ಓ ಮೆಣಸೇ..!

Update: 2019-10-14 05:22 GMT

♦ ನನ್ನನ್ನು ಮೂಲೆಗುಂಪು ಮಾಡಿದಂತೆ ಚಕ್ರವರ್ತಿ ಸೂಲಿಬೆಲೆಯನ್ನು ಕಡೆಗಣಿಸಬೇಡಿ

- ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಸಂಸ್ಥಾಪಕ

► ಮೂಲೆಗಳೆಲ್ಲ ಭರ್ತಿಯಾಗಿದೆಯಂತೆ. ಇನ್ನೇನಿದ್ದರೂ ಕಸದಬುಟ್ಟಿಯೇ ಗತಿ.

---------------------

♦ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಮಧ್ಯೆ ಯಾವುದೇ ಬಿರುಕಿಲ್ಲ

- ಎಸ್. ಮುನಿಸ್ವಾಮಿ, ಸಂಸದ

► ಇವರ ನಡುವೆ ಇರುವುದು ಬಿರುಕು ಅಲ್ಲ, ಆರೆಸ್ಸೆಸ್‌ನ ಸಂತೋಷ್ ಅವರ ಜನಿವಾರ.

---------------------

♦ ಮೂರು ಸಾವಿರ ವರ್ಷಗಳ ಹಿಂದೆ ನಮ್ಮದೂ ಶಕ್ತಿಶಾಲಿ ದೇಶವಾಗಿತ್ತು

- ಡಾ. ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ

► ಹೌದು, ಆಗ ದೇಶ ಒಡೆಯುವ ಆರೆಸ್ಸೆಸ್‌ನಂತಹ ಸಂಘಟನೆಗಳಿರಲಿಲ್ಲ.

---------------------

♦ ನಟ ಚಂದನ್ ಶೆಟ್ಟಿ ಪ್ರೇಮ ನಿವೇದನೆ ಪ್ರಕರಣದಿಂದ ನನ್ನ ಬಿಪಿ, ಶುಗರ್ ಹೆಚ್ಚಾಗಿದೆ

- ವಿ. ಸೋಮಣ್ಣ, ಸಚಿವ

► ಈ ಪ್ರಾಯದಲ್ಲಿ ನೋಡಬಾರದ್ದನ್ನು ನೋಡಿದರೆ ಇದೆಲ್ಲ ಸಹಜ.

---------------------

♦ ಸಂಸದ ನಳಿನ್ ಕುಮಾರ್ ಕಟೀಲು ಹೆಂಡದ ಅಂಗಡಿ ಮುಂದೆ ಕುಡಿದು ಮಾತನಾಡುವ ರೀತಿ ವರ್ತಿಸುತ್ತಿದ್ದಾರೆ

- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

► ಅದು ಹೆಂಡದ ಅಂಗಡಿ ಅಲ್ಲ, ಆರೆಸ್ಸೆಸ್ ಅಂಗಡಿ.

---------------------

♦ ಬಿಜೆಪಿ ಎಷ್ಟೊಂದು ಪರಿಣತ ಪಕ್ಷವಾಗಿದೆಯೆಂದರೆ ಅದು ಚುನಾವಣೆಯಲ್ಲಿ ಸ್ಪರ್ಧಿಸದೆಯೇ ಸರಕಾರ ರಚಿಸಬಹುದಾಗಿದೆ

- ರಾಮಮಾಧವ, ಬಿಜೆಪಿ ಪ್ರಧಾನ ಕಾರ್ಯದರ್ಶಿ

► ಇವಿಎಂನಿಂದಾಗಿ ಬಿಜೆಪಿಯ ಆತ್ಮವಿಶ್ವಾಸ.

