ಜಿಲ್ಲಾ ಉಸ್ತುವಾರಿ ಸ್ಥಾನ ಮಂತ್ರಿ ಪದವಿಯಲ್ಲ: ಆರ್.ಅಶೋಕ್
Update: 2019-09-17 14:46 GMT
ಬೆಂಗಳೂರು, ಸೆ.17: ಜಿಲ್ಲಾ ಉಸ್ತುವಾರಿ ಎಂಬುದು ಮಂತ್ರಿ ಪದವಿಯಲ್ಲ. ಈ ಹಿಂದೆಯೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಮಂಗಳವಾರ ನಗರದ ಕಬ್ಬನ್‌ಪಾರ್ಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 69ನೆ ಜನ್ಮ ದಿನದ ಪ್ರಯುಕ್ತ ಸಸಿ ನೆಟ್ಟು, ಸಾರ್ವಜನಿಕರಿಗೆ ಸಸಿ ವಿತರಣೆ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿಗಳೇ ಉಳಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದ ಅವರು, ಜಿಲ್ಲಾ ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಅಷ್ಟೇ ಅಲ್ಲದೆ, ಇದೇ ಜಿಲ್ಲೆ ಬೇಕು, ಅದೇ ಜಿಲ್ಲೆ ಬೇಕು ಎಂದು ಗೊಂದಲ ಮಾಡುವ ವಿಚಾರವಲ್ಲ, ಜಿಲ್ಲಾ ಉಸ್ತುವಾರಿ ಎಂಬುದು ಮಂತ್ರಿ ಪದವಿಯಲ್ಲ ಎಂದು ಹೇಳಿದರು.