ಉಡುಪಿ: ಕೊರೋನ ಸೋಂಕಿಗೆ ಮತ್ತಿಬ್ಬರು ಬಲಿ; ಕೋವಿಡ್‌ಗೆ 69 ಮಂದಿ ಪಾಸಿಟಿವ್

Update: 2022-02-16 15:22 GMT
ಉಡುಪಿ: ಕೊರೋನ ಸೋಂಕಿಗೆ ಮತ್ತಿಬ್ಬರು ಬಲಿ; ಕೋವಿಡ್‌ಗೆ 69 ಮಂದಿ ಪಾಸಿಟಿವ್
  • whatsapp icon

ಉಡುಪಿ, ಫೆ.16: ಜಿಲ್ಲೆಯಲ್ಲಿ ಬುಧವಾರ ಸಹ ಇಬ್ಬರು ಹಿರಿಯ ನಾಗರಿಕರು ಕೋವಿಡ್‌ಗೆ ಬಲಿಯಾಗಿದ್ದಾರೆ. ದಿನದಲ್ಲಿ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ 69 ಆಗಿದೆ. 261 ಮಂದಿ ಸೋಂಕಿನಿಂದ ಚೇತರಿಸಿ ಕೊಂಡಿದ್ದರೆ, ಸದ್ಯ ಚಿಕಿತ್ಸೆಯಲ್ಲಿರುವವರ ಸಂಖ್ಯೆ 378ಕ್ಕೆ ಇಳಿದಿದೆ.

ಕುಂದಾಪುರದ 89 ವರ್ಷ ಪ್ರಾಯದ ಮಹಿಳೆ ಹಾಗೂ ಉಡುಪಿಯ 85ವರ್ಷ ಪ್ರಾಯದ ವೃದ್ಧರು ಕೋವಿಡ್‌ಗೆ ಬಲಿಯಾಗಿದ್ದು, ಇವರಿಬ್ಬರು ಕ್ರಮವಾಗಿ ಫೆ.11 ಹಾಗೂ ಫೆ.13ರಂದು ಸೋಂಕಿನ ಕಾರಣದಿಂದ ಅವರವರ ಮನೆಗಳಲ್ಲಿ ಮೃತ ಪಟ್ಟಿದ್ದರು. ಇಬ್ಬರು ತೀವ್ರವಾದ ಕೋವಿಡ್ ರೋಗದ ಗುಣಲಕ್ಷಣಗಳಿಂದ ನರಳುತಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 538ಕ್ಕೇರಿದೆ.

ಇಂದು ಪಾಸಿಟಿವ್ ಬಂದ 69 ಮಂದಿಯಲ್ಲಿ 33 ಮಂದಿ ಪುರುಷರು ಹಾಗೂ 36 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 42 ಮಂದಿ ಉಡುಪಿ ತಾಲೂಕಿಗೆ, 12 ಮಂದಿ ಕುಂದಾಪುರ ಹಾಗೂ 11 ಮಂದಿ ಕಾರ್ಕಳ ತಾಲೂಕಿಗೆ ಸೇರಿದವರು. ಉಳಿದ ನಾಲ್ವರು ಹೊರಜಿಲ್ಲೆಯವರು. ಪಾಸಿಟಿವ್ ಬಂದವರಲ್ಲಿ 57 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆಯುವವರ ಸಂಖ್ಯೆ ಈಗ 43ಕ್ಕಿಳಿದಿದೆ.

ಮಂಗಳವಾರ 261 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 17908ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1839 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,184ಕ್ಕೇರಿದೆ.

5521 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 5521 ಮಂದಿ ಕೋವಿಡ್‌ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 770 ಮಂದಿ 60 ವರ್ಷ ಮೇಲಿನ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 869 ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ.

ಉಳಿದಂತೆ 1609 ಮಂದಿ ಮೊದಲ ಡೋಸ್ ಹಾಗೂ 2843 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15ರಿಂದ 18 ವರ್ಷದೊಳಗಿನವರಲ್ಲಿ 17 ಮಂದಿ ಮೊದಲ ಡೋಸ್ ಹಾಗೂ 1201 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News