ಓ ಮೆಣಸೇ...

Update: 2020-04-05 17:44 GMT

ಹಸಿವಿನ ಭಯ ಮರಣಕ್ಕಿಂತಲೂ ಭೀಕರವಾದುದು -ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಹಸಿವಿನಿಂದ ಬದುಕುವ ಕಲೆಯನ್ನು ಕಲಿಸಿ ಕೊಡುವ ಯೋಜನೆ ಇದೆಯೇ?

--------------------------------------

ಲಾಕ್‌ಡೌನ್‌ನಿಂದ ಮದ್ಯಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವ್ಯಸನಿಗಳ ಬೇಡಿಕೆಯಂತೆ ಮದ್ಯಪೂರೈಸುವುದು ಕಷ್ಟ -ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಆಹಾರ ಸಿಗದೇ ಸಾವಿಗೀಡಾಗುತ್ತಿರುವವರ ಗತಿಯೇನು?

--------------------------------------
ಕೊರೋನ ವೈರಸ್‌ಗಿಂತ ಹೆಚ್ಚು ಜನರು ಅದರ ಆತಂಕದಿಂದಲೇ ಸಾಯುತ್ತಿದ್ದಾರೆ -ನ್ಯಾ.ಎಸ್.ಎ.ಬೋಬ್ಡೆ, ಸಿಜೆಇ
ಪ್ರಧಾನಿ ಚಪ್ಪಾಳೆ, ದೀಪ ಇತ್ಯಾದಿಗಳಿಗಷ್ಟೇ ಸೀಮಿತವಾದರೆೆ ಜನರಿಗೆ ಆತಂಕವಾಗುವುದಿಲ್ಲವೇ?

--------------------------------------
(ಕೊರೋನ ಸೋಂಕಿನ ಬಗ್ಗೆ ) ಮುನ್ನೆಚ್ಚರಿಕೆ ನೀಡುವುದನ್ನು ಭಯಪಡಿಸುವುದು ಎಂದು ಭಾವಿಸಬೇಡಿ -ನರೇಂದ್ರ ಮೋದಿ, ಪ್ರಧಾನಿ
ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರೇನು?

--------------------------------------

ವಲಸೆ ಕಾರ್ಮಿಕರು ನಿಜವಾದ ಬಡವರಲ್ಲ
 -ಉಮಾಭಾರತಿ, ಬಿಜೆಪಿ ನಾಯಕಿ
ಅಂಬಾನಿ, ಅದಾನಿಯವರನ್ನು ಬಿಪಿಎಲ್ ಕಾರ್ಡ್‌ಗೆ ಸೇರಿಸಿದರೆ ಏನು?

--------------------------------------
ಕರ್ನಾಟಕದ ಜನರು ಶಿಸ್ತು ಮತ್ತು ಕಾನೂನು ಪಾಲನೆಗೆ ಹೆಸರಾದವರು -ಯಡಿಯೂರಪ್ಪ, ಮುಖ್ಯಮಂತ್ರಿ

ಪೊಲೀಸರು ಕಾನೂನು ಮುರಿಯುವುದಕ್ಕೆ ಹೆಸರಾಗಿದ್ದಾರೆ.

--------------------------------------

ರೋಗಕ್ಕೆ ಜಾತಿ, ಧರ್ಮಗಳಿಲ್ಲ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಭಾರತದಲ್ಲಿ ಅದನ್ನು ಮತಾಂತರಿಸಲಾಗಿದೆ.

--------------------------------------

ನಮ್ಮ ದೇಶದ ಮೇಲೆ ವಿಧಿಸಿರುವ ದಿಗ್ಭಂಧನಗಳನ್ನು ತೆರವುಗೊಳಿಸುವ ಅತ್ಯುತ್ತಮ ಅವಕಾಶ(ಕೊರೋನ ಹಿನ್ನೆಲೆ)ವನ್ನು ಅಮೆರಿಕ ಕಳೆದುಕೊಂಡಿದೆ - ಹಸನ್‌ರೂಹಾನಿ, ಇರಾನ್ ಅಧ್ಯಕ್ಷ

ಅದೀಗ ಸ್ವಯಂ ದಿಗ್ಬಂಧನದಿಂದ ನರಳುತ್ತಿದೆ.

--------------------------------------

ಲಾಕ್‌ಡೌನ್ ಗೊಂದಲಕ್ಕೆ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಕಾರಣ
 -ಭೂಪೇಶ್ ಬೇಲ್, ಛತ್ತೀಸ್‌ಗಡ ಮುಖ್ಯಮಂತ್ರಿ

ವಿಶ್ವಾಸ ಎನ್ನುವ ಪದ ಸದ್ಯದ ರಾಜಕಾರಣದಲ್ಲಿ ಅರ್ಥ ಕಳೆದುಕೊಂಡಿದೆ.

