ಮಲೆನಾಡು ಮಿತ್ರ, ಮಲೆನಾಡು ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ

Update: 2019-09-29 16:31 GMT

ಬೆಂಗಳೂರು, ಸೆ.29: ಮಲೆನಾಡು ಮಿತ್ರ ವೃಂದದಿಂದ 11ನೆ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಲೆನಾಡು ಮಿತ್ರ ಪ್ರಶಸ್ತಿ ಹಾಗೂ ಮಲೆನಾಡು ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.

ರವಿವಾರ ನಗರದ ಕಾಸಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜುಗೆ ಮಲೆನಾಡು ಮಿತ್ರ ಪ್ರಶಸ್ತಿ ಹಾಗೂ ನಿವೃತ್ತ ಪ್ರಾಂಶುಪಾಲ ವಿ.ಎಸ್.ಅನಂತ್ ಭಟ್, ಕರ್ನಾಟಕ ಲೋಕಾಯುಕ್ತ ಡಿಎಸ್ಪಿ ಎಸ್.ಬಿ.ಶಶಿಕಲಾ, ಹಿರಿಯ ಪತ್ರಕರ್ತ ವೈ.ಗ.ಜಗದೀಶ್, ಕ್ರೀಡಾಪಟು ಕೃಪಾ ಹಾಗೂ ಜಾನಪದ ಕಲಾವಿದ ಜಗದೀಶ್ ಕಣದಮನೆಗೆ ಮಲೆನಾಡು ಸಾಧಕ ಪ್ರಶಸ್ತಿ -2019 ಪ್ರದಾನ ಮಾಡಲಾಯಿತು.

ಮಲೆನಾಡಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ನೆಲೆಸಿ ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರು ಒಟ್ಟುಗೂಡಿ ಮಲೆನಾಡು ಮಿತ್ರ ವೃಂದ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಮಲೆನಾಡು ಸಂಸ್ಕೃತಿ, ಆಚಾರ ವಿಚಾರಗಳನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಮಲೆನಾಡು ಮಿತ್ರ ವೃಂದ ಅಧ್ಯಕ್ಷ ಸುಬ್ಬಯ್ಯ ನಂಟೂರು ತಿಳಿಸಿದರು.

ನಮ್ಮ ಮಲೆನಾಡು ಸಂಸ್ಕೃತಿಯನ್ನು ಆಚರಿಸಿಕೊಂಡು ಬರುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮಲೆನಾಡಿನ ಸಾಧಕರನ್ನು ಗುರುತಿಸಿ ಪ್ರಶಸ್ತಿ, ಸನ್ಮಾನ ಮಾಡುವಂತಹ ಜವಾಬ್ದಾರಿಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ವೇಳೆ ಶೃಂಗೇರಿ ಕ್ಷೇತ್ರದ ಶಾಸರಾಜೇಗೌಡ ಸೇರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News