ಭಾರತದಲ್ಲಿ ಒಂದೇ ದಿನ 9,987 ಕೊರೋನ ಪ್ರಕರಣಗಳು ಪತ್ತೆ

Update: 2020-06-09 10:04 IST

ಹೊಸದಿಲ್ಲಿ,ಜೂ.9: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲೆ ಸಂಖ್ಯೆಯ 9,987 ಹೊಸ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಭಾರತದಲ್ಲಿ ದೈನಂದಿನ ಪ್ರಕರಣದ ಸಂಖ್ಯೆ 10,000 ದತ್ತ ದಾಪುಗಾಲಿಡುತ್ತಿದೆ. ಮಂಗಳವಾರ ಭಾರತದಲ್ಲಿ ಒಟ್ಟು ಕೊರೋನ ವೈರಸ್ ಕೇಸ್‌ಗಳ ಸಂಖ್ಯೆ 2.66 ಲಕ್ಷ ದಾಟಿದೆ.

ಕೇಂದ್ರ ಸರಕಾರ ಸೋಮವಾರದಿಂದ ಎರಡು ತಿಂಗಳ ಲಾಕ್‌ಡೌನ್‌ನ್ನು ಇನ್ನಷ್ಟು ಸಡಿಲಿಸುವ ಹೆಜ್ಜೆ ಇಡುತ್ತಿರುವ ವೇಳೆಗೆ ಕೊರೋನ ಸೋಂಕಿತರ ಸಂಖ್ಯೆಯಲ್ಲೂ ಮತ್ತಷ್ಟು ಏರಿಕೆಯಾಗಿದೆ. ದೇಶದಲ್ಲಿ ಸತತ 7ನೇ ದಿನ 9,000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನ ಕೊರೋನ ಕೇಸ್‌ನ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News