ಓ ಮೆಣಸೇ...

Update: 2020-11-15 19:30 GMT

ಅಮೆರಿಕ -ಭಾರತ ನಿಕಟ ಸ್ನೇಹಬಂಧ ಇರಿಸಿಕೊಂಡರಷ್ಟೇ ಜಗತ್ತು ಸುರಕ್ಷಿತವಾಗಿರಲಿದೆ - ಜೋ ಬೈಡನ್, ಅಮೆರಿಕ ಅಧ್ಯಕ್ಷ
ಆ ಜಗತ್ತಿನಲ್ಲಿ ಭಾರತದ ಸುರಕ್ಷತೆಯೂ ಸೇರಿಕೊಂಡಿದೆಯೇ?


ನಾನೊಬ್ಬ ಸಂತೃಪ್ತ ರಾಜಕಾರಣಿ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ನಿಮಗೆ ಮತ ನೀಡಿದ ಮತದಾರರ ಸಂತೃಪ್ತಿಯೂ ಮುಖ್ಯವಲ್ಲವೇ?


ವ್ಯಕ್ತಿ ಪೂಜೆ ಕಾಂಗ್ರೆಸ್‌ನ ಸಂಸ್ಕೃತಿ - ನಳಿನ್‌ಕುಮಾರ್ ಕಟೀಲು, ಸಂಸದ
ಮೋದಿಯ ಹೆಸರಲ್ಲಿ ಮತ ಯಾಚಿಸಿ ಗೆಲ್ಲುವುದು ಯಾರ ಸಂಸ್ಕೃತಿ?


 ಗುಡ್ಡಗಾಡು ಗುಡಿಸಲುಗಳಲ್ಲಿ ಪರದಾಡುತ್ತಿರುವ ಬಡ ಕುರುಬರಿಗಾಗಿ ನಾವು ಎಸ್ಟಿ ಮೀಸಲಾತಿ ಕೇಳುತ್ತಿದ್ದೇವೆಯೇ ಹೊರತು ನಮಗಲ್ಲ - ಕೆ.ಎಸ್.ಈಶ್ವರಪ್ಪ, ಸಚಿವ
ಆದರೆ ಆರೆಸ್ಸೆಸ್ ಮೀಸಲಾತಿ ವಿರೋಧಿಯಲ್ಲವೇ?


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರುವ ಬಗ್ಗೆ ಗುಮಾನಿ ಇದೆ - ಪ್ರತಾಪ ಸಿಂಹ, ಸಂಸದ
ತಾವು ‘ಮೈ ಜೋಡಿಸಿದ’ ಆಡಿಯೊ ಕುರಿತ ಗುಮಾನಿಯನ್ನು ಪರಿಹರಿಸಿ.


ಪ್ರಜಾಪ್ರಭುತ್ವದಲ್ಲಿ ಜನರೇ ರಾಜರು - ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ
ಮೊದಲು ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರಬೇಕು.


ದೇಶದಲ್ಲಿ ಅಭಿವೃದ್ಧಿ ಪರ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯ - ದಿನೇಶ್ ಗುಂಡೂರಾವ್,
ಕಾಂಗ್ರೆಸ್ ನಾಯಕ ಮತದಾರರಿಗೂ ಅದು ಅನಿಸಬೇಡವೇ?


ಸೈನ್ಯವನ್ನು ನಂಬದ ಕಾಂಗ್ರೆಸಿಗರು ತಾಯಿಯನ್ನು ನಂಬುತ್ತಾರಾ? -ಸಿ.ಟಿ.ರವಿ, ಸಚಿವ
ಸೇನೆಯನ್ನು ಉಗ್ರರಿಗೆ ಬಲಿಕೊಡುತ್ತಿರುವವರು ತಮ್ಮ ....ಬಲಿಕೊಡದೆ ಬಿಡುತ್ತಾರಾ ಎಂದು ಪ್ರತಿಯಾಗಿ ಕೇಳುವ ಸನ್ನಿವೇಶ ಸೃಷ್ಟಿಸಿದಿರಿ.


ಈಗ ಭಾರತದಲ್ಲಿ ವಾತಾವರಣ ಹೇಗಿದೆ ಎಂದರೆ ‘ಚುನಾವಣೆ ಎಂದರೆ ಬಿಜೆಪಿಯ ಗೆಲುವು ಕಾಂಗ್ರೆಸ್‌ನ ಸೋಲು’ ಎಂಬಂತೆ ಸಾಗಿದೆ - ಕೆ.ಎಸ್.ಈಶ್ವರಪ್ಪ, ಸಚಿವ ಯಾರು ಗೆದ್ದರೂ ಮತದಾರರ ಸೋಲು ಖಚಿತ.


ದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕು - ಜ.ಬಿಪಿನ್ ರಾವತ್, ರಕ್ಷಣಾ ಮುಖ್ಯಸ್ಥ
ರಫೇಲ್‌ನಿಂದ ಸಾಮರ್ಥ್ಯ ಹೆಚ್ಚಿಲ್ಲ ಅಂತೀರಾ?


ನಾನು ಮತ್ತು ಬೈಡನ್ ಸೇರಿ ಅಮೆರಿಕದ ಇತಿಹಾಸದ ಹೊಸ ಅಧ್ಯಾಯವನ್ನು ಬರೆಯಲಿದ್ದೇವೆ - ಕಮಲಾ ಹ್ಯಾರಿಸ್, ಅಮೆರಿಕ ಉಪಾಧ್ಯಕ್ಷೆ
ನಮ್ಮ ಮೋದಿಯವರನ್ನು ಸೇರಿಸಿಕೊಳ್ಳುವುದಿಲ್ಲವೇ?


ಸಾಧನೆ ಮಾತನಾಡಬೇಕೇ ಹೊರತು ಮಾತೇ ಸಾಧನೆಯಾಗಬಾರದು - ಯಡಿಯೂರಪ್ಪ, ಮುಖ್ಯಮಂತ್ರಿ
ಮೋದಿಯವರನ್ನು ಉಲ್ಲೇಖಿಸಿ ಇಂತಹ ಮಾತೇ?


ಬೀದರ್ ಶಾಸಕ ರಹೀಂ ಖಾನ್ ನನ್ನ ಜೊತೆಯಲ್ಲಿ ಬಿಜೆಪಿಗೆ ಸೇರಿದ್ದರೆ ಇಂದು ಮಂತ್ರಿಯಾಗಿರುತ್ತಿದ್ದರು -ಎಸ್.ಟಿ.ಸೋಮಶೇಖರ್, ಸಚಿವ
 ಸಚಿವ ಸ್ಥಾನಕ್ಕಿಂತ ಮಾನ, ಮರ್ಯಾದೆ ಮುಖ್ಯ ಎಂದು ಅವರು ಭಾವಿಸಿರಬೇಕು.


ರಾಜಕೀಯ ಪಕ್ಷಗಳಿಗೆ ಉಪ ಚುನಾವಣೆಯ ಫಲಿತಾಂಶ ಭವಿಷ್ಯದ ಮಂತ್ರ ದಂಡವಲ್ಲ- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಚುನಾವಣೆಯಲ್ಲಿ ಬರೇ ಮಂತ್ರವನ್ನು ನಂಬಿದವರ ಮಾತು.


ಬಿಹಾರದಲ್ಲಿ ನಿತೀಶ್‌ಕುಮಾರ್‌ರನ್ನು ‘ಏಣಿ’ಯಾಗಿ ಬಳಸಿಕೊಂಡು ನಾವೀಗ ಅಲ್ಲಿ ದೊಡ್ಡಸ್ಥಾನಕ್ಕೆ ಏರಿ ನಿಂತಿದ್ದೇವೆ - ಉಮಾಭಾರತಿ, ಬಿಜೆಪಿ ನಾಯಕಿ
ಅದು ಬಿಹಾರವನ್ನು ಉಣ್ಣುವುದಕ್ಕೆ ಬಳಸಿದ ಬಾಳೆ ಎಲೆ. ಬೇಗ ತೊಟ್ಟಿ ಸೇರಲಿದೆ.


ಪ್ರಧಾನಿ ಮೋದಿ ರಾಜ ಋಷಿ. ಅವರು ಪ್ರಧಾನಿ ಆಗಿದ್ದು ನಮ್ಮೆಲ್ಲರ ಸೌಭಾಗ್ಯ - ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ
ಅವರು ಪ್ರಧಾನಿಯಾಗಿದ್ದುದರಿಂದ ಅದೆಷ್ಟೋ ಉದ್ದಿಮೆಗಳು ಮುಚ್ಚಿ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನಿಮ್ಮ ಪಾಲಿಗೆ ಸೌಭಾಗ್ಯವೇ?


