ಓ ಮೆಣಸೇ...

Update: 2020-01-19 18:24 GMT

  ನಿಂಬೆ ಹಣ್ಣು ಮಾರಿಕೊಂಡಿದ್ದ ನಾನು ಈಗ ಸಿಎಂ ಆಗಿದ್ದೇನೆ
- ಯಡಿಯೂರಪ್ಪ, ಮುಖ್ಯಮಂತ್ರಿ
  ಹಾಲಿಗೆ ಹುಳಿ ಹಿಂಡುವುದನ್ನು ಆಗಲೇ ಕಲಿತಿರಬೇಕು.

---------------------
  ಪಾಕ್ ಮುಖಂಡರ ಹೇಳಿಕೆಗಳೂ ಮತ್ತು ಕಾಂಗ್ರೆಸ್ ಮುಖಂಡರ ಹೇಳಿಕೆಗಳೂ ಒಂದೇ ರೀತಿಯಲ್ಲಿವೆ
- ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ.
  ದೇಶ ಒಡೆಯುವ ವಿಷಯದಲ್ಲಿ ಪಾಕ್ ಉಗ್ರರ ಚಟುವಟಿಕೆಗಳು, ಬಿಜೆಪಿ ಮುಖಂಡರ ಚಟುವಟಿಕೆಗಳು ಒಂದೇ ರೀತಿಯಲ್ಲಿವೆ.

---------------------
  ವೈನ್ ಸ್ಟೋರ್, ಬಾರ್‌ಗಳಿಗೆ ಇಟ್ಟಿರುವ ದೇವರ ಹೆಸರುಗಳನ್ನು ಬದಲಾಯಿಸಿ
- ಕೋಟ ಶ್ರೀನಿವಾಸ ಪೂಜಾರಿ, ಸಚಿವ.
  ಕುಡಿಯುವವರು ದೇವರ ಹೆಸರನ್ನು ಇಟ್ಟುಕೊಂಡರೆ ಸರಿಯೇ?

---------------------
  ತುಳಿತಕ್ಕೊಳಗಾದ ಪ್ರತೀ ಪಾಕಿಸ್ತಾನಿ ನಿರಾಶ್ರಿತರಿಗೆ ಪೌರತ್ವ ನೀಡುವವರೆಗೆ ಸರಕಾರ ವಿಶ್ರಾಂತಿ ಪಡೆಯುವುದಿಲ್ಲ
- ಅಮಿತ್ ಶಾ, ಕೇಂದ್ರ ಸಚಿವ.
  ತುಳಿತಕ್ಕೊಳಗಾಗಿರುವ ಭಾರತೀಯರ ಗತಿಯೇನು?

---------------------
  ಚಾಪೆ ಹಿಡಿದು ಬಂದವರಿಗೆಲ್ಲ ಜಾಗ ಕೊಡಲು ಭಾರತ ‘ಧರ್ಮ ಶಾಲೆ’ ಅಲ್ಲ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ.
ಧರ್ಮಾಧಾರಿತ ಶಾಲೆ ಮಾಡಬೇಡಿ ಎಂದೇ ಪ್ರತಿಭಟನೆ ನಡೆಯುತ್ತಿರುವುದು.

---------------------
ಹಣದಿಂದ ಮಕ್ಕಳನ್ನು ಬೆಳೆಸಲು ಹೋದರೆ ಮಕ್ಕಳು ಗುಣ ಹೀನರಾಗುತ್ತಾರೆ
- ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ.
ಹೆಣದಿಂದ ತಮ್ಮ ಸಂಘಟನೆ ಬೆಳೆಸಿರುವ ಬಗ್ಗೆಯೂ ಏನಾದರೂ ಹೇಳಿ.

---------------------

ಪೌರತ್ವ ಕಾಯ್ದೆಯನ್ನು ಅರ್ಥ ಮಾಡಿಕೊಳ್ಳದವರು ಮೂರ್ಖರು - ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ.
ಬಿಜೆಪಿಯೊಳಗಿರುವ ಎಲ್ಲ ನಾಯಕರೂ ಆ ಪದವಿಗೆ ಅರ್ಹರು.

---------------------

ಅನಿಷ್ಟ ಪದ್ಧತಿ ವಿರುದ್ಧ ಸ್ವಾಮಿ ವಿವೇಕಾನಂದರಂತೆ ಧ್ವನಿ ಎತ್ತಬೇಕು - ಸಿ.ಟಿ. ರವಿ, ಸಚಿವ.
ಅವಿವೇಕಿಯ ಬಾಯಲ್ಲಿ ವಿವೇಕಾನಂದ.

