ರಸ್ತೆ ಅಪಘಾತ: ಬೈಕ್‌ ಸವಾರ ಮೃತ್ಯು

Update: 2019-10-06 13:03 GMT

ಬೆಂಗಳೂರು, ಅ.6: ವೇಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಆಯತಪ್ಪಿ ಬಿದ್ದು ಮೃತಪಟ್ಟಿರುವ ದುರ್ಘಟನೆ ಬಾಣಸವಾಡಿಯ ಹೆಣ್ಣೂರು ಮುಖ್ಯರಸ್ತೆಯಲ್ಲಿ ಇಂದು ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ.

ಓ.ಎಂ.ಬಿ.ಆರ್. ಲೇಔಟ್‌ನ ರೋಹಿತ್ (28) ಮೃತಪಟ್ಟ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ.

ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದ ರೋಹಿತ್ ರವಿವಾರ ಮುಂಜಾನೆ ಬೈಕ್‌ನಲ್ಲಿ ವೇಗವಾಗಿ ವಾಪಾಸ್ ಆಗುತ್ತಿದ್ದರು. ಮಾರ್ಗಮಧ್ಯೆ ಹೆಣ್ಣೂರು ಮುಖ್ಯರಸ್ತೆಯ ಇಂಡೋನೆಷೀಯಾ ಅಕಾಡೆಮಿ ಹಿಂಭಾಗ ಆಯತಪ್ಪಿ ಬಿದ್ದಿದ್ದು ಆತನ ಮೇಲೆ ಅಪರಿಚಿತ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿರುವ ಬಾಣಸವಾಡಿ ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News