ಓ ಮೆಣಸೇ…!

Update: 2020-03-09 07:23 GMT

ಮುಖ್ಯಮಂತ್ರಿ ಯಡಿಯೂರಪ್ಪರಿಗೆ ವಯಸ್ಸಾಗಿರಬಹುದು, ಆದರೆ ಅವರಿನ್ನೂ ಯುವಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ - ಬಿ.ವೈ. ವಿಜಯೇಂದ್ರ, ಬಿಜೆಪಿ ಯುವನಾಯಕ.

► ಅವರಿಗೆ ವಯಸ್ಸಾಗಿದೆ ಎನ್ನುವುದನ್ನು ಪದೇ ಪದೇ ಹೇಳುತ್ತಿರುವುದು ನೋಡಿದರೆ ಯುವಕರಿಗೆ ಅವರ ಹುದ್ದೆಯ ಮೇಲೆ ಕಣ್ಣು ಬಿದ್ದಿದೆ. 

******************

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ನಿರುದ್ಯೋಗಿ ರಾಜಕಾರಣಿ - ಈಶ್ವರ ಖಂಡ್ರೆ, ಕಾಂಗ್ರೆಸ್ ಕಾರ್ಯಾಧ್ಯಕ್ಷ.

► ರಾಜಕಾರಣಿ ಎಂದರೆ ಸಾಕು. ನಿರುದ್ಯೋಗಿ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. 

******************

ಇದೇ ವರ್ಷ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ - ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ.

 ► ದಿಲ್ಲಿ ಹತ್ಯಾಕಾಂಡದ ಮೇಲೆ ಅಷ್ಟೊಂದು ಭರವಸೆಯೇ?

******************

ಭಾರತದ ಮೊಟೆರಾ ಕ್ರೀಡಾಂಗಣದಲ್ಲಿ ತಮ್ಮ ಭಾಷಣಕ್ಕೆ ಸೇರಿರುವಷ್ಟು ಜನ ಬೇರೆಡೆ ಎಲ್ಲೂ ಸೇರಲಿಕ್ಕಿಲ್ಲ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ.

► ಅಮೆರಿಕದ ಜನರು ಭಾರತೀಯರಷ್ಟು ಮೂರ್ಖರಲ್ಲ. 

*******************

ಕಂಬಳದಲ್ಲಿ ಅಪ್ರತಿಮ ಓಟಗಾರರು ಉದಯಿಸುತ್ತಿರುವುದರಿಂದ ಇಡೀ ವಿಶ್ವವೇ ಕಂಬಳದತ್ತ ಬೆರಗು ಗಣ್ಣಿನಿಂದ ನೋಡುವಂತಾಗಿದೆ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ.

 ► ಅಂದರೆ ಭಾರತ ವಿಶ್ವಗುರುವಾಗುವುದಕ್ಕೆ ಕಂಬಳವೊಂದೇ ಕೊನೆಯ ಭರವಸೆಯೇ?

********************

ನನಗೆ 87 ವರ್ಷ ವಯಸ್ಸಾದರೂ ಮತ್ತೆ ರಾಜ್ಯದ ಮೂಲೆ ಮೂಲೆ ಸುತ್ತಿ ಪಕ್ಷ ಕಟ್ಟುತ್ತೇನೆ - ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ.

► ಪಕ್ಷ ಇನ್ನೂ ಕಟ್ಟುವ ಹಂತದಲ್ಲೇ ಇರುವುದು ವಿಷಾದನೀಯ. 

*********************

ಪಾಲಿಗೆ ಬಂದ ಪಂಚಾಮೃತ(ಸಚಿವ ಸ್ಥಾನ) ಎಂದು ಸ್ವೀಕರಿಸಿ ಒಳ್ಳೆಯ ಕೆಲಸ ಮಾಡಲು ಶ್ರಮಿಸುತ್ತೇನೆ - ವಿ. ಸೋಮಣ್ಣ, ಸಚಿವ.

► ನಿಮಗೆ ಅಮೃತ. ಜನರಿಗೆ ವಿಷ.