---------------------

♦ ನಾನು ವೀರಶೈವನೂ ಅಲ್ಲ, ಲಿಂಗಾಯತನೂ ಅಲ್ಲ, ಕುರುಬನಂತೂ ಅಲ್ಲವೇ ಅಲ್ಲ

- ಈಶ್ವರಪ್ಪ, ಸಚಿವ

► ಮನುಷ್ಯ ಹೌದೋ ಅಲ್ಲವೋ ಎನ್ನುವ ಬಗ್ಗೆಯೂ ಅನುಮಾನ ಇದೆಯಂತೆ.

---------------------

♦  ಗುಂಪು ಥಳಿತ ಎಂಬ ಪದ ಪಾಶ್ಚಿಮಾತ್ಯದ ಸೃಷ್ಟಿ

- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

► ಪದ ವಿದೇಶಿ, ಆದರೆ ಥಳಿತ ಸ್ವದೇಶಿ.

---------------------

♦ ಯಾರು ಒಪ್ಪಲಿ, ಬಿಡಲಿ. ದೇಶದ ಆರ್ಥಿಕತೆ ಈಗ ಸರಿಯಿಲ್ಲ ಎನ್ನುವುದು ಸತ್ಯ

- ಉದ್ಧವ್ ಠಾಕ್ರೆ, ಶಿವಸೇನೆ ಮುಖ್ಯಸ್ಥ

►ಸರಿಯಿಲ್ಲದವರ ಜೊತೆಗೆ ಮತ್ತೇಕೆ ಮೈತ್ರಿ?

---------------------

♦ ಕಾಶ್ಮೀರ ಪಾಕಿಸ್ತಾನದ ರಕ್ತವಿದ್ದಂತೆ

- ಫರ್ವೇಝ್ ಮುಶರ್ರಫ್, ಪಾಕ್ ಮಾಜಿ ಅಧ್ಯಕ್ಷ

► ರಕ್ತದಾಹಿ ಪಾಕಿಸ್ತಾನ ಎಂದು ಕರೆಯಬಹುದೇ?

---------------------

♦ ಯೋಗವು ಮನಸ್ಸನ್ನು ಶಾಂತವಾಗಿರಿಸಿ ನೈತಿಕತೆಯ ಕಡೆಗೆ ಕೊಂಡೊಯ್ಯಲು ಸಹಕಾರಿಯಾಗಿದೆ

- ನಳಿನ್ ಕುಮಾರ್ ಕಟೀಲು, ಸಂಸದ

► ಯೋಗ ಮಾಡಿಯಾದರೂ ಮನಸ್ಸನ್ನು ಶಾಂತವಿರಿಸಲು ಪ್ರಯತ್ನಿಸಿ.

---------------------

♦ ನನ್ನಿಂದಾಗಿ ಯಡಿಯೂರಪ್ಪ ಇಂದು ಮುಖ್ಯಮಂತ್ರಿಯಾಗಿದ್ದಾರೆ

- ಎಚ್. ವಿಶ್ವನಾಥ್, ಅನರ್ಹ ಶಾಸಕ

► ಅನರ್ಹರಿಂದ ಮುಖ್ಯಮಂತ್ರಿಯಾಗಿರುವುದರಿಂದ ಅವರನ್ನು ಅನರ್ಹ ಮುಖ್ಯಮಂತ್ರಿ ಎಂದು ಕರೆಯಬಹುದೇ?

---------------------

♦ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ

- ಸಿ.ಟಿ. ರವಿ, ಸಚಿವ

► ಬದಲಾವಣೆ ಮಾಡಲಿಕ್ಕಿದೆಯೇ ಎಂದು ನಿಮ್ಮನ್ನು ಪ್ರಶ್ನಿಸಿದವರು ಯಾರು?

---------------------

♦ ಪಾಕ್-ಚೀನಾ ಸಂಬಂಧ ಬಂಡೆಯಷ್ಟು ಗಟ್ಟಿಯಾಗಿದೆ

- ಜಿನ್ ಪಿಂಗ್, ಚೀನಾ ಅಧ್ಯಕ್ಷ

► ಬಂಡೆಯ ಕೆಳಗೆ ನಿಂತು ಮೋದಿಯ ಜೊತೆಗೆ ಮಾತುಕತೆ ನಡೆಸಿದಾಗಲೇ ಅದು ಗೊತ್ತಾಗಿತ್ತು.

