​‘‘ಸಚಿವ ಸುಧಾಕರ್ ಅವರೇ, ನಿಮ್ಮ ಮೂಗಿನ ಕೆಳಗೆ ಎಲ್ಲಾ ನಡಿತಾ ಇದ್ರೂ ಏಕೆ ಸುಮ್ಮನಿದ್ದಿರಿ?’’

Update: 2020-07-09 04:50 GMT

ಬೆಂಗಳೂರು, ಜು.9: ಕೋವಿಡ್ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ. ರಾಜ್ಯದ ಪ್ರಮುಖ ಕೋವಿಡ್ ಆಸ್ಪತ್ರೆಯಾದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಅವರನ್ನು ಆರು ವಾರಗಳ ಕಾಲ ಧಿಡೀರ್ ರಜೆ ಮೇಲೆ ಕಳುಹಿಸಲಾಗಿದೆ. ಆಸ್ಪತ್ರೆಗೆ ಸಂಬಂಧವೇ ಇಲ್ಲದವರನ್ನ ನಿರ್ದೇಶಕರನ್ನಾಗಿಸುವ ಪ್ರಯತ್ನವೂ ನಡೆದಿದೆ. ಇವೆಲ್ಲವೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರ ಮೂಗಿನ ಕೆಳಗೆ ನಡಿತಾ ಇದೆ. ಆದರೂ ಅವರೇಕೆ ಸುಮ್ಮನಿದ್ದಾರೆ? ಎಂದು ಸಚಿವ ಡಾ.ಸುಧಾಕರ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತರಾಟೆಗೈತ್ತಿಕೊಂಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಈಶ್ವರ ಖಂಡ್ರೆ, ಕೋವಿಡ್ ಸಮಸ್ಯೆ ಇರುವಾಗಲೇ ಆಸ್ಪತ್ರೆಯ ನಿರ್ದೇಶಕರನ್ನ ರಜೆಗೆ ಕಳುಹಿಸಿದ್ದು ಯಾಕೆ? ಏಕಾಏಕಿ ನಿರ್ದೇಶಕರನ್ನ ಬದಲಾಯಿಸುವುದರ ಅಗತ್ಯವಾದರೂ ಏನೂ? ಇದರ ಹಿಂದೆ ಯಾರ ಹಿತಾಸಕ್ತಿ ಇದೆ? ರಾಜ್ಯದ ಜನ ಪ್ರಶ್ನೆ ಕೇಳ್ತಿದ್ದಾರೆ ಉತ್ತರಿಸಿ... ಎಂದು ಸಚಿವ ಡಾ.ಸುಧಾಕರ್ ಅವರನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News