ಪಾರ್ಕ್ ನಲ್ಲಿ ನವಜಾತ ಗಂಡು ಶಿಶು ಪತ್ತೆ

Update: 2020-05-19 15:00 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 19: ಇಲ್ಲಿನ ದೊಡ್ಡಬಳ್ಳಾಪುರದ ಹೊರವಲಯದ ಅಪೆರಲ್ಸ್ ಪಾರ್ಕ್‍ನಲ್ಲಿ ನವಜಾತ ಗಂಡು ಶಿಶುವೊಂದನ್ನು ಬಿಟ್ಟು ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಒಂದು ದಿನದ ಗಂಡು ಶಿಶು ಇದಾಗಿದ್ದು, ಬೆಳಗಿನ ಜಾವ ಅಪೆರಲ್ ಪಾರ್ಕ್‍ನ ರಸ್ತೆ ಬದಿ ಬಟ್ಟೆಯಲ್ಲಿ ಸುತ್ತಿ ಇಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ದಾರಿಹೋಕರ ಕಣ್ಣಿಗೆ ಮಗು ಕಾಣಿಸಿಕೊಂಡಿದ್ದು, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ವೃತ್ತದ ಪೊಲೀಸ್ ಅಧಿಕಾರಿಗಳು ಶಿಶುವನ್ನು ಸಾರ್ವಜನಿಕ ಆಸ್ಪತ್ರೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಪರಸ್ಪರ ಟ್ರಸ್ಟ್ ಗೆ ಶಿಶುವನ್ನ ಹಸ್ತಾಂತರ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News