ಪವರ್ ಟಿವಿಯನ್ನು ಬಂದ್ ಮಾಡಿಸಿದ ರಾಜ್ಯ ಸರಕಾರ: ಫೇಸ್ ಬುಕ್ ನಲ್ಲಿ ಕಣ್ಣೀರಿಟ್ಟು ಆರೋಪಿಸಿದ ರಹಮಾನ್

Update: 2020-09-29 00:05 IST
ಪವರ್ ಟಿವಿಯನ್ನು ಬಂದ್ ಮಾಡಿಸಿದ ರಾಜ್ಯ ಸರಕಾರ: ಫೇಸ್ ಬುಕ್ ನಲ್ಲಿ ಕಣ್ಣೀರಿಟ್ಟು ಆರೋಪಿಸಿದ ರಹಮಾನ್
  • whatsapp icon

ಬೆಂಗಳೂರು: ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಮಾಡಿದ್ದಾರೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ್ದಕ್ಕಾಗಿ ಕನ್ನಡ ಸುದ್ದಿ ವಾಹಿನಿ ‘ಪವರ್ ಟಿವಿ’ಯನ್ನು ಬಂದ್ ಮಾಡಲಾಗಿದೆ ಎಂದು ನಿರೂಪಕ ರಹಮಾನ್ ಹಾಸನ್ ಹೇಳಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವರು, “ಪವರ್ ಟಿವಿ ಮೇಲೆ ರೇಡ್ ಆಗಿದೆ. ಸಿಸಿಬಿ ಪೊಲೀಸರು, ಸರ್ಚ್ ವಾರಂಟ್ ಜೊತೆ ಬಂದಿದ್ದರು. ಅವರಿಗೆ ಬೇಕಾದ ಎಲ್ಲಾ ಡಾಕ್ಯುಮೆಂಟ್ ಗಳನ್ನು ಪಡೆದಿದ್ದಾರೆ. ನಮ್ಮ ಫೇಸ್ ಬುಕ್ ಲೈವನ್ನು ಸ್ಟಾಪ್ ಮಾಡಿದ್ದಾರೆ. ಚಾನೆಲನ್ನು ಬಂದ್ ಮಾಡಿದ್ದಾರೆ. 250 ಜನರು ಉದ್ಯೋಗಿಗಳಿರುವ ಚಾನೆಲನ್ನು ಬಂದ್ ಮಾಡಿದ್ದಾರೆ. ಇಂದು ಎಲ್ಲರೂ ಬೀದಿಗೆ ಬಂದಿದ್ದೇವೆ” ಎಂದಿದ್ದಾರೆ.

“ನಾವು ಸತ್ಯಕ್ಕಾಗಿ ಧ್ವನಿಯೆತ್ತಿದ್ದೇವೆ. ವಿಜಯೇಂದ್ರ ವಿರುದ್ಧ ಧ್ವನಿಯೆತ್ತುವುದನ್ನು ಮುಂದುವರಿಸುತ್ತೇವೆ. ಇವತ್ತು ನಮ್ಮ ಕುಟುಂಬಗಳನ್ನು ಬೀದಿಗೆ ತಂದಿದ್ದೀರಿ. ನಿಮಗೇನು ಮಾಡಿದ್ದೇವೆ” ಎಂದು ವಿಡಿಯೋದಲ್ಲಿ ಕಣ್ಣೀರಿಟ್ಟ ರಹಮಾನ್ ಪ್ರಶ್ನಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News