ಓ ಮೆಣಸೇ...!

Update: 2021-11-07 19:30 GMT

ದೇಶವು ಆಂತರಿಕ ಮತ್ತು ಬಾಹ್ಯವಾಗಿ ಎದುರಾಗುವ ಯಾವುದೇ ಸವಾಲುಗಳನ್ನು ಹಿಮ್ಮೆಟ್ಟಿಸಲು ಸಮರ್ಥವಾಗಿದೆ - ನರೇಂದ್ರ ಮೋದಿ, ಪ್ರಧಾನಿ
ಉಪ ಚುನಾವಣೆಯ ಫಲಿತಾಂಶದಲ್ಲಿ ಅದು ಸಾಬೀತಾಗಿದೆ.


ಜನರ ಆದಾಯ ಹೆಚ್ಚುತ್ತಿರುವಾಗ ಬೆಲೆ ಏರಿಕೆಯನ್ನೂ ಅವರು ಒಪ್ಪಿಕೊಳ್ಳಲೇಬೇಕು -ಮಹೇಂದ್ರ ಸಿಂಗ್ ಸಿಸೋಡಿಯಾ, ಮಧ್ಯಪ್ರದೇಶ ಸಚಿವ
ಹೆಚ್ಚುತ್ತಿರುವುದು ಆದಾಯ ಅಲ್ಲ, ಆತ್ಮಹತ್ಯೆಗಳು.


ರಾಜಕೀಯದಲ್ಲಿ ಕೆಟ್ಟ ಪದಗಳ ಬಳಕೆ ಮಾಡಿದರೆ ಜನ ನಮ್ಮನ್ನು ಛೀ, ಥೂ ಎಂದು ಉಗಿಯುತ್ತಾರೆ - ಕೆ.ಎಸ್.ಈಶ್ವರಪ್ಪ, ಸಚಿವ
ಇನ್ನಾದರೂ ಬಳಕೆ ನಿಲ್ಲಿಸಿ.


2023ರ ವಿಧಾನಸಭೆ ಚುನಾವಣೆ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಲಿದ್ದು, ಮುಂದಿನ ಮುಖ್ಯಮಂತ್ರಿ ಅವರೇ ಆಗಲಿದ್ದಾರೆ - ವಿ.ಸೋಮಣ್ಣ, ಸಚಿವ
ಬೊಮ್ಮಾಯಿ ವಿರುದ್ಧ ಯಡಿಯೂರಪ್ಪ ಸ್ಪರ್ಧಿಸುವ ಸಾಧ್ಯತೆಗಳಿವೆ.


ಕೆಲವೊಮ್ಮೆ ಸತ್ಯ ಮಾತನಾಡಿದರೆ ಅದು ವಿವಾದವಾಗಿ ಪರಿವರ್ತನೆಯಾಗಿ ಬಿಡುತ್ತದೆ- ಸಿ.ಟಿ.ರವಿ, ಶಾಸಕ
ವಿವಾದವಾಗುತ್ತದೆ ಎಂದು ಹೆದರಿ ನೀವು ಸತ್ಯ ಮಾತನಾಡುವುದಿಲ್ಲವೇ?


ಪ್ರಧಾನಿ ಮೋದಿ ರೋಮ್‌ನಲ್ಲ್ಲಿ ಪೋಪ್ ಫ್ರಾನ್ಸಿಸ್‌ರನ್ನು ಭೇಟಿ ಮಾಡಿದ್ದು ತಪ್ಪಲ್ಲ - ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಸಹ ಕಾರ್ಯವಾಹ
ತಪ್ಪೆಲ್ಲ ಭಾರತದ ಕ್ರಿಶ್ಚಿಯನ್ನರದಿರಬಹುದೆ?.


ಸೂರ್ಯ -ಚಂದ್ರ ಇರುವರೆಗೂ ಯಾವುದೇ ಶಕ್ತಿಗೆ ಕನ್ನಡವನ್ನು ಅಳಿಸಲು ಸಾಧ್ಯವಿಲ್ಲ - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಜನರಿಗದು ‘ಆಲಿಸಲು’ ಎಂದು ಕೇಳಿತಂತೆ.


ಆನೆ ಹೋಗುವಾಗ ನಾಯಿ ಬೊಗಳಿದರೆ ಏನೂ ಆಗುವುದಿಲ್ಲ- ಗೋವಿಂದ ಕಾರಜೋಳ, ಸಚಿವ
ಆದರೆ ಹೋಗುತ್ತಿರುವುದು ಆನೆಯಲ್ಲ, ಬೀದಿ ಕಳ್ಳರು.


