ಕಕ್ಕುಂಜೆ ವಾರ್ಡ್ ಮಟ್ಟದ ಮಾಹಿತಿ ಕಾರ್ಯಾಗಾರ

Update: 2022-02-20 13:12 GMT

ಬ್ರಹ್ಮಾವರ, ಫೆ.20: ಆವರ್ಸೆ ‘ಸಿದ್ದಿವಿನಾಯಕ’ ಸಂಜೀವಿನಿ ಒಕ್ಕೂಟದ ವತಿಯಿಂದ ಆವರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಕ್ಕುಂಜೆ ವಾರ್ಡ್ ಮಟ್ಟದ ಮಾಹಿತಿ ಕಾರ್ಯಾಗಾರವನ್ನು ರವಿವಾರ ಆಯೋಜಿಸಲಾಗಿತ್ತು.

ಕಾರ್ಯಾಗಾರವನ್ನು ಉದ್ಘಾಟಿಸಿದ ಎನ್‌ಆರ್‌ಎಲ್ಎಂ ಜಿಲ್ಲಾ ಕಾರ್ಯ ಕ್ರಮ ವ್ಯಸ್ಥಾಪಕ ಪ್ರಭಾಕರ ಆಚಾರ್ ಮಾತನಾಡಿ, ಸಂಜೀವಿನಿ ಹಾಗೂ ಸ್ತ್ರೀಶಕ್ತಿ ಮತ್ತು ಇತರೆ ಸಂಘದ ಸದಸ್ಯತ್ವ ಹೊಂದಿರುವ ಮಹಿಳೆಯರ ಭಿನ್ನಾಭಿಪ್ರಾಯ ವನ್ನು ಸರಿದೂಗಿಸಲು ಸಂಜೀವಿನಿ ಸಂಘ ಮಹತ್ವದ್ದಾಗಿದೆ. ಮುಂದೊಂದು ದಿನ ಸಂಜೀವಿನಿ ಒಕ್ಕೂಟ ಮಹಿಳಾ ಬ್ಯಾಂಕ್ ಆಗಿ ಪರಿವರ್ತನೆ ಆದಾಗ ಸಂಘದ ಸದಸ್ಯತ್ವಕ್ಕಾಗಿ ಇಡೀ ಪಂಚಾಯತ್ ಪ್ರತಿಯೊಬ್ಬ ಮಹಿಳೆಯರು ಮುಂದೆ ಬರುದರಲ್ಲಿ ಸಂಶಯವಿಲ್ಲ. ಸಂಜೀವಿನಿ ಅಭಿಯಾನ ವಾರ್ಡ್ ಮಟ್ಟದಿಂದ ಪ್ರಾರಂಭಿಸಿ ದೇಶದಾದ್ಯಂತ ಪಸರಿಸಲು ತಮ್ಮ ಆಸಕ್ತಿ ಪರಿಶ್ರಮದಿಂದ ಮಾತ್ರ ಮಹಿಳಾ ಬಲವರ್ಧನೆ ಸಾಧ್ಯ ಎಂದರು.

ಮುಖ್ಯ ಅಥಿತಿಯಾಗಿ ಆವರ್ಸೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೀತಾರಾಮ್ ಆಚಾರ್ಯ ಮಾತನಾಡಿದರು. ಅಧ್ಯಕ್ಷತೆಯನ್ನು ‘ಸಿದ್ದಿವಿನಾಯಕ’ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಗುಲಾಬಿ ವಹಿಸಿದ್ದರು. ಒಕ್ಕೂಟದ ಕಾರ್ಯದರ್ಶಿ ವಿನೋದಾ ಹೈಕಾಡಿ, ಕೋಶಾಧಿಕಾರಿ ಅಶ್ವಿನಿ ಉಪಸ್ಥಿತರಿದ್ದರು ಮುಖ್ಯ ಪುಸ್ತಕ ಬರಹಗಾರರದ ನಾಗರತ್ನ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ರುಕ್ಮಿಣಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News