ಡಿಸಿಪಿ ರಮೇಶ್ ಬಾನೋತ್ ವರ್ಗಾವಣೆ ಆದೇಶಕ್ಕೆ ಸಿಎಟಿ ತಡೆ
Update: 2019-11-04 15:51 GMT
ಬೆಂಗಳೂರು, ನ.4: ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ವರ್ಗಾವಣೆ ಆದೇಶಕ್ಕೆ ಸಿಎಟಿ ತಡೆ ನೀಡಿ ಆದೇಶಿಸಿದೆ.
ರಮೇಶ್ ಬಾನೋತ್ ಅವರನ್ನು ಜೂನ್ ತಿಂಗಳಲ್ಲಿ ಪಶ್ಚಿಮ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಕೇವಲ 5 ತಿಂಗಳಲ್ಲಿ ಅಂದರೆ ನ.2ರಂದು ಅವರನ್ನು ಕೆಎಸ್‌ಆರ್‌ಪಿ 9ನೆ ಪಡೆಯ ಕಮಾಂಡೆಂಟ್ ಆಗಿ ವರ್ಗಾಯಿಸಿ ಸರಕಾರ ಆದೇಶಿಸಿತ್ತು. ಅಲ್ಲದೆ, ಅವರ ಜಾಗಕ್ಕೆ ಎಸ್.ಗಿರೀಶ್‌ರನ್ನು ವರ್ಗಾಯಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ, ರಮೇಶ್ ಬಾನೋತ್ ಸಿಎಟಿ ಮೆಟ್ಟಿಲೇರಿದ್ದರು. ಸದ್ಯ ಸಿಎಟಿ ವರ್ಗಾವೆ ಆದೇಶಕ್ಕೆ ತಡೆ ನೀಡಿ ಆದೇಶಿಸಿದೆ.