ಕಳ್ಳತನ ಮಾಡಿ ಪರಾರಿಯಾಗುತ್ತಿದ್ದವನನ್ನು ಹಿಡಿದ ಹೆಡ್ ಕಾನ್‍ಸ್ಟೆಬಲ್

Update: 2020-08-28 12:17 GMT

ಬೆಂಗಳೂರು, ಆ.28: ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯೋರ್ವನನ್ನು ಹೆಡ್ ಕಾನ್‍ಸ್ಟೆಬಲ್‍ವೊಬ್ಬರು ಹಿಡಿದು, ಬಂಧಿಸಿದ್ದಾರೆ.

ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಪುಲಿಕೇಶಿನಗರ ಸಂಚಾರ ಠಾಣಾ ವ್ಯಾಪ್ತಿಯ ಬಂಬೂ ಬಜಾರ್ ಸಿಗ್ನಲ್ ಬಳಿ ಈ ಘಟನೆ ನಡೆದಿದ್ದು, ಇದೇ ಠಾಣೆಯ ಹೆಡ್ ಕಾನ್‍ಸ್ಟೆಬಲ್ ನಾಗೇಂದ್ರ, ಕಳವು ಆರೋಪಿಯನ್ನು ಹಿಡಿದಿದ್ದಾರೆ.

ಬಂಬೂ ಬಜಾರ್ ಬಳಿ ನಡೆದುಕೊಂಡು ಹೋಗುತ್ತಿದ್ದ ಸತೀಶ್ ಎಂಬಾತನನ್ನ ಬೈಕ್‍ನಲ್ಲಿ ಬಂದ ಕಳ್ಳರು, ಸತೀಶನನ್ನು ಥಳಿಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಇದೇ ವೇಳೆ ರಾತ್ರಿ ಕರ್ತವ್ಯಕ್ಕೆ ಹಾಜರಾಗಲು ಠಾಣೆಗೆ ಬರುತ್ತಿದ್ದ ಹೆಡ್ ಕಾನ್‍ಸ್ಟೆಬಲ್ ನಾಗೇಂದ್ರ ಕಳ್ಳತನದ ದೃಶ್ಯ ಕಂಡಿದ್ದು, ಪರಾರಿ ಆಗಲು ಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆದು ಭಾರತೀನಗರ ಠಾಣೆಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News