ಆನ್‌ಲೈನ್ ತರಗತಿಗಾಗಿ ವಿದ್ಯಾರ್ಥಿಗಳ ಪರದಾಟ: ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದ ದುಃಸ್ಥಿತಿ ಕೇಳುವವರಿಲ್ಲ!
ಮಂಗಳೂರು, ಅ.11: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಬಳ್ಳಕ, ಮೊಗ್ರ ಸುತ್ತ ಮುತ್ತಲಿನ ಪ್ರದೇಶ ಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ತೀವ್ರವಾಗಿದ್ದು, ಪ್ರಸಕ್ತ ಆನ್‌ಲೈನ್ ತರಗತಿಗಳು ನಡೆ ಯುತ್ತಿರುವುದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಅದೇರೀತಿ ರಸ್ತೆ ಅಪ ಘಾತದ ವೇಳೆ, ತುರ್ತಾಗಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಬೇಕಾದ ಸಂದರ್ಭದಲ್ಲಿ ಆ್ಯಂಬುಲೆನ್ಸ್‌ಗೆ ಕರೆ ಮಾಡಲು ಊರಿಡೀ ಓಡಾಡಬೇಕಾದ ಪರಿಸ್ಥಿತಿ ಇದ್ದು, ಇಂಟರ್‌ನೆಟ್ ಸೌಲಭ್ಯ ಸಿಗಬೇಕಿದ್ದರೆ ಗುಡ್ಡದ ಮೇಲೇರುವುದು ಅನಿವಾರ್ಯವಾಗಿದೆ.
ದೇಶ ಡಿಜಿಟಲ್‌ಮಯವಾಗುತ್ತಿದೆ. ಆದರೆ ಬಳ್ಳಕ, ಮೊಗ್ರ ಗ್ರಾಮಸ್ಥರು ಮೊಬೈಲ್ ನೆಟ್‌ವರ್ಕ್‌ಗೊಸ್ಕರ ಊರಿನ ಯಾವುದೋ ಎತ್ತರದ ಪ್ರದೇಶ, ಗುಡ್ಡವನ್ನು ಏರಬೇಕಿದೆ. ಇಲ್ಲಿನ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಸ್ಥಳೀಯ ಅಧಿಕಾರಿ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನ ದೊರೆತಿಲ್ಲ ಎಂದು ಇಲ್ಲಿನ ನಾಗರಿಕರು ಬೇಸರಿಸುತ್ತಾರೆ. ಈ ಪ್ರದೇಶ ವ್ಯಾಪ್ತಿಯಲ್ಲಿ 80ರಷ್ಟು ವಿದ್ಯಾರ್ಥಿಗಳು ತಮ್ಮ ಮನೆಗೆಳಿಂದ ಸುಮಾರು ದೂರದ ಗುಡ್ಡ ಪ್ರದೇಶಕ್ಕೆ ತೆರಳಿ ಕಾಡುಪ್ರಾಣಿಗಳ ಹಾವಳಿಗಳ ಮಧ್ಯೆ ಆನ್‌ಲೈನ್ ತರಗತಿ ಕೇಳುತ್ತಿ ದ್ದಾರೆ. ಸದ್ಯ ಶಾಲೆ- ಕಾಲೇಜುಗಳ ಕೆಲವು