ಉದ್ಯಮಿ ಮನೆಗೆ ಕನ್ನ: 10 ಲಕ್ಷ ರೂ. ಮೌಲ್ಯದ ವಸ್ತುಗಳ ಕಳ್ಳತನ
Update: 2019-10-30 16:37 GMT
ಬೆಂಗಳೂರು, ಅ.30: ಉದ್ಯಮಿ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಹಣ, ಚಿನ್ನಾಭರಣ ಸೇರಿ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಮೈಕೋ ಲೇಔಟ್ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯಬ್ಯಾಂಕ್ ಲೇಔಟ್, ಮೂರನೆ ಕ್ರಾಸ್, ಮೂರನೆ ಮುಖ್ಯರಸ್ತೆಯಲ್ಲಿ ಉದ್ಯಮಿ ವಿಜಯ್‌ಕುಮಾರ್ ಎಂಬುವರು ವಾಸವಾಗಿದ್ದು, ಅ.29ರ ಬೆಳಗ್ಗೆ ಮನೆಗೆ ಬೀಗ ಹಾಕಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಇದೇ ಸಮಯವನ್ನು ಕಾಯುತ್ತಿದ್ದ ಕಳ್ಳರು ಹಿಂಬಾಗಿಲು ಮುರಿದು ಒಳನುಗ್ಗಿ ಹಣ, ಚಿನ್ನದ ಆಭರಣ, ಬೆಳ್ಳಿ ವಸ್ತುಗಳು, ವಾಚು ಸೇರಿ 10 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಈ ಪ್ರಕರಣ ದಾಖಲಿಸಿಕೊಂಡಿರುವ ಮೈಕೋ ಲೇಔಟ್ ಠಾಣಾ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.