---------------------

ಕಲ್ಲಡ್ಕ ಪ್ರಭಾಕರ ಭಟ್ ಯಾರು ಎಂಬುದೇ ನನಗೆ ಗೊತ್ತಿಲ್ಲ - ಡಿ.ಕೆ.ಶಿವಕುಮಾರ್, ಶಾಸಕ.
ನಿಮಗೆ ಗೊತ್ತಿಲ್ಲ ಎನ್ನುವ ಕಾರಣಕ್ಕಾಗಿ ಅವರ ವಿರುದ್ಧ ಕೇಸು ದಾಖಲಿಸಿಲ್ಲವೇ?

---------------------

ದೇವರ ಹೆಸರಲ್ಲಿ ರಾಜಕಾರಣ ಮಾಡುವುದು ತಪ್ಪು - ಶ್ರೀರಾಮುಲು, ಸಚಿವ.
ಈ ವಿಷಯವನ್ನು ರಾಮಮಂದಿರ ಕಟ್ಟುವವರಿಗೆ ಹೇಳಿ.

---------------------

ನಾನು ಕುರ್ಚಿಗೆ ಅಂಟಿ ಕುಳಿತವನಲ್ಲ, ರಾಜೀನಾಮೆ ಕೊಡಲೂ ಸಿದ್ಧ - ಯಡಿಯೂರಪ್ಪ, ಮುಖ್ಯಮಂತ್ರಿ.
ತಾವು ರಾಜೀನಾಮೆ ಕೊಡುವುದಕ್ಕಾಗಿಯೇ ಆರೆಸ್ಸೆಸ್‌ನೊಳಗೆ ಕಾದು ಕುಳಿತವರಿದ್ದಾರೆ.

---------------------

ಅರ್ಜುನನ ಬಾಣದಲ್ಲಿ ಅಣುಶಕ್ತಿಯ ಅಂಶಗಳಿದ್ದವು - ಜಗದೀಪ್ ಧನ್ಕರ್, ಪ.ಬಂ. ರಾಜ್ಯಪಾಲ.
ಅಣುಒಪ್ಪಂದ ಮುರಿದ ಕಾರಣಕ್ಕಾಗಿ ಕುರುಕ್ಷೇತ್ರ ಯುದ್ಧ ನಡೆಯಿತಂತೆ.

---------------------

ಭಾರತವು ಇರಾನ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ಶಾಂತಿಗೆ ಮೊದಲ ಆದ್ಯತೆ ನೀಡುತ್ತದೆ - ನರೇಂದ್ರ ಮೋದಿ, ಪ್ರಧಾನಿ.
ಭಾರತದೊಳಗಿನ ಶಾಂತಿಗೂ ಒಂದಿಷ್ಟು ಆದ್ಯತೆ ನೀಡಿ.

---------------------

ಕಷ್ಟ ಕಾಲದಲ್ಲಿ ಸಹಾಯಕ್ಕೆ ಬಂದಿರುವವರ ಕೈ ಬಿಡುವ ಪ್ರಶ್ನೆಯೇ ಇಲ್ಲ - ಆರ್. ಅಶೋಕ್, ಸಚಿವ.
  ಕೈ ಕೊಡುವ ಪ್ರಶ್ನೆಯೇನಾದರೂ ಇದೆಯೇ

---------------------

ಬಿಜೆಪಿಯಲ್ಲಿ ನನ್ನಂತಹ ಕಾರ್ಯಕರ್ತನೂ ಅಧ್ಯಕ್ಷನಾಗಬಹುದು
- ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ.
 ಹೌದು. ನಿಮ್ಮಂತಹ ಸೂತ್ರದ ಗೊಂಬೆಗಳೇ ಅವರಿಗೆ ಬೇಕಾಗಿರುವುದು.

---------------------

ರಾಜ್ಯವನ್ನು ಲೂಟಿ ಮಾಡಲು ರಾಜ್ಯದ ಎಲ್ಲ ಸಚಿವರು ಅಂಗಡಿ ತೆರೆದು ಕುಳಿತು ಕೊಂಡಿದ್ದಾರೆ - ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.
ಹೌದು, ಈಗ ಲಾಭದಲ್ಲಿರುವುದು ಅವರ ಅಂಗಡಿಗಳು ಮಾತ್ರ. ಜನಸಾಮಾನ್ಯರ ಎಲ್ಲ ಅಂಗಡಿಗಳೂ ಮುಚ್ಚಿವೆ.

