ಬಾಕಿ ಉಳಿದ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಆಯುಕ್ತ ಸೂಚನೆ
ಬೆಂಗಳೂರು, ನ.4: ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ನ.10ರೊಳಗಾಗಿ ಮುಚ್ಚುವಂತೆ ಗಡುವು ನೀಡಲಾಗಿದ್ದು, ಈ ಸಂಬಂಧ ಎಲ್ಲೆಲ್ಲಿ ಗುಂಡಿಗಳು ಬಿದ್ದಿವೆ ಎಂಬುದನ್ನು ಪಟ್ಟಿ ಮಾಡಿ, ಕೂಡಲೆ ಗುಂಡಿ ಮುಚ್ಚಲು ಸೂಕ್ತ ಕ್ರಮ ವಹಿಸುವಂತೆ ಆಯುಕ್ತ ಅನಿಲ್ ಕುಮಾರ್ ಸೂಚಿಸಿದ್ದಾರೆ
ಬಿಬಿಎಂಪಿ ಕಚೇರಿಯಲ್ಲಿ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಲಿಕೆ ಎಲ್ಲ ವಲಯಗಳಲ್ಲಿ ಕಳೆದ ಡಿ.21ರಿಂದ ಡಿ.31ರವರೆಗೆ ಒಟ್ಟು 6,520 ಗುಂಡಿಗಳನ್ನು ಗುರುತಿಸಲಾಗಿದೆ. ನ.2ರವರೆಗೆ 2,871 ಗುಂಡಿಗಳನ್ನು ಮುಚ್ಚಲಾಗಿದ್ದು, 3,649 ಗುಂಡಿಗಳನ್ನು ಮುಚ್ಚಬೇಕಿದೆ. ಈ ಪೈಕಿ, ಆಯುಕ್ತರು ವಾರದೊಳಗಾಗಿ ಬಾಕಿ ಉಳಿದಿರುವ ಗುಂಡಿಗಳನ್ನು ಮುಚ್ಚುವಂತೆ ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರಿಗೆ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಎಲ್ಲಾ ವಲಯಗಳ ವಿಶೇಷ ಆಯುಕ್ತರು, ವಲಯ ಜಂಟಿ ಆಯುಕ್ತರು ಹಾಗೂ ಮುಖ್ಯ ಅಭಿಯಂತರರು, ವಿಶೇಷ ಆಯುಕ್ತರಾದ ರವೀಂದ್ರ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.