ಜುಲೈ 31ರ ತನಕ ಲಾಕ್‌ಡೌನ್ ವಿಸ್ತರಿಸಿದ ಮಹಾರಾಷ್ಟ್ರ ಸರಕಾರ

Update: 2020-06-29 10:39 GMT

ಮುಂಬೈ, ಜೂ.29: ಮಹಾರಾಷ್ಟ್ರ ಸರಕಾರವು ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸಲು ರಾಜ್ಯದಾದ್ಯಂತ ಜುಲೈ 31ರ ತನಕ ಲಾಕ್‌ಡೌನ್ ವಿಸ್ತರಿಸಲು ನಿರ್ಧರಿಸಿದೆ. ರಾಜ್ಯದಲ್ಲಿ ಕೊರೋನ ಕಾಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ.

ಲಾಕ್‌ಡೌನ್ ವಿಸ್ತರಣೆಯ ವೇಳೆ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಅಗತ್ಯವಲ್ಲದ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರುವ ಪರಮಾಧಿಕಾರವನ್ನು ಸರಕಾರ ನೀಡಿದೆ. 'ಮಿಶನ್ ಬಿಗಿನ್ ಎಗೈನ್' ಎಂಬ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿರುವ ಮಹಾರಾಷ್ಟ್ರ ಸರಕಾರ, ಮುಂಬೈ ಮೆಟ್ರೊಪಾಲಿಟನ್ ವಲಯದ ನೆರೆಹೊರೆಯೊಳಗೆ ಅನಿವಾರ್ಯವಲ್ಲದ ಚಟುವಟಿಕೆಯನ್ನು ನಿರ್ಬಂಧಿಸಬೇಕು ಎಂದಿದೆ.

ಶಾಪಿಂಗ್ ಹಾಗೂ ಹೊರಾಂಗಣ ವ್ಯಾಯಾಮಗಳಂತಹ ಅಗತ್ಯವಲ್ಲದ ಚಟುವಟಿಕೆಗಳ ಉದ್ದೇಶಗಳಿಗೆ ವ್ಯಕ್ತಿಗಳ ಚಲನೆಯನ್ನು ನೆರೆಹೊರೆಯ ಪ್ರದೇಶದ ಮಿತಿಯೊಳಗೆ ನಿರ್ಬಂಧಿಸಲಾಗುವುದು. ಮಾಸ್ಕ್ ಧರಿಸುವುದು,ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಹಾಗೂ ವೈಯಕ್ತಿಕ ನೈರ್ಮಲ್ಯದ ಎಲ್ಲಾ ಅಗತ್ಯ ಕಡ್ಡಾಯ ಮುನ್ನಚ್ಚರಿಕೆಯೊಂದಿಗೆ ಮತ್ತಷ್ಟು ನಿರ್ದೇಶಿಸಲಾಗಿದೆ ಎಂದು ಪ್ರಕಟನೆಯೊಂದರಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರದಲ್ಲಿ 1.64 ಲಕ್ಷ ಜನರಿಗೆ ಕೊರೋನ ವೈರಸ್ ಸೋಂಕು ತಗಲಿದ್ದು, ದೇಶದಲ್ಲಿ ಅತ್ಯಂತ ಹೆಚ್ಚು ಸೋಂಕು ಬಾಧಿತ ರಾಜ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News