---------------------

♦ ಪ್ರಧಾನಿಯ 56 ಇಂಚಿನ ಎದೆಯಲ್ಲಿ ತಾಯಿ ಹೃದಯವಿಲ್ಲ

- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

► ತಾಯಿಯದೋ, ತಂದೆಯದೋ ಒಟ್ಟಿನಲ್ಲಿ ಅಲ್ಲಿ ಹೃದಯ ಇದೆಯೇ ಎನ್ನುವುದೇ ಪ್ರಶ್ನೆಯಾಗಿದೆ.

---------------------

♦ ನಮ್ಮ ಒಬ್ಬ ಯೋಧ ಹುತಾತ್ಮನಾದರೆ ಶತ್ರು ಪಾಳಯದ ಹತ್ತು ಮಂದಿಯನ್ನು ಕೊಲ್ಲುತ್ತೇವೆ

- ಅಮಿತ್ ಶಾ, ಕೇಂದ್ರ ಸಚಿವ

► ನಮ್ಮ ಯೋಧರಿರುವುದು ನಿಮ್ಮ ರಾಜಕೀಯ ಚಿತ್ರಕತೆಗಾಗಿ ಹುತಾತ್ಮರಾಗುವುದಕ್ಕಾಗಿ ಅಲ್ಲ.

---------------------

♦ ಉತ್ತರ ಪ್ರದೇಶ ರಾಮರಾಜ್ಯವಲ್ಲ, ಈಗ ನಾಥೂರಾಮ್ ರಾಜ್ಯವಾಗಿದೆ

- ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ

► ಕ್ರಿಮಿನಲ್‌ಗಳ ಪಾಲಿಗೆ ರಮ್ ರಾಜ್ಯ

---------------------

♦ ಜನಧನ್ ಖಾತೆಗಳು ಬಡವರ ಸಶಶ್ತೀಕರಣದ ಕೀಲಿ ಕೈಗಳಾಗುತ್ತಿವೆ

- ಪ್ರತಾಪ ಸಿಂಹ, ಸಂಸದ

► ಖಾಲಿ ಕೈಗಳ ಪಾಲಿಗೆ ಖಾತೆಗಳ ಕೀಲಿಕೈಯಿಂದ ಏನು ಪ್ರಯೋಜನ?

---------------------

♦ ಬಿಜೆಪಿ ನನಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದಿದ್ದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತೇನೆ

- ರಾಜು ಕಾಗೆ, ಮಾಜಿ ಶಾಸಕ

► ಜೆಡಿಎಸ್‌ನಿಂದಲೂ ಒಂದು ಟಿಕೆಟ್ ಬುಕ್ ಮಾಡಿಕೊಳ್ಳಿ.

---------------------

♦ ನಮ್ಮ ಸಂಪ್ರದಾಯದಲ್ಲಿ ಅತ್ಯಾಚಾರಿಗೆ ಶಿಕ್ಷೆ ನೀಡುವ ಕಾನೂನು ಅಥವಾ ಪದ್ಧತಿ ಇಲ್ಲ

- ರಾಖೇಶ್ ಸಿನ್ಹಾ, ಆರೆಸ್ಸೆಸ್ ಚಿಂತಕ

► ಹೌದು, ಇಲ್ಲಿ ಅತ್ಯಾಚಾರಿ ಒಂದೋ ಸಂಸದ, ಇಲ್ಲವೇ ಮುಖ್ಯಮಂತ್ರಿಯಾಗುತ್ತಾನೆ. ಅದೇ ಇಲ್ಲಿನ ಶಿಕ್ಷೆಯ ರೀತಿ.

---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!