ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ
ಬೆಂಗಳೂರು, ಮೇ 18: ಸಾರ್ವಜನಿಕ ಸ್ಥಳಗಳಲ್ಲಿ ಜನತೆ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
ಮಾಸ್ಕ್ ಧರಿಸದೇ ರಸ್ತೆಗಿಳಿಯುತ್ತಿರುವ ಸಾರ್ವಜನಿಕರಲ್ಲಿ ಕಡ್ಡಾಯ ಮಾಸ್ಕ್ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ವಾಹನಗಳಲ್ಲಿ ಮೈಕ್ ಮೂಲಕ ಜಾಗೃತಿ ಹಾಡು ಬಿತ್ತರಿಸಿ ಅರಿವು ಮೂಡಿಸಲಾಗುತ್ತಿದೆ. ಕಾನೂನು ಪಾಲಿಸದ, ಮಾಸ್ಕ್ ಧರಿಸದ ಜನತೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದೆ.
ನಗರದ ವ್ಯಾಪಾರಸ್ಥರು, ತರಕಾರಿ, ದಿನಸಿ ಮಾರಾಟಗಾರರು ಕೊರೋನ ವೈರಸ್ ಭೀತಿ ಹಿನ್ನೆಲೆ ಮಾಸ್ಕ್ ಕಡ್ಡಾಯಗೊಳಿಸಿದ್ದಾರೆ. ಜೊತೆಗೆ ತಾವೂ ಸಹ ಮಾಸ್ಕ್ ಧರಿಸಿಯೇ ವ್ಯಾಪಾರಕ್ಕೆ ಇಳಿದಿದ್ದು ಅಂಗಡಿ, ಮುಂಗಟ್ಟುಗಳಲ್ಲಿ ಮಾಸ್ಕ್ ಧರಿಸದಿದ್ದರೆ ಖರೀದಿಗೆ ಅವಕಾಶವಿಲ್ಲ ಎಂದು ಬೋರ್ಡ್‍ಗಳನ್ನು ನೇತು ಹಾಕಿದ್ದಾರೆ.
ಆದರೂ ನಗರದ ಜನತೆ ಮಾತ್ರ ಎಚ್ಚೆತ್ತುಕೊಂಡಿಲ್ಲ. ಕೆಲವು ಸಾರ್ವಜನಿಕರು ಕೊರೋನ ನಮ್ಮನ್ನೇನು ಮಾಡೀತು ಎಂಬ ಭಂಡ ಧೈರ್ಯದಿಂದಲೇ ಮಾಸ್ಕ್ ಇಲ್ಲದೇ ತಿರುಗಾಡುತ್ತಿದ್ದಾರೆ.