---------------------

ಸ್ವಾಮೀಜಿಗಳು ರಾಜಕಾರಣಿಗಳಿಗೆ ಬೆದರಿಕೆ ಹಾಕುವುದು ಒಳ್ಳೆಯದಲ್ಲ - ಎಚ್.ನಾಗೇಶ್, ಸಚಿವ.
ರಾಜಕಾರಣಿಗಳು ಚುನಾವಣೆಯಲ್ಲಿ ಸ್ವಾಮೀಜಿಗಳ ಬೆಂಬಲ ಪಡೆಯುವುದು ಸರಿಯೇ

---------------------

ಇನ್ನು 5 ವರ್ಷಗಳಲ್ಲಿ ಜನರು ಗಂಗೆಯಂತೆ ಯಮುನಾ ನದಿಯಲ್ಲೂ ಮುಳುಗೇಳುವಂತೆ ಮಾಡುತ್ತೇನೆ - ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ.
 ಕೊನೆಗೂ ಜನರಿಗೆ ಮುಳುಗುವುದೇ ಗತಿಯೇ

---------------------
ಭಯೋತ್ಪಾದನೆಯ ಭವಿಷ್ಯವು ಸಾಂಪ್ರದಾಯಿಕ ಯುದ್ಧದಂತೆಯೇ ಕೊಳಕಾಗಿರಲಿದೆ - ಜ.ಬಿಪಿನ್ ರಾವತ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ.
 ಹೌದು ಅವರೀಗ ಪೊಲೀಸರ, ಸೈನಿಕರ ವೇಷದಲ್ಲೂ ಪತ್ತೆಯಾಗುತ್ತಿದ್ದಾರೆ.

---------------------

ಜಗತ್ತೇ ಕುಟುಂಬ ಎಂಬುದು ಬಿಜೆಪಿಯ ಸಿದ್ಧಾಂತ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ.
ಕುಟುಂಬ ಒಡೆಯುವ ವಿಷಯದಲ್ಲಿ ಜಗತ್ತನ್ನೇ ಗುರಿ ಮಾಡಿದ್ದೀರಿ ಎಂದಾಯಿತು.

---------------------

ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವದ ಪಾಲು ಇನ್ನಷ್ಟು ಹೆಚ್ಚಾಗಿಸಲು ಎಲ್ಲ ಅಡಚಣೆಗಳನ್ನು ತೆರವುಗೊಳಿಸಲಾಗುವುದು - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಅಂದರೆ ಅದಾನಿಯನ್ನೂ ಸೇರಿಸಿಕೊಳ್ಳುವ ಉದ್ದೇಶವಿದೆ ಎಂದಾಯಿತು.

---------------------

ನಾನು ಕೇರಳ ಸರಕಾರದ ರಬ್ಬರ್ ಸ್ಟಾಂಪ್ ಅಲ್ಲ - ಆರಿಫ್ ಮುಹಮ್ಮದ್ ಖಾನ್, ಕೇರಳ ರಾಜ್ಯಪಾಲ.
ಕೇಂದ್ರ ಸರಕಾರದ ರಬ್ಬರ್ ಸ್ಟಾಂಬ್ ಎನ್ನುವುದು ನಮಗೂ ಗೊತ್ತಿದೆ.

---------------------

ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ 17 ಶಾಸಕರ ತ್ಯಾಗವನ್ನು ನಾವೆಂದೂ ಮರೆಯುವಂತಿಲ್ಲ - ಯಡಿಯೂರಪ್ಪ, ಮುಖ್ಯಮಂತ್ರಿ.
ಸ್ವಾತಂತ್ರಕ್ಕಾಗಿ ಹೋರಾಡಿದವರ ತ್ಯಾಗಕ್ಕಿಂತಲೂ ಮಿಗಿಲಾಗಿರಬೇಕು.

---------------------

ಕೆಲಸ ಮಾಡಲು ಯಾವ ಖಾತೆ ಆದರೇನು? - ಸಿ.ಟಿ.ರವಿ, ಸಚಿವ.
ಹೌದು, ಪೆಟ್ರೋಲ್ ಬಾಂಬ್ ಮೂಲಕ ಬೆದರಿಸಲು ಯಾವ ಖಾತೆಯಾದರೇನು?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!