--------------------------------------

ರೈತರ ಬಹುತೇಕ ಸಮಸ್ಯೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು -ಎಸ್.ಟಿ.ಸೋಮಶೇಖರ್, ಸಚಿವ

ವರೆಗೆ ಮಾಡಿರುವುದು ಅಪ್ರಾಮಾಣಿಕ ಪ್ರಯತ್ನವಿರಬೇಕು.

--------------------------------------

ಚೀನಾದ ಕೊರೋನ ಅಂಕಿ ಸಂಖ್ಯೆ ಸುಳ್ಳು -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಇರಾಕ್, ಅಫ್ಘಾನಿಸ್ತಾನ, ಸಿರಿಯಾದಲ್ಲಿ ಮೃತರಾದ ನಾಗರಿಕರ ಅಂಕಿಸಂಕಿಗಳ ನಿಜದ ಕತೆಯೇನು?

--------------------------------------

ಕೊರೋನ ಸೋಂಕಿತರನ್ನು ಕಳಂಕಿತರಂತೆ ನೋಡಬಾರದು -ಡಾ.ಹರ್ಷವರ್ಧನ್, ಕೇಂದ್ರ ಸಚಿವ
ಕೊರೋನ ವೈಫಲ್ಯಕ್ಕಾಗಿ ನಿಮ್ಮನ್ನು ಕಳಂಕಿತರನ್ನಾಗಿ ನೋಡಬಹುದೇ?

--------------------------------------

ಪೂರ್ವ ಸಿದ್ಧತೆ ಇಲ್ಲದೆಯೇ ಲಾಕ್‌ಡೌನ್ ಘೋಷಿಸಿದ್ದರಿಂದ ಲಕ್ಷಾಂತರ ಮಂದಿ ನೋವು ಅನುಭವಿಸುವಂತಾಯಿತು -ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ
ಪೂರ್ವ ಸಿದ್ಧತೆಯೇ ಇಲ್ಲದೆ ನೋಟು ನಿಷೇಧ ಮಾಡಿದಾಗ ಅನುಭವಿಸಿದ್ದೇ ತಾನೇ?

--------------------------------------

 ಕೊರೋನ ಸೋಂಕಿನಿಂದ ದೇಶ ಗೆಲ್ಲಬೇಕು, ಜನತೆ ಉಳಿಯಬೇಕು ಎಂದಾದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು -ಸಿ.ಟಿ.ರವಿ, ಸಚಿವ

ಅಸ್ಪಶ್ಯತೆಯನ್ನು ಸಂವಿಧಾನ ವ್ಯಾಪ್ತಿಗೆ ಸೇರಿಸಿ ಬಿಡೋಣವೇ?

--------------------------------------

ಕೊರೋನ ಉಂಟುಮಾಡಿರುವ ಅಂಧಕಾರದಿಂದ ಹೊರಬರಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗಿ ದೀಪ ಬೆಳಗಬೇಕು
 - ನರೇಂದ್ರ ಮೋದಿ, ಪ್ರಧಾನಿ
ಅದಕ್ಕೆ ಮೊದಲು ಒಗ್ಗಟ್ಟಿನಿಂದ ಮನೆಯ ದೀಪ ಆರಿಸಬೇಕಲ್ಲ?

--------------------------------------

ಸರಕಾರಿ ಆದೇಶ ಧಿಕ್ಕರಿಸುವವರು ಮಾನವೀಯತೆಯ ಶತ್ರುಗಳು - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಸರಕಾರವೇ ಮಾನವೀಯತೆಯ ಶತ್ರುವಾದರೆ?

--------------------------------------

ಪ್ರಧಾನಿ ನರೇಂದ್ರ ಮೋದಿ ಒಬ್ಬ ಶೋ ಮ್ಯಾನ್ - ಶಶಿ ತರೂರ್, ಕಾಂಗ್ರೆಸ್ ಮುಖಂಡ

ಮ್ಯಾನ್ ಎನ್ನುವುದರ ಕುರಿತಂತೆ ಸಣ್ಣ ಅನುಮಾನವಿದೆ.

--------------------------------------

ನಿಝಾಮುದ್ದೀನ್ ಸಭೆಯ ಹಿಂದೆ ಕೊರೋನ ಜಿಹಾದಿಗಳಿದ್ದಾರೆ - ಶೋಭಾ ಕರಂದ್ಲಾಜೆ, ಸಂಸದೆ
ಸಭೆಯಲ್ಲಿ ತಾವೂ ಭಾಗವಹಿಸಿ ಬಂದಂತಿದೆ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!