ಡಾ.ಬಿ.ಎಸ್.ಸಣ್ಣಯ್ಯಗೆ ವಿದ್ಯಾಶಂಕರ ಪ್ರಶಸ್ತಿ, ಡಾ.ಸಿ.ನಾಗಭೂಷಣಗೆ ವಿದ್ಯಾಶಂಕರ ಪುರಸ್ಕಾರಕ್ಕೆ ಆಯ್ಕೆ
Update: 2019-11-06 18:16 GMT
ಬೆಂಗಳೂರು, ನ.6: ಡಾ.ಎಸ್.ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನವು ಕೊಡಮಾಡುವ 2019ನೇ ಸಾಲಿನ ವಿದ್ಯಾಶಂಕರ ಪ್ರಶಸ್ತಿಯನ್ನು ಹಿರಿಯ ಸಂಶೋಧಕರಾದ ಡಾ. ಬಿ.ಎಸ್.ಸಣ್ಣಯ್ಯಗೆ ಹಾಗೂ ವಿದ್ಯಾಶಂಕರ ಪುರಸ್ಕಾರವನ್ನು ಯುವ ಸಂಶೋಧಕರಾದ ಡಾ.ಸಿ.ನಾಗಭೂಷಣಗೆ ನೀಡಲಾಗುತ್ತಿದೆ.
ನ.18ರಂದು ಸಂಜೆ 6ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಡಾ.ಟಿ..ವೆಂಕಟಾಚಲ ಶಾಸ್ತ್ರಿ ಪ್ರಶಸ್ತಿ ಮತ್ತು ಪುರಸ್ಕಾರವನ್ನು ಪ್ರದಾನ ವಾಡಲಿದ್ದಾರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.