ಓ ಮೆಣಸೇ ...

Update: 2019-11-03 18:25 GMT

ಕನ್ನಡವೂ ಅಲ್ಪ ಸಂಖ್ಯಾತ ಭಾಷೆಯಾಗುತ್ತಿದೆ - ಯಡಿಯೂರಪ್ಪ ಹಾಗಾದರೆ ಕನ್ನಡವನ್ನು ಪಠ್ಯ ಪುಸ್ತಕಗಳಿಂದ ಕಿತ್ತು ಹಾಕೋಣವೇ?

---------------------
ರಾಜಕೀಯದಲ್ಲಿ ಯಾರೊಬ್ಬರೂ ಸಂತರಲ್ಲ: ಸಂಜಯ್ ರಾವತ್, ಶಿವಸೇನೆಯ ನಾಯಕ
   ರಾಜಕೀಯದಲ್ಲಿ ಸಂತರೇ ಅತಿ ಅಪಾಯಕಾರಿಗಳು.

---------------------
 ಸಾವರ್ಕರ್ ಅಮಾಯಕ ಎಂದು ನ್ಯಾಯಾಲಯ ಹೇಳಿರಲಿಲ್ಲ- ತುಷಾರ್ ಗಾಂಧಿ, ಮಹಾತ್ಮಾ ಗಾಂಧೀಜಿಯ ಮರಿ ಮೊಮ್ಮಗ
  ಆ ಕಾರಣಕ್ಕಾಗಿಯೇ ಸರಕಾರ ‘ಭಾರತ ರತ್ನ’ ಕೊಡಲು ಹೊರಟಿರುವುದು.

---------------------
 ಆರ್ಥಿಕತೆಯಲ್ಲಿ ಬದಲಾವಣೆಯಾದರೆ ಮಾತ್ರ ರಾಜಕೀಯ ಬದಲಾವಣೆ ಸಾಧ್ಯ: ಪ್ರಸನ್ನ, ಪವಿತ್ರ ಆರ್ಥಿಕತೆ ಆಂದೋಲನದ ನೇತಾರರು
   ಆದುದರಿಂದ ರಾಜಕೀಯ ಬದಲಾವಣೆಗೆ ಒತ್ತಾಯಿಸುವುದು ಬೇಡ ಎಂಬ ಮನವಿಯೇ?

---------------------
 ಸಿ. ಎಂ. ಕುರ್ಚಿಯಲ್ಲಿ ಕುಳಿತು ಅಪರಾಧ ಮಾಡಿದ್ದೇನೆ- ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ.
  ನೀವು ಮಾಡಿದ ಅಪರಾಧಕ್ಕೆ ನಾಡಿನ ಜನತೆಗೆ ಶಿಕ್ಷೆಯೇ?

---------------------
ಅಭ್ಯರ್ಥಿ ಕ್ರಿಮಿನಲ್ ಆಗಿದ್ದರೂ ಬೆಂಬಲಿಸಿ: ನಿಶಿಕಾಂತ್ ದುಭೆ, ಜಾರ್ಖಂಡ್ ಬಿಜೆಪಿ ಮುಖಂಡ
ಕ್ರಿಮಿನಲ್ ಆಗಿರುವುದೇ ಅಭ್ಯರ್ಥಿಯಾಗಲು ಇರುವ ಅರ್ಹತೆಯೇ?

---------------------
ಜನರಿಗೆ ಸ್ಪಂದಿಸುವವರಿಗೆ ನನ್ನ ಬೆಂಬಲ: ಕುಮಾರಸ್ವಾಮಿ, ಜೆಡಿಎಸ್ ನಾಯಕ
   ‘ನಿಮ್ಮ ಜನರಿಗೆ’ ಎಂದು ಸ್ಪಷ್ಟವಾಗಿ ಹೇಳಬಾರದೆ?

---------------------
ಬಿಜೆಪಿ ಮೊಘಲರಂತೆ ವರ್ತಿಸುತ್ತಿದೆ: ಶಿವಸೇನೆ ಆರೋಪ
ಶಿವಸೇನೆಗಿಂತ ಮೊಘಲರೇ ವಾಸಿ ಎಂದಿತಂತೆ ಮಹಾರಾಷ್ಟ್ರ ಬಿಜೆಪಿ.

