ಸಂಸದ ತೇಜಸ್ವಿ ಸೂರ್ಯರ ಅವಿವೇಕದ ನಡೆ ಖಂಡನೀಯ: ಕಾಂಗ್ರೆಸ್
Update: 2019-09-20 17:08 GMT
ಬೆಂಗಳೂರು, ಸೆ.20: ವೈಯಕ್ತಿಕ ಮತ್ಸರದ ಕಾರಣಕ್ಕೆ ಗ್ರಂಥಾಲಯದ ಜಾಗ ತೆರವುಗೊಳಿಸಿ ಕಚೇರಿ ತೆರೆಯಲು ಮುಂದಾಗಿರುವ ಸಂಸದ ತೇಜಸ್ವಿ ಸೂರ್ಯ ಅವರ ಅವಿವೇಕದ ನಡೆ ಖಂಡನೀಯ. ರಾಜ್ಯ ಬಿಜೆಪಿ ತಮ್ಮ ಆದ್ಯತೆ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅಧ್ಯಯನ ನಡೆಸುವ, ಮಕ್ಕಳು ಕಲಿಯುವ ಗ್ರಂಥಾಲಯದ ಮಹತ್ವ ಅರಿಯದ ಜನ ಪ್ರತಿನಿಧಿಯಿಂದ ಯಾವ ನಿರೀಕ್ಷೆ ಇಟ್ಟುಕೊಳ್ಳಬಹುದು? ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ಕಿಡಿಗಾರಿದೆ.