ರೈತರ ಬೆಳೆ ಸಾಲಮನ್ನಾಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸಹಾಯವಾಣಿ

Update: 2019-11-04 05:36 GMT

ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ಸಹಾಯವಾಣಿ ಆರಂಭಿಸುವ ಮೂಲಕ ರಾಜ್ಯದ ರೈತರ ನೆರವಿಗೆ ಧಾವಿಸಿದ್ದಾರೆ. ಸಾಲಮನ್ನಾ ಸೇರಿದಂತೆ ರೈತರಿಗೆ ಸಂಬಂಧಿಸಿದ ಮಾಹಿತಿ ನೀಡುವ ಸಲುವಾಗಿ ಸಹಾಯವಾಣಿ ಕೇಂದ್ರ ಪ್ರಾರಂಭಿಸಲಾಗಿದೆ. ರೈತರು ಸಹಾಯವಾಣಿಗೆ ಕರೆ ಮಾಡಿ ಬೆಳೆ ಸಾಲಮನ್ನಾ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಸೋಮವಾರ ಈ ಬಗ್ಗೆ ಟ್ವೀಟ್​ ಮಾಡಿರುವ ಕುಮಾರಸ್ವಾಮಿ, ಪ್ರತಿದಿನ ನೂರಾರು ರೈತರು ಬೆಳೆ ಸಾಲಮನ್ನಾ ಬಗ್ಗೆ ಮಾಹಿತಿಗಾಗಿ ನನ್ನ ಮನೆಗೆ ಆಗಮಿಸುತ್ತಲೇ ಇರುತ್ತಾರೆ. ದೂರದ ಊರಿನಿಂದ ಬರುವ ರೈತರಿಗೆ ಕಷ್ಟವಾಗಬಾರದು ಎಂದು ಸಹಾಯವಾಣಿ ಆರಂಭಿಸಿದ್ದೇನೆ. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೂ 9164305868 ನಂಬರ್​​ಗೆ ಕರೆ ಮಾಡಬಹುದು, ಸಾಲಮನ್ನಾದ ವಿವರ ಪಡೆಯಬಹುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News