ರಾಜ್ಯದ ಮೊದಲ ಜೈವಿಕ ಇಂಧನ ಬಂಕ್‌ಗೆ ಚಾಲನೆ

Update: 2019-09-13 13:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.13: ರಾಜ್ಯದ ಮೊದಲ ಜೈವಿಕ ಇಂಧನ ಬಂಕ್ ನಗರದ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಬೇಗೂರು ಗ್ರಾಮದಲ್ಲಿ ಚಾಲನೆ ಪಡೆದುಕೊಂಡಿದೆ.

ಲಿಮಿಟ್ ಲೆಸ್ ಎನರ್ಜಿ ಎಂಬ ಸಂಸ್ಥೆಯು ಈ ಬಂಕ್ ಅನ್ನು ಆರಂಭಿಸಿದ್ದು, ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿ ಅಂಕಿತ್ ರಾಮ ಬಾಬು ಇದಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಳೆ ಎಣ್ಣೆ, ತ್ಯಾಜ್ಯದ ಎಣ್ಣೆ, ಗೊಬ್ಬರ, ಒಣಗಿದ ತರಗೆಲೆ ಮತ್ತಿತರ ತ್ಯಾಜ್ಯ ವಸ್ತುಗಳನ್ನು ಬಳಸಿ ಜೈವಿಕ ಇಂಧನವನ್ನು ಉತ್ಪಾದಿಸಲಾಗುತ್ತದೆ ಎಂದರು.

ಬೆಂಗಳೂರು ನಗರದಲ್ಲಿ ಮುಂದಿನ ವರ್ಷದ ಅಂತ್ಯದೊಳಗೆ 20 ಕ್ಕೂ ಅಧಿಕ ವಿವಿಧ ವಾರ್ಡ್‌ಗಳಲ್ಲಿ ಬಂಕ್‌ಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ. ಶೇ.12ರಷ್ಟು ಜಿಎಸ್‌ಟಿ ತೆರಿಗೆ ವಿನಾಯಿತಿ ದೊರೆತಿರುವುದರಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜೈವಿಕ ಇಂಧನ ದರ ಸಾಮಾನ್ಯ ಡೀಸೆಲ್ ದರಕ್ಕಿಂತ 1 ರೂ. ಕಡಿಮೆ ಇದೆ. ಪರಿಸರ ಸ್ನೇಹಿಯಾಗಿರುವ ಈ ಇಂಧನ ಬಳಸುವುದರಿಂದ ವಾಹನದ ಎಂಜಿನ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ದೀರ್ಘಕಾಲ ಬಾಳಿಕೆ ಬರುತ್ತದೆ. ರೈತರಿಗೂ ಇದರಿಂದ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News