪಾಧ್ಯಕ್ಷ ಲಕ್ಷ್ಮಿನಾರಾಯಣ ಹಾಗೂ ಖಜಾಂಚಿ ಯತಿರಾಜ್ ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.