********************

ನಾಯಕರನ್ನು ಸೃಷ್ಟಿ ಮಾಡುವ ಜೆಡಿಎಸ್ ಈ ರೀತಿ ನಾಯಕರನ್ನು ಕಳೆದುಕೊಳ್ಳುತ್ತಾ ಹೋದರೆ ಪಕ್ಷ ಉಳಿಯಲ್ಲ - ಮಧು ಬಂಗಾರಪ್ಪ, ಮಾಜಿ ಶಾಸಕ.

► ದೇವೇಗೌಡರ ಮೊಮ್ಮಕ್ಕಳು ಕಾಲಿಟ್ಟಿದ್ದಾರಲ್ಲ ನಾಯಕತ್ವದ ಕೊರತೆಯನ್ನು ತುಂಬಲು?

*********************

ಪಶ್ಚಿಮ ಬಂಗಾಳ ಮತ್ತೊಂದು ದಿಲ್ಲಿಯಾಗಲು ನಾನು ಬಿಡುವುದಿಲ್ಲ - ಮಮತಾ ಬ್ಯಾನರ್ಜಿ, ಪ.ಬಂ. ಮುಖ್ಯಮಂತ್ರಿ.

► ದಿಲ್ಲಿ ಬೇಡವಾದರೆ ಗುಜರಾತ್ ಮಾಡುತ್ತೇವೆ. ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಅಮಿತ್ ಶಾ ಹೇಳುತ್ತಿದ್ದಾರೆ. 

**********************

ಭಾಷೆ ನಶಿಸಿದರೆ ಪರಂಪರೆ ಮತ್ತು ಸಂಸ್ಕೃತಿ ನಾಶವಾದಂತೆ - ಸಿ.ಟಿ. ರವಿ, ಸಚಿವ.

► ಹೌದು, ನಿಮ್ಮ ಭಾಷೆಯೇ ನಾಶವಾದ ಪರಂಪರೆ ಮತ್ತು ಸಂಸ್ಕೃತಿಯನ್ನು ಹೇಳುತ್ತಿದೆ. 

***********************

ನಮ್ಮದು ಅನೈತಿಕ ಸರಕಾರವಲ್ಲ, ನೈತಿಕ ಸರಕಾರ - ಯಡಿಯೂರಪ್ಪ, ಮುಖ್ಯಮಂತ್ರಿ.

► ಅನೈತಿಕತೆಯಿಂದ ಹುಟ್ಟಿದ ನೈತಿಕ ಸರಕಾರ. 

**********************

ಚಾತುರ್ವರ್ಣ ಪದ್ಧತಿಯಲ್ಲಿ ಕನಸು ಕಾಣಲು ಕೂಡಾ ಅವಕಾಶವಿಲ್ಲ - ರಮೇಶ್ ಕುಮಾರ್, ಮಾಜಿ ಸ್ಪೀಕರ್.

► ಇದೀಗ ಕೆಲವು ಶೂದ್ರರು ಮತ್ತೆ ಚಾತುರ್ವರ್ಣ ಪದ್ಧತಿಯ ಕನಸು ಕಾಣುತ್ತಿದ್ದಾರೆ.

*********************

ದೇಶದ ಅಭಿವೃದ್ಧಿಗೆ ಶಾಂತಿ, ಏಕತೆ, ಸೌಹಾರ್ದಗಳು ಅತೀ ಮುಖ್ಯ - ನರೇಂದ್ರ ಮೋದಿ, ಪ್ರಧಾನಿ.

► ಹೌದು. ಮೊದಲು ಅದನ್ನು ಹುಡುಕಿ ಕೊಡಿ.

************************

ಶೂರ, ಧೀರ ಎನಿಸಿಕೊಂಡ ಸಾವರ್ಕರ್ ಹೇಡಿಯಾಗಿದ್ದು ಏಕೆ ಎಂಬುದರ ಬಗ್ಗೆ ಸಂಶೋಧನೆ ನಡೆಯಬೇಕು - ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ ಹೋರಾಟಗಾರ.

► ಬಜೆಟ್‌ನಲ್ಲಿ ಅದಕ್ಕೆಂದೋ ಕೋಟ್ಯಂತರ ರೂಪಾಯಿ ಮೀಸಲಿಟ್ಟ ಬಗ್ಗೆ ಸುದ್ದಿಯಿದೆ. 