ಮಾಜಿ ಪ್ರಧಾನಿ ದೇವೇಗೌಡರು ಇರುವವರೆಗೂ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ - ಎಚ್.ಡಿ.ರೇವಣ್ಣ, ಮಾಜಿ ಸಚಿವ
ದೇವೇಗೌಡರೇ ಇರುವಾಗ ಇತರರು ಯಾಕೆ?.


ಪಾಕ್ ಮತ್ತು ನ್ಯೂಝಿಲ್ಯಾಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ನಮ್ಮ ಆಟಗಾರರಲ್ಲಿ ದಿಟ್ಟತನದ ಕೊರತೆ ಕಾಡಿತು - ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ
ಪ್ರಧಾನಿ ಮೋದಿಯವರನ್ನೇ ತಂಡಕ್ಕೆ ಸೇರಿಸಿದರೆ ಹೇಗೆ?


ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಎಂಬ ಬಿರುಗಾಳಿ ಎದ್ದಿದೆ - ಅಜಯ್‌ಕುಮಾರ್ ಲಲ್ಲು, ಉ.ಪ್ರ. ಕಾಂಗ್ರೆಸ್ ಅಧ್ಯಕ್ಷ
ಬಿರುಗಾಳಿ ಎದ್ದಿರುವುದು ಕಾಂಗ್ರೆಸ್‌ನ ಒಳಗೆ ಎಂಬ ವದಂತಿಯಿದೆ.


ಕನ್ನಡ ಭಾಷೆಯ ಉಳಿವಿಗಾಗಿ ದೊಡ್ಡ ಚಳವಳಿಯೇ ಆಗಬೇಕು - ಅರುಣ್ ಕುಮಾರ್, ಬಿಜೆಪಿ ರಾಜ್ಯ ಪ್ರ.ಕಾರ್ಯದರ್ಶಿ
ರಾಜ್ಯ ಬಿಜೆಪಿ ನಾಯಕರು ಉತ್ತರ ಭಾರತದ ನಾಯಕರ ಗುಲಾಮರಂತೆ ವರ್ತಿಸದೆ ಇದ್ದರೆ ಸಾಕು, ಕನ್ನಡ ಉಳಿಯುತ್ತದೆ.


ನಾವು ಪರಿಪೂರ್ಣತೆ ಸಾಧಿಸದಿದ್ದಲ್ಲಿ ನಮ್ಮಲ್ಲಿ ಅಸಹನೆ ತಲೆದೋರುತ್ತದೆ - ರವಿಶಂಕರ್ ಗುರೂಜಿ, ಆರ್ಟ್ಸ್ ಆಫ್ ಲಿವಿಂಗ್ ಸಂಸ್ಥಾಪಕ
ನೀವು ಆಗಾಗ ಪ್ರದರ್ಶಿಸುವ ಅಸಹನೆಯ ಕಾರಣ ತಿಳಿಯಿತು.


ಗೋವಾದಲ್ಲಿ ಕ್ಯಾಸಿನೋಗೆ ವಿರೋಧವಿಲ್ಲ, ಅದನ್ನು ಇಲ್ಲಿಗೆ ತಂದರೆ ಯಾಕೆ ವಿರೋಧ - ಶಿವರಾಮ ಹೆಬ್ಬಾರ್, ಸಚಿವ
ವಿಧಾನಸೌಧದೊಳಗೆ ಮಾತ್ರ ಬೇಡ.


ನಾನು ಫೇಸ್‌ಬುಕ್‌ನಲ್ಲಿ ಮುಕ್ತವಾಗಿ ಬರೆಯಲು ನನ್ನ ಸ್ವಾತಂತ್ರ್ಯವನ್ನು ಬಳಸಿದಾಗ ಫೇಸ್‌ಬುಕ್ ನನ್ನನ್ನೂ ನಿಷೇಧಿಸುತ್ತದೆ - ತಸ್ಲೀಮಾ ನಸ್ರೀನ್, ವಿವಾದಿತ ಲೇಖಕಿ
ನಿಷೇಧಿಸಿದರೆ ತಾನೇ ಸುದ್ದಿಯಲ್ಲಿರಲು ಸಾಧ್ಯ.


ಬಿಜೆಪಿ ಸರಕಾರದ ಅವಧಿ ಮುಗಿಯುವುದರೊಳಗೆ ನಾಯಕ ಜನಾಂಗಕ್ಕೆ 7.5 ಮೀಸಲಾತಿ ಕೊಡಿಸಿಯೇ ತೀರುತ್ತೇನೆ - ಶ್ರೀರಾಮುಲು, ಸಚಿವ
ಅದಕ್ಕೆ ಮೊದಲು ನಿಮ್ಮ ಅವಧಿ ಮುಗಿದರೆ?


