ಭಾರತದ ಈಜುಗಾರ್ತಿ ಮಾನಾ ಪಟೇಲ್ ಒಲಿಂಪಿಕ್ಸ್ ಗೆ ಅರ್ಹತೆ

Update: 2021-07-02 12:26 IST
photo: The Indian express

ಹೊಸದಿಲ್ಲಿ: ಭಾರತೀಯ ಮಹಿಳಾ ಈಜುಗಾರ್ತಿ ಮಾನಾ ಪಟೇಲ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದನ್ನು ‘ಯೂನಿವರ್ಸಲಿಟಿ ಕೋಟಾ’ ಮೂಲಕ ಖಚಿತಪಡಿಸಲಾಗಿದೆ ಎಂದು ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ತಿಳಿಸಿದೆ.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮಾನಾ ಪಟೇಲ್  100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಭಾಗವಹಿಸಲಿದ್ದು, ಶ್ರೀಹರಿ ನಟರಾಜ್ ಹಾಗೂ  ಸಾಜನ್ ಪ್ರಕಾಶ್  ಬಳಿಕ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿರುವ ಭಾರತದ ಮೂರನೇ ಸ್ವಿಮ್ಮರ್ ಆಗಿದ್ದಾರೆ.  ಇತ್ತೀಚೆಗೆ ಒಲಿಂಪಿಕ್ ಕ್ವಾಲಿಫಿಕೇಷನ್ ಟೈಮಿಂಗ್ (ಒಕ್ಯೂಟಿ) ‘ಎ’ ಮಟ್ಟವನ್ನು ಸಾಧಿಸಿದ ನಂತರ ನಟರಾಜ್ ಹಾಗೂ  ಪ್ರಕಾಶ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು.

ಯುನಿವರ್ಸಲಿಟಿ ಕೋಟಾವು ಒಂದು ದೇಶದಿಂದ ಒಬ್ಬ ಪುರುಷ ಹಾಗು  ಒಬ್ಬ ಮಹಿಳಾ ಸ್ಪರ್ಧಿಯನ್ನು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ.

ಇದು ಅದ್ಭುತ ಅನುಭವ.. ನಾನು ಸಹ ಈಜುಗಾರರಿಂದ ಒಲಿಂಪಿಕ್ಸ್ ಬಗ್ಗೆ ಕೇಳಿದ್ದೇನೆ . ಅದನ್ನು ದೂರದರ್ಶನದಲ್ಲಿ ನೋಡಿದ್ದೇನೆ ಮತ್ತು ಬಹಳಷ್ಟು ಚಿತ್ರಗಳನ್ನು ನೋಡಿದ್ದೇನೆ ”ಎಂದು ಮಾನಾ ಒಲಿಂಪಿಕ್ಸ್.ಕಾಂಗೆ ತಿಳಿಸಿದರು.

21 ರ ಹರೆಯದ ಮಾನಾ ಪಟೇಲ್  2019 ರಲ್ಲಿ ಪಾದದ ಗಾಯದಿಂದ ಬಳಲುತ್ತಿದ್ದರು. ಈ ವರ್ಷದ ಆರಂಭದಲ್ಲಿ ಕ್ರೀಡೆಗೆ ಪುನರಾಗಮನ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News