***********************

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನೂ ಜೈಲಿನಲ್ಲಿದ್ದೆ. ಅಲ್ಲಿ ನನಗೆ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಕಾಣಲಿಲ್ಲ - ಸೊಗಡು ಶಿವಣ್ಣ, ಮಾಜಿ ಸಚಿವ.

► ತುರ್ತುಪರಿಸ್ಥಿತಿಯಲ್ಲಿ ಹೋರಾಡಿ ಜೈಲು ಸೇರಿದವರನ್ನು, ಪಿಕ್‌ಪಾಕೆಟ್ ಮಾಡಿ ಜೈಲು ಸೇರಿದವರನ್ನು ಬೇರೆ ಬೇರೆ ಸೆಲ್‌ಗಳಲ್ಲಿ ಇಡುತ್ತಿದ್ದರಂತೆ. 

***********************

ದಿಲ್ಲಿ ಗಲಭೆಯಿಂದ ಜನರ ಗಮನ ಬೇರೆಡೆ ಸೆಳೆಯಲು ಕೊರೋನ ವೈರಸ್ ಬಗ್ಗೆ ಭಯ ಹುಟ್ಟಿಸಲಾಗುತ್ತಿದೆ - ಮಮತಾ ಬ್ಯಾನರ್ಜಿ, ಪ.ಬಂ. ಮುಖ್ಯಮಂತ್ರಿ.

► ದಿಲ್ಲಿ ಗಲಭೆಯಲ್ಲಿ ಪಾತ್ರವಹಿಸಿದ ವೈರಸ್, ಕೊರೋನಕ್ಕಿಂತ ಭೀಕರ. 

**************************

ಸಂವಿಧಾನವನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ - ಪ್ರತಾಪ ಚಂದ್ರ ಶೆಟ್ಟಿ, ವಿ.ಪ. ಸಭಾಪತಿ.

► ಸಂವಿಧಾನದಲ್ಲಿದ್ದ ಹಕ್ಕುಗಳನ್ನು ತಲುಪಿಸುವ ಅಗತ್ಯವಿಲ್ಲವೆ?

**************************

ಯಡಿಯೂರಪ್ಪ ಸರಕಾರ ರಚಿಸಿದಷ್ಟೇ ಹುಮ್ಮಸ್ಸಿನಲ್ಲಿ ಬಜೆಟ್ ಮಂಡಿಸಿಲ್ಲ - ಡಿ.ಕೆ. ಶಿವಕುಮಾರ್, ಮಾಜಿ ಸಚಿವ.

► ಅವರ ಬಜೆಟ್ ಹಣವೆಲ್ಲ ಸರಕಾರ ರಚಿಸುವಾಗಲೇ ಹಂಚಿ ಮುಗಿದಿದೆ. 

*************************

ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಎಲ್ಲದಕ್ಕೂ ಬಾಯಿ ಮತ್ತು ತಲೆ ಹಾಕಬಾರದು - ಎಚ್. ವಿಶ್ವನಾಥ್, ಮಾಜಿ ಸಚಿವ.

► ಯಾವು ಯಾವುದಕ್ಕೆಲ್ಲ ಹಾಕಬಹುದು ಎನ್ನುವುದರ ಒಂದು ಪಟ್ಟಿ ಕೊಡಿ. 

************************

ಪೊಲೀಸರು ಕಾನೂನು ಜಾರಿಗೊಳಿಸಲು ವಿಫಲವಾದರೆ ಪ್ರಜಾಪ್ರಭುತ್ವ ವಿಫಲವಾಗುತ್ತದೆ - ಅಜಿತ್ ಧೋವಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ

► ಅಂದರೆ ಪ್ರಜಾಪ್ರಭುತ್ವ ವಿಫಲಗೊಳಿಸಲು ಪೊಲೀಸರು ಕಾನೂನು ಜಾರಿಗೊಳಿಸದಂತೆ ನೋಡಿಕೊಂಡಿರಾ?

**************************

ರಾಮನಗರ ಮತ್ತು ಚೆನ್ನಪಟ್ಟಣ ನನ್ನ ಎರಡು ಕಣ್ಣುಗಳು - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.

►  ಕಣ್ಣು ದಾನ ವಾಡುವ ಯೋಜನೆಯೇನಾದರೂ ಇದೆಯೇ?

**************************

Writer - ಪಿ. ಎ. ರೈ

contributor

Editor - ಪಿ. ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!