ಹಾನಗಲ್‌ನಲ್ಲಿ ಬಿಜೆಪಿ ಸೋಲು ಸಿಎಂ ಬೊಮ್ಮಾಯಿಯ ಹಿನ್ನಡೆಯಲ್ಲ - ನಳಿನ್ ಕುಮಾರ್ ಕಟೀಲು, ಸಂಸದ
ಪೆಟ್ರೋಲ್, ಡೀಸೆಲ್ ಹಿನ್ನಡೆ ಆಗಿರಬಹುದೇ?


ರೈತರು ರಸ್ತೆಯಲ್ಲಿ ನಿಂತು ಹೋರಾಟ ಮಾಡುವುದರಿಂದ ಯಾವುದೇ ಸಮಸ್ಯೆ ಬಗೆಹರಿಯದು - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಸಂಸತ್ತಿಗೆ ನುಗ್ಗಲು ಸಲಹೆಯೇ?


ಉಪಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್‌ನಷ್ಟು ಹಣ ಖರ್ಚು ಮಾಡಲು ನಮಗೆ ಸಾಧ್ಯವಾಗಿಲ್ಲ ಹಾಗಾಗಿ ಸೋತಿದ್ದೇವೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಕೇಳಿದಷ್ಟು ಹಣವನ್ನು ಬಿಜೆಪಿ ನಿಮಗೆ ಕೊಟ್ಟಿಲ್ಲವೇ?


ಇಂದು ನನಗೆ ಬಂದ ಪರಿಸ್ಥಿತಿ ಬೇರೆ ಯಾವ ಕಾಂಗೆಸ್‌ನ ಹಿರಿಯ ನಾಯಕರಿಗೂ ಬಾರದಿರಲಿ- ಅಮರಿಂದರ್ ಸಿಂಗ್, ಪಂಜಾಬ್ ಮಾಜಿ ಮುಖ್ಯಮಂತ್ರಿ
ಕಾಂಗ್ರೆಸ್‌ನೊಳಗಿರುವ ಯುವಕರಿಗೆ ಬಂದರೆ ಪರವಾಗಿಲ್ಲವೇ?


ಮಾಜಿ ಸಿಎಂ ಯಡಿಯೂರಪ್ಪರನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ - ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ
ಸೀಡಿಗಳು ಇರುವಾಗ ಕಟ್ಟಿ ಹಾಕುವ ಅಗತ್ಯ ಏನು ಬಂತು?


ನಾವು ನಮ್ಮತನವನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಭಾರತ ಎತ್ತರಕ್ಕೆ ಏರಲೇ ಇಲ್ಲ - ಡಾ.ಪ್ರಭಾಕರ ಭಟ್ ಕಲ್ಲಡ್ಕ, ಆರೆಸ್ಸೆಸ್ ನಾಯಕ
ಕಳೆದ ಒಂದು ದಶಕದಲ್ಲಿ ಭಾರತ ಪಾತಾಳಕ್ಕೆ ಇಳಿಯುವುದಕ್ಕೂ ಒಂದು ಕಾರಣ ಕೊಡಿ.


ಮುಸ್ಲಿಮರ ಮತಗಳನ್ನು ಪಡೆಯಲು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತಾಂತರವಾಗಲೂ ಸಿದ್ಧರಿದ್ದಾರೆ- ಆನಂದ್ ಸ್ವರೂಪ್ ಶುಕ್ಲಾ, ಉ.ಪ್ರದೇಶ ಸಚಿವ
ಅಂಬೇಡ್ಕರ್ ಮತಾಂತರವಾಗಲು ಏನು ಕಾರಣ ಇರಬಹುದು?


ರಾಜಕಾರಣವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಪ್ರಧಾನಿ ಮೋದಿ ಮತ್ತಷ್ಟು ಬಲಶಾಲಿಯಾಗಲಿದ್ದಾರೆ - ಮಮತಾ ಬ್ಯಾನರ್ಜಿ, ಪ.ಬಂಗಾಳ ಮುಖ್ಯಮಂತ್ರಿ

ಕಾಂಗ್ರೆಸನ್ನು ಜನರು ಗಂಭೀರವಾಗಿ ಸ್ವೀಕರಿಸ ಬೇಡವೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!