ಭೌತಿಕ ತರಗತಿಗಳು ಆರಂಭಗೊಂಡಿದ್ದರೂ ಕೆಲವೊಮ್ಮೆ ಆನ್‌ಲೈನ್ ಮೂಲಕ ಕಳಿಸುವ ಪಠ್ಯ ಸಂಬಂಧಿ ಫೈಲ್‌ಗಳು, ಪರೀಕ್ಷಾ ವೇಳಾಪಟ್ಟಿ ನಮಗೆ ಸಿಗುವಾಗ ಕೆಲವೊಮ್ಮೆ ಪರೀಕ್ಷೆ ಕಳೆದಿರುತ್ತವೆ. ಗ್ರಾಮೀಣ ಭಾಗವಾಗಿರುವುದರಿಂದ ಸರಿಯಾದ ಸಮಯಕ್ಕೆ ಸಂಚಾರ ವ್ಯವಸ್ಥೆ ಇಲ್ಲದಿರುವುದರಿಂದ ಅನಿವಾರ್ಯ ಕಾರಣಗಳಿಗೆ ಮನೆಗೆ ಕರೆ ಮಾಡಲು ಅಸಾ
ಧ್ಯವಾಗುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮ ನೋವು ತೋಡಿಕೊಂಡಿದ್ದಾರೆ. 4ಜಿ ಟೆಂಟ್: ಮಳೆಗಾಲದಲಿ್ಲ ಗುಡ್ಡಗಾಡು, ರಸ್ತೆ ಬದಿಯಲಿ್ಲ ನೆಟ್‌ವರ್ಕ್‌ಗಾಗಿ ಪರದಾಟ ಮಾಡಬೇಕಾಗುತ್ತದೆ. ರಬ್ಬರ್ ತೋಟದ ಮಧ್ಯೆ ಪರ್ಯಾಯವಾಗಿ ಶೀಟ್ ಹಾಕಿ ಒಂದು ಟೆಂಟ್ ನಿರ್ಮಿಸಿ ಅದರಡಿಯಲ್ಲಿ ಇಂಟರ್‌ನೆಟ್ ಬಳಸುತ್ತಿದ್ದಾರೆ. ಈ ಟೆಂಟ್‌ಗೆ 4ಜಿ ಟೆಂಟ್ ಎಂದು ಇಲ್ಲಿಯ ಗ್ರಾಮಸ್ಥರು ಹೆಸರಿಟ್ಟಿದ್ದಾರೆ. ವರ್ಕ್ ಫ್ರಂ ಹೋಂ ನಿರ್ವಹಿಸುವ ಉದ್ಯೋಗಿಗಳು ಊರಿನಿಂದ ಹೊರಗೆ ಪಿಜಿಯಲ್ಲಿ ಉಳಿದುಕೊಂಡಿದ್ದಾರೆ.
ಕ್ಷೇತ್ರದ ಶಾಸಕರಿಗೆ ಬಳ್ಳಕ ಎಂಬ ಊರು ಇದೆಯಾ ಎಂದೇ ಗೊತ್ತಿಲ್ಲವೆನ್ನಿಸುತ್ತದೆ. ಇಲ್ಲಿ ಕೇವಲ ಆನ್‌ಲೈನ್ ತರಗತಿಗೆ ಮಾತ್ರ ನೆಟ್‌ವರ್ಕ್ ಇಲ್ಲದಿರುವುದಲ್ಲ ಇಲ್ಲಿ ನೆಟ್‌ವರ್ಕ್ ಸಮಸ್ಯೆ ಮುಗಿಯದ ಗೋಳು ಆಗಿ ಬಿಟ್ಟಿದೆ. ಆನ್‌ಲೈನ್ ಬಿಲ್, ಶಾಪಿಂಗ್, ಬ್ಯಾಂಕಿಗ್ ದೂರದ ಮಾತು. ನಗರದ ಮಕ್ಕಳು ಇಂಟರ್‌ನೆಟ್‌ನಲ್ಲಿ ಮುಳುಗಿ ಹೋಗಿದ್ದಾರೆ. ಆದರೆ ಇಲ್ಲಿಯ ಪದವಿ ವಿದ್ಯಾರ್ಥಿಗಳು ಇಂಟರ್‌ನೆಟ್‌ನಿಂದ ಹಿಂದುಳಿದು ಬಿಟ್ಟಿದ್ದಾರೆ ಎಂದು ವಿದ್ಯಾರ್ಥಿ ಉಜೀತ್ ಶ್ಯಾಂ ಮತ್ತು ವರ್ಕ್‌ಫ್ರಂ ಹೋಂ ಉದ್ಯೋಗಿ ಮನೀಶ್ ಬಿ.ಸಿ. ನೋವು ಹಂಚಿಕೊಂಡಿದ್ದಾರೆ.