---------------------

ಜಗತ್ತಿನ ಮಹತ್ವದ ಪ್ರಕರಣಗಳಲ್ಲಿ ಅಯೋಧ್ಯೆ ವಿವಾದ ಒಂದು: ಬೊಬ್ಡೆ, ನಿಯೋಜಿತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ.
 ಆದುದರಿಂದಲೇ ತೀರ್ಪು ಭಾರತದ ಸುಪ್ರೀಂಕೋರ್ಟ್‌ನ ಘನತೆಯನ್ನು ಜಗತ್ತಿಗೆ ಸಾರುವಂತಿರಲಿ.

---------------------

ಮಾಲಿನ್ಯದಿಂದ ದಿಲ್ಲಿ ಗ್ಯಾಸ್‌ಚೇಂಬರ್ ಆಗಿದೆ: ಅರವಿಂದ ಕೇಜ್ರಿವಾಲ್. ದಿಲ್ಲಿ ಮುಖ್ಯಮಂತ್ರಿ
ದಿಲ್ಲಿಯ ಸಂಸತ್ ಆ ಮಾಲಿನ್ಯದ ಮೂಲ ಎಂದು ಸಂಶಯಿಸಲಾಗಿದೆ.

---------------------

ನಾಡ ಧ್ವಜ ಹಾರಿಸುವ ಪರಿಪಾಠವಿಲ್ಲ: ಸಿ. ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ
ಪರಿಪಾಠವಿಲ್ಲದ ಕೇಸರಿ ಧ್ವಜವನ್ನು ಹಾರಿಸುವುದಕ್ಕೆ ನಿಮಗೆ ಬಂದಿರುವ ಸುತ್ತೋಲೆ ಯಾರದ್ದು?

---------------------

ಕನ್ನಡ ಹಿಂದುಳಿಯದಂತೆ ಜಾಗೃತೆ ವಹಿಸಿ: ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಂಸ್ಕೃತ ತಲೆಯಿಂದ, ಹಿಂದಿ ತೋಳಿನಿಂದ, ಇಂಗ್ಲಿಷ್ ತೊಡೆಯಿಂದ ಮತ್ತು ಕನ್ನಡ ಪಾದದಿಂದ ಹುಟ್ಟಿದೆ ಎಂಬ ಪ್ರಚಾರ ನಡೆಯುತ್ತಿದೆ ಎಚ್ಚರ.

---------------------
ಪಟೇಲರ ಸಂದೇಶವನ್ನು ದೇಶಾದ್ಯಂತ ಹರಡೋಣ: ಪ್ರಧಾನಿ ನರೇಂದ್ರ ಮೋದಿ.
ಆರೆಸ್ಸೆಸ್‌ನ್ನು ನಿಷೇಧಿಸಲು ಪಟೇಲ್ ಅವರು ನೆಹರೂ ಅವರಿಗೆ ನೀಡಿದ ಸಂದೇಶವನ್ನೇ?

---------------------

ಯಡಿಯೂರಪ್ಪರಲ್ಲಿ ಬಸವಣ್ಣರನ್ನು ಕಾಣುತ್ತೇನೆ: ಶ್ರೀರಾಮುಲು, ಬಿಜೆಪಿ ನಾಯಕ
  ಅಂದರೆ ಬಸವಣ್ಣನ ದುರಂತ ಯಡಿಯೂರಪ್ಪರಿಗೂ ಕಾದಿದೆಯೇ?

---------------------
ಆರ್‌ಸಿಇಪಿಯಿಂದ ಹೈನುಗಾರಿಕೆಗೆ ತೊಂದರೆಯಿಲ್ಲ: ಕೇಂದ್ರ ಸಚಿವ ಗೋಯಲ್
ಇವಿಎಂ ಮೂಲಕ ಧಾರಾಳವಾಗಿ ಹಾಲು ಕರೆಯಬಹುದು ಎನ್ನುವ ಭರವಸೆಯಿರಬೇಕು.

---------------------

ಹಾಂಕಾಂಗ್ ಆಡಳಿತಕ್ಕೆ ಎದುರಾಗುವ ಯಾವುದೇ ಸವಾಲನ್ನು ಸಹಿಸುವುದಿಲ್ಲ: ಚೀನಾ
  ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತಕ್ಕೂ ಇದು ಅನ್ವಯವಾಗುವುದೇ?

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!