ಮಾಜಿ ಸಿಎಂ ಮನೆ ಮೇಲೆ ಸಿಬಿಐ ದಾಳಿ: 26.49 ಲಕ್ಷ ರೂ. ಅಮಾನ್ಯಗೊಂಡ ನೋಟುಗಳು ಪತ್ತೆ
Update: 2019-11-22 22:51 IST

ಹೊಸದಿಲ್ಲಿ, ನ.22: ಮಣಿಪುರದ ಮಾಜಿ ಸಿಎಂ ಒ.ಇಬೋಬಿ ಸಿಂಗ್ ಮತ್ತು ಕೆಲ ಐಎಎಸ್ ಅಧಿಕಾರಿಗಳ ಮನೆಗಳ ಮೇಲೆ ಶುಕ್ರವಾರ ಸಿಬಿಐ ದಾಳಿ ನಡೆಸಿದ್ದು, 15.47 ಲಕ್ಷ ರೂ. ನಗದು ಮತ್ತು 36.49 ಲಕ್ಷ ರೂ. ಮೌಲ್ಯದ ಅಮಾನ್ಯಗೊಂಡ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವಶಪಡಿಸಿಕೊಂಡ ಒಟ್ಟು ಮೊತ್ತದಲ್ಲಿ 11.47 ಲಕ್ಷ ರೂ. ನಗದು ಮತ್ತು 26.49 ಲಕ್ಷ ರೂ. ಅಮಾನ್ಯಗೊಂಡ ನೋಟುಗಳು ಇಬೋಬಿ ಸಿಂಗ್ ಮನೆಯಲ್ಲಿ ಸಿಕ್ಕಿತ್ತು ಎಂದು ವರದಿಯಾಗಿದೆ.
ಸಾರ್ವಜನಿಕ ನಿಧಿ ದುರುಪಯೋಗ ಆರೋಪದಲ್ಲಿ ಸಿಬಿಐ ಗುರುವಾರ ಸಿಂಗ್ ಮತ್ತು ಐಎಎಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಐಝ್ವಾಲ್, ಇಂಫಾಲ್ ಮತ್ತು ಗುರುಗ್ರಾಮ ಸೇರಿ 9 ಸ್ಥಳಗಳಲ್ಲಿ ಸಿಬಿಐ ಇಂದು ದಾಳಿ ನಡೆಸಿದೆ.