ಅಕ್ರಮ ವಲಸಿಗರ ಜಾಮೀನು ಅರ್ಜಿ: ಗೃಹ ಇಲಾಖೆ ಅಪರ ಕಾರ್ಯದರ್ಶಿಗೆ ಖುದ್ದು ಹಾಜರಿರಲು ಹೈಕೋರ್ಟ್ ಆದೇಶ

Update: 2019-11-05 17:50 GMT

ಬೆಂಗಳೂರು, ನ.5: ಅಕ್ರಮ ಬಾಂಗ್ಲಾ ವಲಸಿಗರನ್ನು ಯಾವ ಸ್ಥಳದಲ್ಲಿ ಇರಿಸಲಾಗಿದೆ ಎಂಬುದರ ಕುರಿತು ವಿವರಣೆ ನೀಡಲು ಗೃಹ ಇಲಾಖೆಯ ಅಪರ ಕಾರ್ಯದರ್ಶಿಗೆ ನ.8ರಂದು ಖುದ್ದು ಹಾಜರಿರಲು ಹೈಕೋರ್ಟ್ ಸೂಚಿಸಿದೆ.

ಬಾಂಗ್ಲಾ ವಲಸಿಗರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ನ್ಯಾಯಪೀಠವು ವಿದೇಶಿಗರ ಅಕ್ರಮ ವಾಸ ಪ್ರಕರಣಗಳನ್ನು ನ್ಯಾಯಾಲಯ ಹೇಗೆ ನಿಭಾಯಿಸಬೇಕು. ವಿದೇಶಿಗರನ್ನೂ ಹೇಗೆ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ನ್ಯಾಯಪೀಠವು ಈ ಮೊದಲು ಸೂಚನೆ ನೀಡಿತ್ತು. ಅವರನ್ನು ಜೈಲಿನಲ್ಲಿಡದೇ ಪ್ರತ್ಯೇಕ ಡಿಟೆನ್ಷನ್ ಸೆಂಟರ್‌ಗಳಲ್ಲಿ ಇಟ್ಟು ಗೌರವಯುತ ಜೀವನಕ್ಕೆ ಅವಕಾಶವಿದೆಯಾ ಎಂಬುದರ ಕುರಿತು ಮಾಹಿತಿ ನೀಡಲು ನ.8ರಂದು ಗೃಹ ಇಲಾಖೆಯ ಅಪರ ಕಾರ್ಯದರ್ಶಿಗೆ ಖುದ್ದು ಹಾಜರಿರಲು ನ್ಯಾಯಪೀಠವು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News