ಫೇಸ್‌ಬುಕ್‌ನಲ್ಲಿ ‘ಪೈಲ್ವಾನ್’ ಸಿನೆಮಾದ ಲಿಂಕ್ ಶೇರ್ ಮಾಡಿದ ಆರೋಪ: ಓರ್ವನ ಸೆರೆ

Update: 2019-09-20 13:51 GMT

ಬೆಂಗಳೂರು, ಸೆ.20: ಪೈಲ್ವಾನ್ ಕನ್ನಡ ಸಿನೆಮಾದ ಕಾಪಿರೈಟ್ ಉಲ್ಲಂಘಿಸಿ ಫೇಸ್‌ಬುಕ್ ಖಾತೆಯಲ್ಲಿ ಸಿನೆಮಾದ ಲಿಂಕನ್ನು ಅಪ್‌ಲೋಡ್ ಮಾಡಿದ ಆರೋಪದಲ್ಲಿ ಯುವಕನೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೆಲಮಂಗಲ ತಾಲೂಕಿನ ಸೋಮಪುರ ಹೋಬಳಿಯ ರಾಕೇಶ್ ಬಂಧಿತ ಯುವಕ. ಈತ ವಿರಾಟ್ ಎಂಬ ಹೆಸರಿನಲ್ಲಿ ಫೇಸ್‌ಬುಕ್ ಖಾತೆಯನ್ನು ಹೊಂದಿದ್ದು, ಪೈಲ್ವಾನ್ ಬಿಡುಗಡೆಯಾದ ದಿನವೇ ಸಿನೆಮಾವನ್ನು ಸಂಪೂರ್ಣವಾಗಿ ವೀಕ್ಷಿಸಬಹುದಾದ ಲಿಂಕನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾನೆ.

ಸೆ.16ರಂದು ಪೈಲ್ವಾನ್ ಕನ್ನಡ ಸಿನೆಮಾದ ನಿರ್ಮಾಪಕರು, ಕಾನೂನು ಬಾಹಿರವಾಗಿ ತಮ್ಮ ಸಿನೆಮಾದ ಲಿಂಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಸೈಬರ್ ಕ್ರೈಮ್‌ಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಿಸಿಬಿ ಘಟಕದ ಸೈಬರ್ ಕ್ರೈಮ್ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News