ರಾಜ್ಯಕ್ಕೆ ಶೀಘ್ರವೇ ಕೇಂದ್ರದಿಂದ ನೆರೆ ಪರಿಹಾರಧನ: ಕೇಂದ್ರ ಸಚಿವ ಸದಾನಂದ ಗೌಡ
Update: 2019-09-12 11:42 GMT
ಬೆಂಗಳೂರು, ಸೆ.12: ರಾಜ್ಯಕ್ಕೆ ಶೀಘ್ರದಲೇ ಕೇಂದ್ರ ಸರ್ಕಾರದಿಂದ ಪ್ರವಾಹ ನೆರೆ ಪರಿಹಾರಧನವನ್ನು ಬಿಡುಗಡೆಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಾವುದೇ ರಾಜ್ಯಕ್ಕೆ ಇದುವರೆಗೂ ಪ್ರವಾಹ ನೆರೆ ಪರಿಹಾರ ಹಣವನ್ನು ಒದಗಿಸಿಲ್ಲ. ಯಾವ ಸಚಿವರು, ಸಂಸದರು ಕೂಡ ಪ್ರಧಾನ ಮಂತ್ರಿಗಳಿಗೆ ಹೆದರಿಕೊಂಡು ರಾಜ್ಯಕ್ಕೆ ಸಿಗಬೇಕಾದ ಸವಲತ್ತುಗಳ ಬಗ್ಗೆ ಕೇಳಲು ಹಿಂಜರಿದ್ದಿಲ್ಲ, ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದರು.
ಕೇಂದ್ರದಿಂದ 4 ರಾಸಾಯನಿಕ ಗೊಬ್ಬರ ಘಟಕಗಳನ್ನು 15 ಸಾವಿರ ಕೋಟಿ ರೂಪಾಯಿ ವಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.