ಮಹಿಳೆಯರೇ ನಮ್ಮ ವೌನ ಮತದಾರರು -ನರೇಂದ್ರ ಮೋದಿ, ಪ್ರಧಾನಿ
ಮಹಿಳೆಯರು ವೌನವಾಗಿರುವುದು ನಿಮ್ಮ ಗೆಲುವಿಗೆ ಕಾರಣವೇ?


ಸರಕಾರ ನನ್ನನ್ನು ಜೈಲಿಗೆ ಹಾಕಿದರೂ ಸರಿ ದೀಪಾವಳಿ ಹಬ್ಬದ ಮೂರು ದಿನವೂ ಪಟಾಕಿ ಹೊಡೆಯುತ್ತೇನೆ - ವಾಟಾಳ್ ನಾಗರಾಜ್, ವಾಟಾಳ್ ಪಕ್ಷದ ಅಧ್ಯಕ್ಷ ನೀವೇ ಒಂದು ಪಟಾಕಿ, ನಿಮಗೆ ಇನ್ನೊಂದು ಪಟಾಕಿಯ ಅಗತ್ಯವಿದೆಯೆ?


 ಯಾವತ್ತಿದ್ದರೂ ಯಡಿಯೂರಪ್ಪ ಯಡಿಯೂರಪ್ಪನೇ, ರಾಜಾ ಹುಲಿ ರಾಜಾ ಹುಲಿಯೇ  - ಬಿ.ಸಿ.ಪಾಟೀಲ್, ಸಚಿವ
ಮನುಷ್ಯರನ್ನು ಪ್ರಾಣಿಗೇಕೆ ಹೋಲಿಸುತ್ತೀರಿ?


ಎಲ್ಲಿ ಮೋದಿ ಇದ್ದಾರೋ ಅಲ್ಲಿ ಎಲ್ಲವೂ ಸಾಧ್ಯ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಭಾರತದ ಸದ್ಯದ ಆರ್ಥಿಕತೆಯ ಸ್ಥಿತಿ ನೋಡುವಾಗ ಹೌದು ಅನ್ನಿಸುತ್ತದೆ.


ಸಚಿವ ಸ್ಥಾನ ಬೇಡ ಎನ್ನುವಷ್ಟು ದೊಡ್ಡ ಮನುಷ್ಯ ನಾನಲ್ಲ - ರಾಜುಗೌಡ, ಮಾಜಿ ಸಚಿವ
ತಗೊಳ್ಳಿ ಎಂದು ಕೊಡುವಷ್ಟು ದೊಡ್ಡ ಮನುಷ್ಯರು ಅವರೂ ಅಲ್ಲ.


ಜೈಲಿನಲ್ಲಿ ಮಾನವೀಯತೆ ಮೆರೆಯುತ್ತಿದೆ- ಸ್ಟಾನ್ ಸ್ವಾಮಿ, ಮಾನವ ಹಕ್ಕು ಹೋರಾಟಗಾರರು
ಮಾನವಂತರನ್ನೆಲ್ಲ ಸರಕಾರ ಜೈಲಿಗೆ ತಳ್ಳುತ್ತಿರುವುದರ ಪರಿಣಾಮ ಅದು.


ಕಾಂಗ್ರೆಸ್ ಮೋದಿಯನ್ನು ವಿರೋಧಿಸುವ ಭರದಲ್ಲಿ ದೇಶವನ್ನೇ ವಿರೋಧಿಸುತ್ತಿದೆ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಮೋದಿಯನ್ನು ಹೊಗಳುವ ಭರದಲ್ಲಿ ದೇಶವನ್ನು ಮರೆಯಬಾರದಲ್ಲವೆ?


 ರಾಜ್ಯದ ಪ್ರತಿಯೊಂದು ಗ್ರಾಪಂ ಮಟ್ಟದಲ್ಲೂ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪಿಸಲಾಗುವುದು - ಬಿ.ಸಿ.ಪಾಟೀಲ್, ಸಚಿವ
ವಿಷ್ಯದಲ್ಲಿ ಜನರಿಗೆ ಮಣ್ಣನ್ನೇ ತಿನ್ನಿಸುವ ಉದ್ದೇಶವಿರಬಹುದೇ?


 ಎಲ್ಲ ದೇಶಗಳು ನೆರೆ ರಾಷ್ಟ್ರಗಳ ಸಾರ್ವಭೌಮತೆಯನ್ನು ಗೌರವಿಸಬೇಕು  -ನರೇಂದ್ರ ಮೋದಿ, ಪ್ರಧಾನಿ
 ಪ್ಲೀಸ್...ಪ್ಲೀಸ್....ಗೌರವಿಸಿ....

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!