ಸುಲಿಗೆಗೆ ಸಂಚು ಆರೋಪ: ನಾಲ್ವರ ಬಂಧನ
Update: 2019-09-21 16:18 GMT
ಬೆಂಗಳೂರು, ಸೆ.21: ಸುಲಿಗೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ ರೌಡಿಗಳಿಬ್ಬರು ಸೇರಿ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.
ಚಂದ್ರಲೇಔಟ್‌ಅರುದಂತಿ ನಗರದ ಶಕ್ತಿ ಪ್ರಸಾದ್(30), ಭೈರವೇಶ್ವರ ನಗರದ ಮಣಿಕಂಠ(26) ಲಗ್ಗೆರೆಯ ಚೌಡೇಶ್ವರಿ ನಗರದ ನಿವಾಸಿಗಳಾದ (24), ರಾಘವೇಂದ್ರ (20) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದರು.
ಬಂಧಿತರ ಪೈಕಿ ಶಕ್ತಿ ಪ್ರಸಾದ್, ಚಂದ್ರಲೇಔಟ್ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಗಳ ರೌಡಿ ಪಟ್ಟಿಯಲ್ಲಿದ್ದಾನೆ. ಈತನ ಮೇಲೆ ಒಂದು ಕೊಲೆ ಯತ್ನ ಸೇರಿ 12 ಪ್ರಕರಣಗಳು ದಾಖಲಾಗಿದ್ದರೆ, ಮಣಿಕಂಠ, ಜಯನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದು, ಈತನ ವಿರುದ್ಧವೂ ಸಹ ಕೊಲೆ ಯತ್ನ ಸೇರಿದಂತೆ 6 ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ರಾಜಗೋಪಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.