ಅಜೀಂ ಪ್ರೇಮ್‍ಜಿ ವಿರುದ್ಧದ ಅಕ್ರಮ ವರ್ಗಾವಣೆ ಆರೋಪ: ಸಮನ್ಸ್ ರದ್ದತಿಗೆ ಹೈಕೋರ್ಟ್ ನಕಾರ
Update: 2020-05-18 17:28 GMT
ಬೆಂಗಳೂರು, ಮೇ 18: ಉದ್ಯಮಿ ಅಜೀಂ ಪ್ರೇಮ್‍ಜಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ.
ಮೂರು ಕಂಪೆನಿಗಳ ಸ್ವತ್ತನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪ ಅಜೀಂ ಪ್ರೇಮ್‍ಜಿ ಮೇಲಿದೆ. ತನ್ನ ಒಡೆತನದ ನಾಲ್ಕು ಕಂಪೆನಿಗಳನ್ನು ಒಂದು ಕಂಪೆನಿ ವ್ಯಾಪ್ತಿಗೆ ತರುವುದು ಕಾನೂನು ಬಾಹಿರ. ಹೀಗಿರುವಾಗ ಪ್ರೇಮ್‍ಜಿ 13,602 ಕೋಟಿ ಮೌಲ್ಯದ ಸ್ವತ್ತನ್ನು ಹಾಷಮ್ ಇನ್ವೆಸ್ಟ್ ಮೆಂಟ್ ಕಂಪೆನಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಚೆನ್ನೈನ ಇಂಡಿಯಾ ಅವೇಕ್ ಫಾರ್ ಟ್ರಾನ್ಸ್ ಪರೆನ್ಸಿ ಎಂಬ ಸಂಸ್ಥೆ ದೂರು ನೀಡಿದೆ.
ಈ ಕಂಪೆನಿಗಳ ಆಸ್ತಿ ಸರಕಾರಕ್ಕೆ ಸೇರಬೇಕು ಎಂದು ಬೆಂಗಳೂರಿನ ವಿಶೇಷ ಕೋರ್ಟ್‍ಗೆ 3 ಖಾಸಗಿ ದೂರುಗಳನ್ನು ಸಲ್ಲಿಸಲಾಗಿದೆ.
ಜ.27ರಂದು ದೂರು ದಾಖಲಾಗಿದ್ದು, ಲೋಕಾಯುಕ್ತ ವಿಶೇಷ ಕೋರ್ಟ್‍ನಿಂದ ಅಜೀಂ ಪ್ರೇಮ್‍ಜಿ ದಂಪತಿಗೆ ಕೋರ್ಟ್‍ಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿತ್ತು.