ವಿಜ್ಞಾನಿ ಎಚ್.ಚನ್ನಬಸವನಗೌಡಗೆ ರಾಷ್ಟ್ರೀಯ ಭೂ ವಿಜ್ಞಾನ ಪ್ರಶಸ್ತಿ

Update: 2019-10-02 17:27 GMT

ಬೆಂಗಳೂರು, ಅ.2: ಬೆಂಗಳೂರಿನ ಕೇಂದ್ರ ಸರಕಾರದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿ ಹಿರಿಯ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ ಎಚ್. ಚನ್ನಬಸವನಗೌಡಗೆ ಕೇಂದ್ರ ಸರಕಾರ ಕೊಡಮಾಡುವ 2018ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಭೂ ವಿಜ್ಞಾನ ಪ್ರಶಸ್ತಿ ಲಭಿಸಿದೆ.

ಭೂಗರ್ಭ ವಿಜ್ಞಾನದಲ್ಲಿ ಚನ್ನಬಸವನಗೌಡ ನಡೆಸಿದ ಸಂಶೋಧನೆ, ಅನ್ವಯಿಕ ಭೂಗರ್ಭ ವಿಜ್ಞಾನದಲ್ಲಿ ಒಳಗೊಂಡ ಆವಿಷ್ಕಾರ ಹಾಗೂ ಭೂಗರ್ಭ ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಅಪ್ರತಿಮ ಸೇವೆ ಪರಿಗಣಿಸಿ ಕೇಂದ್ರ ಸರಕಾರ ಈ ಪ್ರಶಸ್ತಿ ನೀಡಿದೆ.

ವಿದ್ಯಾಭ್ಯಾಸದ ನಂತರ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿ ವಿಜ್ಞಾನಿಯಾಗಿ ಸೇವೆ ಆರಂಭಿಸಿ ಹಲವಾರು ಮಹತ್ವದ ವಿಷಯಗಳ ಮೇಳೆ ಸಂಶೋಧನೆ ನಡೆಸಿ ಹಲವಾರು ಪುರಸ್ಕಾರ, ಗೌರವ ಮನ್ನಣೆಗೆ ಚನ್ನಬಸವನಗೌಡ ಪಾತ್ರರಾಗಿದ್ದಾರೆ. ಇವರ ವೈಜ್ಞಾನಿಕ ಪ್ರಬಂಧಗಳು, ಲೇಖನಗಳು ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News