ಡಾ.ಲೀಲಾ ಸಂಪಿಗೆ ಅವರಿಗೆ ‘ಇಂದಿರಾರತ್ನ ಪ್ರಶಸ್ತಿ’
Update: 2019-11-11 18:40 GMT
ಬೆಂಗಳೂರು, ನ. 11: ಲೇಖಕ ಹಾಗೂ ಚಿಂತಕಿ ಡಾ.ಲೀಲಾ ಸಂಪಿಗೆ ಅವರು ಕರ್ನಾಟಕ ಲೇಖಕಿಯರ ಸಂಘದಿಂದ ನೀಡುವ ಪ್ರತಿಷ್ಠಿತ ‘ಇಂದಿರಾರತ್ನ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ನ.15ರ ಶುಕ್ರವಾರ ಸಂಜೆ 4ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.